
ಬೆಂಗಳೂರು, ಜುಲೈ 4: ಭಾರತದ ಮೊದಲ ಸಂಪೂರ್ಣ ಯುಪಿಐ ಆಧಾರಿತ ಬ್ಯಾಂಕ್ ಶಾಖೆಯನ್ನು (UPI Powered Bank Branch) ಬೆಂಗಳೂರಿನ ಕೋರಮಂಗಲದಲ್ಲಿ (Koramangala) ಫಿನ್‌ಟೆಕ್ ಸಂಸ್ಥೆ ಸ್ಲೈಸ್ ಆರಂಭಿಸಿದೆ. ಯುಪಿಐ ಇಂಟಿಗ್ರೇಟೆಡ್ ಎಟಿಎಂ, ಇನ್ಸ್ಟಾಂಟ್ ಅಕೌಂಟ್ ಓಪನಿಂಗ್, ನಗದು ವಹಿವಾಟು ಸೇರಿದಂತೆ ಸಂಪೂರ್ಣ ಡಿಜಿಟಲ್ ಬ್ಯಾಂಕಿಂಗ್ ಅನುಭವ ಇಲ್ಲಿ ಸಿಗಲಿದೆ. ಅಂದಹಾಗೆ, ಈ ಬ್ರ್ಯಾಂಚ್ನಲ್ಲಿ ವಹಿವಾಟು ನಡೆಸಲು ಡೆಬಿಟ್ ಕಾರ್ಡ್ ಸಹ ಬೇಕಾಗಿಲ್ಲ. ಯುಪಿಐ ಇದ್ದರೆ ಸಾಕು.
ಕೋರಮಂಗಲದ 80 ಅಡಿ ರಸ್ತೆಯಲ್ಲಿರುವ ಈ ಶಾಖೆಯು ಕಾರ್ಡ್‌ಗಳ ಬದಲಿಗೆ ಯುಪಿಐ ಆ್ಯಪ್ ಬಳಸಿ ಹಣವನ್ನು ಠೇವಣಿ ಇಡಲು ಮತ್ತು ಹಿಂಪಡೆಯಲು ಅನುವು ಮಾಡಿಕೊಡುತ್ತದೆ. ಈ ವ್ಯವಸ್ಥೆಯು ಡಿಜಿಟಲ್ ಕಿಯೋಸ್ಕ್‌ಗಳನ್ನು ಒಳಗೊಂಡಿದೆ. ಗ್ರಾಹಕರು ಟ್ಯಾಬ್ಲೆಟ್‌ಗಳನ್ನು ಬಳಸಿಕೊಂಡು ಉಳಿತಾಯ ಖಾತೆಗಳನ್ನು ತೆರೆಯಬಹುದಾಗಿದೆ. ಶಾಖೆಯ ಆವರಣದೊಳಗೆ ಗ್ರಾಹಕರಿಗೆ ಮಾರ್ಗದರ್ಶನ ನೀಡಲು ಸಹಾಯ ಮಾಡುವ ರೋಬೋಟ್ ಸಹ ಇದೆ.
ಶಾಖೆಯ ರೋಬೋಟ್ ಸಹಾಯಕ ಮತ್ತು ಯುಪಿಐ ಆಧಾರಿತ ಬ್ಯಾಂಕಿಂಗ್ ಪ್ರಕ್ರಿಯೆಗಳನ್ನು ತೋರಿಸುವ ವೀಡಿಯೊ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
A full-blown UPI bank branch just dropped in @peakbengaluru. No debit cards, no forms, just scan and deposit/withdraw cash with UPI ATMs and of course, there’s a robot!!
Koramangala 80 Feet Road regulars know this building’s legacy in shaping our startup ecosystem 🦄 pic.twitter.com/l6xULTD52T
— Peak Bengaluru (@peakbengaluru) July 3, 2025
ಪ್ರಾಯೋಗಿಕವಾಗಿ ಈ ಯುಪಿಐ ಆಧಾರಿತ ಹೊಸ ಶಾಖೆಯನ್ನು ಆರಂಭಿಸಲಾಗಿದೆ. ಶಾಖೆಗೆ ಭೇಟಿ ನೀಡುವ ಗ್ರಾಹಕರು ಕನಿಷ್ಠ ಮಾನವ ಸಂವಹನ ಮತ್ತು ಪೂರ್ಣ ಪ್ರಮಾಣದಲ್ಲಿ ಯುಪಿಐ ನೆರವಿನೊಂದಿಗೆ ನಗದು ಠೇವಣಿ ಇರಿಸುವಿಕೆ, ಹಿಂಪಡೆಯುವಿಕೆ ಮತ್ತು ಖಾತೆ ಸೆಟಪ್‌ನಂತಹ ಮೂಲಭೂತ ಬ್ಯಾಂಕಿಂಗ್ ಸೌಕರ್ಯಗಳನ್ನು ಪಡೆಯಬಹುದಾಗಿದೆ ಎಂದು ಸ್ಲೈಸ್ ತಿಳಿಸಿದೆ.
ಹೊಸ ಮಾದರಿಯ ಬ್ಯಾಂಕ್ ಶಾಖೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಕಾರಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಹಲವಾರು ಬಳಕೆದಾರರು ಯುಪಿಐ ಆಧಾರಿತ ಸೆಟಪ್‌ನ ಅನುಕೂಲತೆ ಮತ್ತು ವೇಗದ ಬ್ಯಾಂಕಿಂಗ್ ಸೇವೆಯನ್ನು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಬ್ಯಾಂಕ್ನ ಡ್ರಾಫ್ಟ್ ಬಾಕ್ಸ್ನಲ್ಲಿದ್ದ ಚೆಕ್ಗಳು ಮಂಗಮಾಯ: ಕದ್ದ ಚೆಕ್ ಏನು ಮಾಡ್ತಾರೆ ಗೊತ್ತಾ? ನಿಜಕ್ಕೂ ಶಾಕ್ ಆಗ್ತೀರಾ
ಯುಪಿಐ-ಲಿಂಕ್ಡ್ ಕ್ರೆಡಿಟ್ ಕಾರ್ಡ್ ಅನ್ನು ಸಹ ಬಿಡುಗಡೆ ಮಾಡಿರುವುದಾಗಿ ಸ್ಲೈಸ್ ತಿಳಿಸಿದ್ದು, ಇದು ಯಾವುದೇ ವಾರ್ಷಿಕ ಅಥವಾ ಸೇರ್ಪಡೆ ಶುಲ್ಕವಿಲ್ಲದೆ ಗ್ರಾಹಕರಿಗೆ ದೊರೆಯಲಿದೆ ಎಂದಿದೆ. ಕಾರ್ಡ್ ಖರೀದಿ ಮೇಲೆ ಶೇ 3 ವರೆಗೆ ಕ್ಯಾಶ್‌ಬ್ಯಾಕ್ ಮತ್ತು ಪಾವತಿಗಳನ್ನು 3 ಬಡ್ಡಿ-ಮುಕ್ತ ಇಎಂಐಗಳಾಗಿ ಮಾಡಿಕೊಡುವ ‘ಸ್ಲೈಸ್ ಇನ್ 3’ ಸೌಲಭ್ಯ ಕೂಡ ನೀಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.