AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sivasri Skandaprasad: ‘ಮ್ಯಾನ್ ಆಫ್ ಸ್ಟೀಲ್’: ಪತಿ, ಸಂಸದ ತೇಜಸ್ವಿ ಸೂರ್ಯ ಸಾಧನೆಗೆ ಪತ್ನಿ ಶಿವಶ್ರೀ ಹೇಳಿದ್ದೇನು?

ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸತತ 2ನೇ ವರ್ಷ ಗೋವಾದಲ್ಲಿ ನಡೆದ ಐರನ್‌ಮ್ಯಾನ್ 70.3 ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಬಾರಿ 40 ನಿಮಿಷ ವೇಗವಾಗಿ, 7 ಗಂಟೆ 49 ನಿಮಿಷಗಳಲ್ಲಿ ಗುರಿ ತಲುಪಿದ್ದಾರೆ. ಪತಿಯ ಈ ಸಾಧನೆ ಬಗ್ಗೆ ಶಿವಶ್ರೀ ಸ್ಕಂದಪ್ರಸಾದ್​ ಸಂತಸ ವ್ಯಕ್ತಪಡಿಸಿದ್ದಾರೆ. 'ಮ್ಯಾನ್ ಆಫ್ ಸ್ಟೀಲ್' ಎಂದು ಹಾಡಿ ಹೊಗಳಿದ್ದಾರೆ.

Sivasri Skandaprasad: 'ಮ್ಯಾನ್ ಆಫ್ ಸ್ಟೀಲ್': ಪತಿ, ಸಂಸದ ತೇಜಸ್ವಿ ಸೂರ್ಯ ಸಾಧನೆಗೆ ಪತ್ನಿ ಶಿವಶ್ರೀ ಹೇಳಿದ್ದೇನು?
ಸಂಸದ ತೇಜಸ್ವಿ ಸೂರ್ಯ ಮತ್ತು ಪತ್ನಿ ಶಿವಶ್ರೀ ಸ್ಕಂದಪ್ರಸಾದ್​
ಪ್ರಸನ್ನ ಹೆಗಡೆ
| Edited By: |

Updated on:Nov 11, 2025 | 11:50 AM

Share

ಬೆಂಗಳೂರು, ನವೆಂಬರ್​ 11: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ಸತತ 2ನೇ ವರ್ಷವೂ ಗೋವಾದಲ್ಲಿ ನಡೆದ ಐರನ್‌ಮ್ಯಾನ್ 70.3 ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಬಗ್ಗೆ ಅವರ ಪತ್ನಿ ಶಿವಶ್ರೀ ಸ್ಕಂದಪ್ರಸಾದ್​ ಪತಿಯನ್ನ ಹಾಡಿ ಹೊಗಳಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿರುವ ಅವರು, ಎರಡನೇ ಬಾರಿ ಐರನ್‌ಮ್ಯಾನ್ 70.3 ಯಶಸ್ವಿಯಾಗಿ ಪೂರ್ಣಗೊಳಿಸಿದಕ್ಕೆ ‘ಮ್ಯಾನ್ ಆಫ್ ಸ್ಟೀಲ್’ ನನ್ನ ಪತಿ ತೇಜಸ್ವಿ ಸೂರ್ಯ ಅವರಿಗೆ ಅಭಿನಂದನೆಗಳು. ಹಿಂದಿನ ಬಾರಿ ಹೋಲಿಸಿದರೆ 40 ನಿಮಿಷ ಕಡಿಮೆ ಸಮಯದಲ್ಲಿ ಗುರಿಯನ್ನ ಪೂರ್ಣಗೊಳಿಸಿದ್ದೀರಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಶಿವಶ್ರೀ ಸ್ಕಂದಪ್ರಸಾದ್​ ಪೋಸ್ಟ್​ನಲ್ಲಿ ಏನಿದೆ?

ನನ್ನ ವೈಯಕ್ತಿಕ ಕೋಚ್ ಮತ್ತು ಮುಖ್ಯ ಪ್ರೇರಣಾದಾಯಕರಾಗಿ ನನ್ನ ಐರನ್‌ಮ್ಯಾನ್ ಸರಣಿಯನ್ನು ಮುಂದುವರಿಸಲು ನೀವು ನೆರವಾಗಿದ್ದಕ್ಕೆ ಧನ್ಯವಾದಗಳು. ನಾನು ಈಗ ಮಾಡುತ್ತಿರುವ ಕೆಲಸಗಳಿಗೆ ಯಾರೂ ನನಗೆ ಪ್ರೇರಣೆ ನೀಡಲಾರರು. ನೀವು ನನಗೆ ದೊರೆತ ಅತ್ಯುತ್ತಮ ವ್ಯಕ್ತಿ. ನೀವು ಯಾವಾಗಲೂ ನನ್ನ ಬೆನ್ನಿನ ಹಿಂದೆ ಬೆಂಬಲವಾಗಿ ಇದ್ದೀರಿ ಎಂಬುದು ನನಗೆ ಗೊತ್ತಿದೆ ಎಂದು ಶಿವಶ್ರೀ ಸ್ಕಂದಪ್ರಸಾದ್​ ತಮ್ಮ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.  ಶಿವಶ್ರೀ ಸ್ಕಂದಪ್ರಸಾದ್​ ಅವರು ಕೂಡ ಐರನ್‌ಮ್ಯಾನ್ 70.3ರಲ್ಲಿ ಭಾಗಿಯಾಗಿದ್ದು, 90 ಕಿ.ಮೀ. ಸೈಕ್ಲಿಂಗ್​ ಮಾಡಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಅಣ್ಣಾಮಲೈ, ತೇಜಸ್ವಿ ಸೂರ್ಯ ಸಾಧನೆ, ಯುವ ನಾಯಕರನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ

ಸಂಸದ ಸೂರ್ಯ ಅವರು ಸ್ಪರ್ಧೆಯ ಮೂರು ಕಠಿಣ ಹಂತಗಳಾದ 1.9 ಕಿ.ಮೀ ಈಜು, 90 ಕಿ.ಮೀ ಸೈಕ್ಲಿಂಗ್, ಮತ್ತು 21.1 ಕಿ.ಮೀ ಓಟವನ್ನು 7 ಗಂಟೆ 49 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದರು. ಈಜಲು ಸುಮಾರು 44 ನಿಮಿಷ, ಸೈಕ್ಲಿಂಗ್‌ಗೆ 3 ಗಂಟೆ 47 ನಿಮಿಷ ಮತ್ತು ಓಟಕ್ಕೆ 2 ಗಂಟೆ 54 ನಿಮಿಷಗಳನ್ನು ತೆಗೆದುಕೊಂಡಿದ್ದರು. ಇವರಿಗೆ ಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಕೂಡ ಸಾಥ್​ ನೀಡಿದ್ದು, ಅವರು ಈ ಸ್ಪರ್ಧೆಯನ್ನು 8 ಗಂಟೆ 13 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದರು. ಇವರ ಈ ಶಾಧನೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಸಂತಸ ವ್ಯಕ್ತಪಡಿಸಿದ್ದರು.ಗೋವಾದಲ್ಲಿ ನಡೆದ ಐರನ್‌ಮ್ಯಾನ್ 70.3 ಓಟದಲ್ಲಿ ನಮ್ಮ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದನ್ನು ನೋಡಿ ಸಂತೋಷವಾಯಿತು. ಇಂತಹ ಕಾರ್ಯಕ್ರಮಗಳು #FitIndia ಆಂದೋಲನಕ್ಕೆ ಕೊಡುಗೆ. ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು. ಈ ಐರನ್‌ಮ್ಯಾನ್ ಓಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಲ್ಲಿ ನಮ್ಮ ಪಕ್ಷದ ಯುವ ಸಹೋದ್ಯೋಗಿಗಳಾದ ಅಣ್ಣಾಮಲೈ ಮತ್ತು ತೇಜಸ್ವಿ ಸೂರ್ಯ ಸೇರಿದ್ದಾರೆ ಎನ್ನುವುದು ಸಂತೋಷ ಎಂದಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:07 am, Tue, 11 November 25