ಸೆಟಲ್ಮೆಂಟ್ ಅಡ್ಡೆಯಾಗಿತ್ತಾ ರೇಣುಕಾ ಸ್ವಾಮಿ ಮೇಲೆ ಹಂತಕರು ಹಲ್ಲೆ ನಡೆಸಿ ಕೊಂದ ಸ್ಪಾಟ್?
ದರ್ಶನ್(Darshan Thoogudeepa) ಹಾಗೂ ಆತನ ಸಹಚರರು ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಚಿತ್ರದುರ್ಗದ ರೇಣುಕಾ ಸ್ವಾಮಿ ಮೇಲೆ ಹಂತಕರು ಹಲ್ಲೆ ನಡೆಸಿ ಕೊಂದ ಜಾಗ ಆರ್ಆರ್ ನಗರ(RR Nagar) ಸೇರಿದಂತೆ ಸುತ್ತಮುತ್ತಲಿನ ಏರಿಯಾಗಳಲ್ಲಿ ಇದೊಂದು ಸೆಟಲ್ಮೆಂಟ್ ಅಡ್ಡೆಯಾಗಿತ್ತು ಎನ್ನಲಾಗುತ್ತಿದೆ.
ಬೆಂಗಳೂರು, ಜೂ.12: ನಟ ದರ್ಶನ್(Darshan Thoogudeepa) ಅವರ ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಎನ್ನುವ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿ(Renuka Swamy) ಎಂಬುವವರನ್ನು ದರ್ಶನ್ ಹಾಗೂ ಆತನ ಸಹಚರರು ಕೊಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೃತ ರೇಣುಕಾ ಸ್ವಾಮಿ ಮೇಲೆ ಹಂತಕರು ಹಲ್ಲೆ ನಡೆಸಿ ಕೊಂದ ಜಾಗ ಆರ್ಆರ್ ನಗರ(RR Nagar) ಸೇರಿದಂತೆ ಸುತ್ತಮುತ್ತಲಿನ ಏರಿಯಾಗಳಲ್ಲಿ ಇದೊಂದು ಸೆಟಲ್ಮೆಂಟ್ ಅಡ್ಡೆಯಾಗಿತ್ತು ಎನ್ನಲಾಗುತ್ತಿದೆ.
ಹೌದು, ಪ್ರೈವೇಟ್ ಫೈನಾನ್ಸ್ಗಳಿಗೆ ಇಎಂಐ ಪೇ ಮಾಡದ ವಾಹನಗಳನ್ನು ಸೀಜ್ ಮಾಡಿ ತಂದು ನಿಲ್ಲಿಸುವ ವೆಹಿಕಲ್ ಶೆಡ್ ಇದಾಗಿದ್ದು, ಬೆದರಿಕೆ ಒಡ್ಡಲು, ವ್ಯಕ್ತಿಗಳನ್ನು ಕರೆತಂದು ಹಲ್ಲೆ ನಡೆಸಲು ಇದೇ ಶೆಡ್ನಲ್ಲಿ ಕೂಡಿ ಹಾಕುತ್ತಿದ್ದರು ಎನ್ನಲಾಗುತ್ತಿದೆ. ಫೈನಾನ್ಸ್ ವ್ಯವಹಾರದಲ್ಲಿ ಹಣ ಪಡೆದು ಕೊಡದೆ ಇದ್ದವರನ್ನು ಇಲ್ಲಿಗೆ ಕರೆತಂದು ಬೆದರಿಸುವ ಜಾಗವಾಗಿತ್ತು. ಹಲ್ಲೆ ನಡೆಸಲು ಅವಶ್ಯಕವಾದ ಬ್ಯಾಟ್, ಸ್ಟಿಕ್, ರಾಡ್, ದೊಣ್ಣೆ ಇನ್ನಿತರ ಮಾರಕಾಸ್ತ್ರಗಳನ್ನು ಖಾಯಂ ಆಗಿಯೇ ಇಲ್ಲಿಯೇ ಇಟ್ಟಿರುತ್ತಾರೆ.
ಇದನ್ನೂ ಓದಿ:ರೇಣುಕಾ ಸ್ವಾಮಿ ಕೊಲೆಯಾದ ಶೆಡ್ ಮಾಲೀಕ ಹೇಳಿದ್ದು ಹೀಗೆ
ಸಂಜೆಯಾಗುತ್ತಿದ್ದಂತೆ ನಿಶ್ಯಬ್ದವಾಗಿ ವಿರಳ ಜನಸಂಖ್ಯೆಯಿಂದ ಕೂಡಿರುವ ಈ ಪ್ರದೇಶದಲ್ಲಿ ವ್ಯಕ್ತಿಗಳನ್ನು ಕರೆದುಕೊಂಡು ಬಂದು ಬೆದರಿಕೆ ಹಾಕಿ, ಹಲ್ಲೆ ನಡೆಸುವ ಕ್ರಿಮಿನಲ್ ಚಟುವಟಿಕೆಗಳು ಈ ಶೆಡ್ನಲ್ಲಿ ನಡೆಯುತ್ತಿರುವ ಕುರಿತು ಕೇಳಿಬಂದಿದೆ. ಇನ್ನು ಚಿತ್ರದುರ್ಗದ ನಿವಾಸಿ ಆಗಿದ್ದ ರೇಣುಕಾ ಸ್ವಾಮಿಯನ್ನು ಅಪಹರಣ ಮಾಡಿ, ಬೆಂಗಳೂರಿನ ಹೊರವಲಯದ ಶೆಡ್ಗೆ ತಂದು ಅಲ್ಲಿ ಆತನ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ. ಜೊತೆಗೆ ಘಟನೆ ಕುರಿತು ಆ ಶೆಡ್ನ ಮಾಲೀಕ ಉದ್ಯಮಿ ಪಟ್ಟಣಗೆರೆ ಜಯಣ್ಣ ಅವರ ಸಂಬಂಧಿ ಜೊತೆಗೆ ದರ್ಶನ್ ಆಪ್ತ ವಿನಯ್ನನ್ನು ಸಹ ಬಂಧನ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:53 pm, Wed, 12 June 24