AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ನೀಡುವುದಾಗಿ ಜೆಡಿಎಸ್‌ ಘೋಷಣೆ

ದೇವೇಗೌಡರು ಮಹಿಳಾ ಮೀಸಲಾತಿ ಬಗ್ಗೆ ಧ್ವನಿ ಎತ್ತಿದ್ರು. ಹೀಗಾಗಿ ನಾವು ಅವ್ರಿಗೆ ಬೆಂಬಲ ಕೊಡುತ್ತಿದ್ದೇವೆ‌. ದೇವೇಗೌಡರಿಗೆ ಮುರ್ಮು ಮನವಿ‌ ಮಾಡಿದ್ರು. ಬುಡಕಟ್ಟು ಜನಾಂಗದ ಮಹಿಳೆ ಅವ್ರು. ನಮ್ಮ ನಾಯಕರ ಬಳಿ ಬಂದು ಮತ ಕೇಳಿದ್ದಾರೆ.

ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ನೀಡುವುದಾಗಿ ಜೆಡಿಎಸ್‌ ಘೋಷಣೆ
ರಾಷ್ಟ್ರಪತಿ ದ್ರೌಪದಿ ಮುರ್ಮು
TV9 Web
| Edited By: |

Updated on: Jul 15, 2022 | 6:39 PM

Share

ಬೆಂಗಳೂರು: ರಾಷ್ಟ್ರಪತಿ ಚುನಾವಣೆಯ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ(Draupadi Murmur) ಬೆಂಬಲ ನೀಡಲು ಜೆಡಿಎಸ್‌(JDS) ನಿರ್ಧಾರ ಮಾಡಿದೆ ಎಂದು ಜೆಡಿಎಸ್ ಶಾಸಕಾಂಗ ಸಭೆ ನಂತರ ಬಂಡೆಪ್ಪ ಕಾಶಂಪುರ(Bandeppa Kashampur) ಹೇಳಿದ್ದಾರೆ. ಶಾಸಕಾಂಗ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಬಂಡೆಪ್ಪ ಕಾಶಂಪೂರ್, ರಾಷ್ಟ್ರಪತಿ ಚುನಾವಣೆ ಸಂಬಂಧ ಸಭೆ ಆಗಿದೆ. NDA ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ನೀಡಲು ನಿರ್ಧಾರ ಮಾಡಲಾಗಿದೆ ಎಂದರು.

ದೇವೇಗೌಡರು ಮಹಿಳಾ ಮೀಸಲಾತಿ ಬಗ್ಗೆ ಧ್ವನಿ ಎತ್ತಿದ್ರು. ಹೀಗಾಗಿ ನಾವು ಅವ್ರಿಗೆ ಬೆಂಬಲ ಕೊಡುತ್ತಿದ್ದೇವೆ‌. ದೇವೇಗೌಡರಿಗೆ ಮುರ್ಮು ಮನವಿ‌ ಮಾಡಿದ್ರು. ಬುಡಕಟ್ಟು ಜನಾಂಗದ ಮಹಿಳೆ ಅವ್ರು. ನಮ್ಮ ನಾಯಕರ ಬಳಿ ಬಂದು ಮತ ಕೇಳಿದ್ದಾರೆ. ಪಕ್ಷ ಯಾವುದು ಅಂತ ನೋಡದೆ ಮಹಿಳೆ, ಆದಿವಾಸಿ ಜನಾಂಗದ ಮಹಿಳೆ ಎಂದು ಅವ್ರಿಗೆ ಬೆಂಬಲ ನೀಡುತ್ತೇವೆ ಎಂದರು.

ಇದೇ ವೇಲೆ ಅವರು, ಸಿದ್ದರಾಮೋತ್ಸವ ಡಿಕೆ ಶಿವಕುಮಾರೋತ್ಸವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದ್ರೆ ಏನು ಮಾಡ್ತೀವಿ ಅಂತ ನಾವು ತೋರಿಸಿದ್ದೇವೆ. ನೀರಾವರಿ ವಿಚಾರದಲ್ಲಿ ನಮ್ಮ ಹೋರಾಟ ಇದೆ. ಆದ್ರೆ ಇವತ್ತು ನೀರು ಸಮುದ್ರ ಪಾಲಾಗ್ತಿದೆ. ನಾವು ಯಾವುದೇ ಉತ್ಸವ ಮಾಡೋದಿಲ್ಲ. ನಾವು ಜನರ ಉತ್ಸವ ಮಾಡಿದ್ದೇವೆ. ವೈಯಕ್ತಿಕ ಉತ್ಸವ ನಾವು ಮಾಡೊಲ್ಲ. ಜನರಿಗೆ ನಾವು ಏನು ಮಾಡ್ತೀವಿ ಅಂತ ಹೇಳಿ ಜನರ ಮುಂದೆ ಹೋಗ್ತೀವಿ ಎಂದು ಬಂಡೆಪ್ಪ ಕಾಶಂಪೂರ್ ಹೇಳಿದ್ರು.

ಸರ್ಕಾರ ಪಾರದರ್ಶಕವಾಗಿ ಇದ್ದರೆ ಭಯ ಯಾಕೆ?

ಸರ್ಕಾರಿ ಕಚೇರಿಯಲ್ಲಿ ಫೋಟೋ ನಿಷೇಧ ಮಾಡಿರುವ ಕುರಿತು ಮಾತನಾಡಿದ ಬಂಡೆಪ್ಪ ಕಾಶಂಪೂರ್, ನಾವು ಸರಿಯಾಗಿದ್ದರೆ ಫೋಟೋ ವಿಡಿಯೋಗೆ ಯಾಕೆ ಹೆದರಬೇಕು. ಹೀಗೆ ನಿಷೇಧ ಮಾಡಿದ್ರೆ 40% ಆರೋಪಕ್ಕೆ ಪುಷ್ಟಿ ನೀಡಿದಂತೆ ಆಗುತ್ತದೆ. ಸರ್ಕಾರ ಪಾರದರ್ಶಕವಾಗಿ ಇದ್ದರೆ ಭಯ ಯಾಕೆ? ಇದನ್ನ ಕೂಡಲೇ ಸರ್ಕಾರ ವಾಪಸ್ ಪಡೆಯಬೇಕು ಎಂದರು.