AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಮುಖಂಡೆ ಆಯೋಜಿಸಿದ್ದ ಆಷಾಢ ಮಾಸದ ಆದಿ ಶುಕ್ರವಾರದ ಪೂಜೆ ಕಾರ್ಯಕ್ರಮದಲ್ಲಿ ಪಲಾವ್​ಗಾಗಿ ಪೆಂಡಾಲ್ ಕಿತ್ತು ನುಗ್ಗಿದ ಮಹಿಳೆಯರು

ಕಾರ್ಯಕ್ರಮದಲ್ಲಿ ಮಹಿಳೆಯರು ಪಲಾವ್ಗಾಗಿ ಕಿತ್ತಾಡಿಕೊಂಡ ಘಟನೆ ನಡೆದಿದೆ. ಸರಿಯಾದ ಲೈನ್ ವ್ಯವಸ್ಥೆ ಇಲ್ಲದೆ ನೂರಾರು ಮಹಿಳೆಯರು ನೂಕುನುಗ್ಗಲಿನಲ್ಲಿ ಪಲಾವ್ಗಾಗಿ ಮುಗಿಬಿದ್ದಿದ್ದಾರೆ.

ಕಾಂಗ್ರೆಸ್ ಮುಖಂಡೆ ಆಯೋಜಿಸಿದ್ದ ಆಷಾಢ ಮಾಸದ ಆದಿ ಶುಕ್ರವಾರದ ಪೂಜೆ ಕಾರ್ಯಕ್ರಮದಲ್ಲಿ ಪಲಾವ್​ಗಾಗಿ ಪೆಂಡಾಲ್ ಕಿತ್ತು ನುಗ್ಗಿದ ಮಹಿಳೆಯರು
ಪಲಾವ್​ಗಾಗಿ ಪೆಂಡಾಲ್ ಕಿತ್ತು ನುಗ್ಗಿದ ಮಹಿಳೆಯರು
TV9 Web
| Updated By: ಆಯೇಷಾ ಬಾನು|

Updated on:Jul 15, 2022 | 5:38 PM

Share

ಬೆಂಗಳೂರು: ಆಷಾಢ ಮಾಸದ(Ashada Masa) ಆದಿ ಶುಕ್ರವಾರ ದಿನವಾದ ಇಂದು (ಜುಲೈ 15) ಟಿ.ದಾಸರಹಳ್ಳಿಯ ನೆಲೆಮಹೇಶ್ವರಮ್ಮ ದೇವಾಲಯದ ಆವರಣದಲ್ಲಿ ಗೊರವನಹಳ್ಳಿ ಮಹಾಲಕ್ಷ್ಮಿ ಹಾಗೂ ಚಾಮುಂಡೇಶ್ವರಿ ದೇವಿ ಅನುಷ್ಠಾನ ಮತ್ತು ದೀಪಾರಾಧನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಹಿಳೆಯರು ಪಲಾವ್ಗಾಗಿ ಕಿತ್ತಾಡಿಕೊಂಡ ಘಟನೆ ನಡೆದಿದೆ. ಸರಿಯಾದ ಲೈನ್ ವ್ಯವಸ್ಥೆ ಇಲ್ಲದೆ ನೂರಾರು ಮಹಿಳೆಯರು ನೂಕುನುಗ್ಗಲಿನಲ್ಲಿ ಪಲಾವ್ಗಾಗಿ ಮುಗಿಬಿದ್ದಿದ್ದಾರೆ. ಪಲಾವ್ಗಾಗಿ ಮಹಿಳೆಯರು ಪೆಂಡಾಲ್ ಕಿತ್ತು ಮುಗಿಬಿದ್ದಿದ್ದಾರೆ.

2023ರ ಚುನಾವಣೆಯಲ್ಲಿ ದಾಸರಹಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಲಕ್ಷ್ಮೀ ಪೂಜೆ ಹೆಸರಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ 2 ಸಾವಿರದ ಒಂದು ಹೆಂಗಳೆಯರು ಮಹಾಲಕ್ಷ್ಮಿ ಪೂಜಾ ವ್ರತದಲ್ಲಿ ಪಾಲ್ಗೊಂಡು ಮಂಗಳಾರತಿ ಮಾಡಿದರು. ಹಾಗೂ ಕಾಂಗ್ರೆಸ್ ಮುಖಂಡರಾದ ಗೀತಾ ಶಿವರಾಂ ಅವರು ಲಕ್ಷ್ಮೀ ದೇವಿಯ ಬೆಳ್ಳಿ ವಿಗ್ರಹ ವಿತರಣೆ ಮಾಡಿದ್ದಾರೆ. ಕಾರ್ಯಕ್ರಮ ಏರ್ಪಡಿಸಿದ್ದ ಕಾಂಗ್ರೆಸ್ ನಾಯಕಿ ಗೀತಾ ಶಿವರಾಂ ಮಾತನಾಡಿ ಗೊರವನಹಳ್ಳಿ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕ್ಷೇತ್ರಕ್ಕೆ ಹೋಗಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ ಹಾಗಾಗಿ ದಾಸರಹಳ್ಳಿ ಕ್ಷೇತ್ರಕ್ಕೆ ತಾಯಿ ಮಹಾಲಕ್ಷ್ಮಿ ಬರಮಾಡಿಕೊಂಡು ಸಾವಿರಾರು ಹೆಂಗಳೆಯರಿಂದ ಸಾಮೂಹಿಕ ಆರತಿ ಮಾಡಿಸುವ ಸಂಕಲ್ಪದಂತೆ ಇಂದಿನ ಕಾರ್ಯಕ್ರಮ ನಡೆದಿದೆ ಎಂದರು.

ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯಲು ಪ್ಲಾನ್ ಮಾಡಿಕೊಂಡಿರುವ ಗೀತಾ ಶಿವರಾಂ, ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಟ 5 ಕ್ಷೇತ್ರಗಳನ್ನು ಮಹಿಳೆಯರಿಗೆ ಮೀಸಲಿಡಲು ಕ್ರಮ ವಹಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಸದನದಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಹೇಳುವುದಲ್ಲ, ಕಾನೂನಾತ್ಮಕವಾಗಿ ಎಲ್ಲಾ ಕ್ಷೇತ್ರಗಳಲ್ಲಿರುವಂತೆ ವಿಧಾನಸಭೆ ಕ್ಷೇತ್ರಗಳಿಗೂ ಮಹಿಳಾ ಮೀಸಲಾತಿ ನೀಡಬೇಕೆಂದು ಕಾಂಗ್ರೆಸ್ ನಾಯಕಿ ಗೀತಾ ಶಿವರಾಂ ದಾಸರಹಳ್ಳಿಯಲ್ಲಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು ದೇವಿಗೆ ಸಾಮೂಹಿಕ ಆರತಿ ನೆರವೇರಿಸಿದರು. ಊಟಕ್ಕೆ ಸರಿಯಾದ ಲೈನ್ ವ್ಯವಸ್ಥೆ ಮಾಡದ ಅಯೋಜಕರಿಂದಾಗಿ ಪಲಾವ್ ಗಾಗಿ ಮುಗಿದು ಬಿದ್ದು ಸಾಕಷ್ಟು ಅವಾಂತರವೇ ಸೃಷ್ಟಿಯಾಗಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪೊಲೀಸರು ತಮಗೇನೂ ಸಂಬಂಧವಿಲ್ಲದಂತೆ ಮೂಕ ಪ್ರೇಕ್ಷಕರಾಗಿ ಕುಳಿತ್ತಿದ್ರು.

Published On - 5:21 pm, Fri, 15 July 22