ಶಿಕ್ಷಣ ಇಲಾಖೆ ವಿರುದ್ಧ ಸಿಡಿದೆದ್ದ ಕನ್ನಡಪರ ಸಂಘಟನೆಗಳು; ಉತ್ತರಾಖಂಡ ರಾಜ್ಯ ಪ್ರವಾಸಕ್ಕೆ ಕನ್ನಡ ಶಾಲೆಯ ಕನ್ನಡ ಮಕ್ಕಳನ್ನೆ ಆಯ್ಕೆ ಮಾಡಿ ಎಂದು ಆಗ್ರಹ
ಕೇಂದ್ರ ಸರ್ಕಾರದ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಒಂದು ಭಾರತ ಶ್ರೇಷ್ಠ ಭಾರತ ಕಾರ್ಯಕ್ರಮದಡಿ ಉತ್ತರಾಖಂಡ ರಾಜ್ಯಕ್ಕೆ ಪ್ರವಾಸ ಆಯೋಜಿಸಿದೆ. ಪ್ರೌಢಶಾಲೆ ಮತ್ತು ಪಿಯು ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು ರಾಜ್ಯದಿಂದ ಫ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ತಲಾ 50 ವಿದ್ಯಾರ್ಥಿಗಳನ್ನ ಪ್ರವಾಸಕ್ಕೆ ಆಯ್ಕೆ ಮಾಡಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಬೆಂಗಳೂರು: ಕನ್ನಡಪರ ಸಂಘಟನೆಗಳು(Kannada Para Sanghatane) ಶಿಕ್ಷಣ ಇಲಾಖೆ ವಿರುದ್ಧ ಮತ್ತೆ ಗರಂ ಆಗಿವೆ. ಶಿಕ್ಷಣ ಸಚಿವ ನಾಗೇಶ್(BC Nagesh) ಹಾಗೂ ಶಿಕ್ಷಣ ಇಲಾಖೆ ವಿರುದ್ಧ ವಿವಿಧ ಕನ್ನಡಪರ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ. ಉತ್ತರಾಖಂಡ ರಾಜ್ಯ ಪ್ರವಾಸಕ್ಕೆ ಕನ್ನಡ ಶಾಲೆಯ ಕನ್ನಡ ಮಾತನಾಡುವ ಮಕ್ಕಳನ್ನೆ ಆಯ್ಕೆ ಮಾಡಬೇಕು ಅಂತಾ ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದಿವೆ.
ಹಿಂದಿಗೆ ಶಿಕ್ಷಣ ಇಲಾಖೆ ಆದ್ಯತೆ ನೀಡುವುದಕ್ಕೆ ಮುಂದಾಗಿದೆ ಎಂಬ ಆರೋಪ ಹಿನ್ನಲೆ ಹಿಂದಿ ಭಾಷೆ ಬಂದವರಿಗಷ್ಟೇ ಮಣೆ ಹಾಕ್ತಾ ಇದೆ ಅಂತಾ ಶಿಕ್ಷಣ ಇಲಾಖೆ ನೀತಿ ವಿರುದ್ಧ ಕನ್ನಡ ಹೋರಾಟಗಾರರು ಕೆಂಗಣ್ಣು ಬೀರಿದ್ದಾರೆ. ಕೇಂದ್ರ ಸರ್ಕಾರದ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಒಂದು ಭಾರತ ಶ್ರೇಷ್ಠ ಭಾರತ ಕಾರ್ಯಕ್ರಮದಡಿ ಉತ್ತರಾಖಂಡ ರಾಜ್ಯಕ್ಕೆ ಪ್ರವಾಸ ಆಯೋಜಿಸಿದೆ. ಪ್ರೌಢಶಾಲೆ ಮತ್ತು ಪಿಯು ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದು ರಾಜ್ಯದಿಂದ ಫ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ತಲಾ 50 ವಿದ್ಯಾರ್ಥಿಗಳನ್ನ ಪ್ರವಾಸಕ್ಕೆ ಆಯ್ಕೆ ಮಾಡಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಆದ್ರೆ ಹಿಂದಿ ಬಂದವರಿಗಷ್ಟೆ ಅಮೃತ ಮಹೋತ್ಸವದ ಪ್ರವಾಸದಲ್ಲಿ ಭಾಗಿಯಾಗಲು ಅವಕಾಶ ನೀಡಿ ಎಂದು ಶಿಕ್ಷಣ ಅಧಿಕಾರಿಗಳು ಮೌಖಿಕ ಆದೇಶ ನೀಡಿದ್ದಾರೆ ಎನ್ನೊ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಅತಿ ಹೆಚ್ಚು ಸಂಬಳ ಪಡೆಯುವ ದಕ್ಷಿಣ ಭಾರತದ ಟಾಪ್ 10 ನಟಿಯರು ಇವರು; ರಶ್ಮಿಕಾ, ಸಮಂತಾ ಸಂಭಾವನೆ ಎಷ್ಟು?
ಪ್ರವಾಸಕ್ಕೆ ಹಿಂದಿ ಬರುವ ವಿದ್ಯಾರ್ಥಿಗಳನ್ನ ಮಾತ್ರ ಆಯ್ಕೆಮಾಡಿ ಹಿಂದಿ ಬಾರದ ವಿದ್ಯಾರ್ಥಿಗಳು ಬೇಡಾ ಎಂದ ಶಿಕ್ಷಣ ಇಲಾಖೆಯ ನಿರ್ಧಾರಕ್ಕೆ ಕನ್ನಡ ಪರ ಸಂಘಟನೆಗಳು ಗರಂ ಆಗಿವೆ. ಉತ್ತರಾಖಂಡ ರಾಜ್ಯ ಪ್ರವಾಸ್ಕೆ ಕನ್ನಡ ಶಾಲೆಯ ಕನ್ನಡ ಮಾತನಾಡುವ ಮಕ್ಕಳನ್ನೆ ಕಳಿಸಬೇಕು ಅಂತಾ ಡಿಮ್ಯಾಂಡ್ ಮಾಡ್ತಿವಿ. ಅಲ್ಲದೆ ಮಕ್ಕಳಲ್ಲಿ ಭಾಷಾ ತಾರತಮ್ಯಕ್ಕೆ ಅಧಿಕಾರಿಗಳು ಮುಂದಾಗಬಾರದು. ತಕ್ಷಣವೇ ಸುತ್ತೋಲೆ ವಾಪಸ್ ಪಡೆಯಲು ಕನ್ನಡ ಸಾಹಿತ್ಯ ಪರಿಷತ್ತು ಆಗ್ರಹಿಸಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ರೀತಿಯಲ್ಲಿ ಮಕ್ಕಳಲ್ಲಿ ಭಾಷಾ ಗೊಂದಲಕ್ಕೆ ಕಾರಣವಾಗುವಂತಹ ಕ್ರಮಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ವಿರೋಧ ವ್ಯಕ್ತಪಡಿಸಿದೆ. ಈ ರೀತಿಯಲ್ಲಿ ಸುತ್ತೋಲೆ ಹೊರಡಿಸಿದ್ದರೆ ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 11:54 am, Thu, 16 June 22