ಕರ್ನಾಟಕದ ವಾಯುಗುಣಮಟ್ಟ: ಮಳೆಯ ಪರಿಣಾಮ ಬೆಂಗಳೂರಿನ ವಾಯುಗುಣಮಟ್ಟದಲ್ಲಿ ಚೇತರಿಕೆ

ಕರ್ನಾಟಕದ ಇಂದಿನ ವಾಯು ಗುಣಮಟ್ಟದ ವರದಿ ಇಲ್ಲಿದೆ. ನವೆಂಬರ್ 25ರಂದು ಮಳೆಯ ಪರಿಣಾಮ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಸುಧಾರಿಸಿದೆ. ಬಾಪೂಜಿನಗರ, ಹೊಂಬೇಗೌಡ ನಗರ ಮತ್ತು ಹಾಸನದಲ್ಲಿ ಉತ್ತಮ ಎಕ್ಯೂಐ ದಾಖಲಾಗಿದೆ. ಮಂಗಳೂರು, ಕಲಬುರಗಿಯಲ್ಲಿ ಮಾಲಿನ್ಯ ಹೆಚ್ಚಿದ್ದು, ವಿವಿಧ ನಗರಗಳ ಇಂದಿನ ಎಕ್ಯೂಐ ವಿವರಗಳನ್ನು ತಿಳಿಯಿರಿ.

ಕರ್ನಾಟಕದ ವಾಯುಗುಣಮಟ್ಟ: ಮಳೆಯ ಪರಿಣಾಮ ಬೆಂಗಳೂರಿನ ವಾಯುಗುಣಮಟ್ಟದಲ್ಲಿ ಚೇತರಿಕೆ
ಸಾಂದರ್ಭಿಕ ಚಿತ್ರ
Image Credit source: Down To Earth

Updated on: Nov 25, 2026 | 7:18 AM

ಮುಖ್ಯಾಂಶಗಳು

  • ಮಳೆಯ ಪರಿಣಾಮ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಾಯು ಗುಣಮಟ್ಟದಲ್ಲಿ ಚೇತರಿಕೆ ಕಂಡುಬಂದಿದೆ.
  • ಹೊಂಬೇಗೌಡ ನಗರ, ಹಾಸನದಲ್ಲಿ ಅತ್ಯುತ್ತಮ ಗಾಳಿಯ ಗುಣಮಟ್ಟ ದಾಖಲಾಗಿದೆ.
  • ಕಲಬುರಗಿ, ಮಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಳ, ಸೂಕ್ಷ್ಮ ಗುಂಪುಗಳು ಎಚ್ಚರಿಕೆ ವಹಿಸಬೇಕು.

ಬೆಂಗಳೂರು, ನವೆಂಬರ್ 25: ಇಂದು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ನಗರಗಳಲ್ಲಿ ವಾಯು ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ವಾಹನಗಳ ಸಂಚಾರ, ರಸ್ತೆ ಕಾಮಗಾರಿಗಳ ಧೂಳು, ನಿರ್ಮಾಣ ಚಟುವಟಿಕೆ ಹಾಗೂ ಸ್ಥಳೀಯ ಮಾಲಿನ್ಯಕಾರಕಗಳಿಂದ ನಗರ ಪ್ರದೇಶಗಳ ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಉಂಟಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗಿದ್ದರೆ, ಮತ್ತೆ ಕೆಲವು ಕಡೆ ಮಧ್ಯಮ ಹಾಗೂ ಕಾಳಜಿ ವಹಿಸಬೇಕಾದ ಮಟ್ಟದಲ್ಲಿದೆ.

ಬೆಂಗಳೂರಿನ ಯಾವ ಪ್ರದೇಶದಲ್ಲಿ ಎಕ್ಯೂಐ ಎಷ್ಟು?

  • BTM ಲೇಔಟ್: 107
  • ಬಾಪೂಜಿನಗರ: 31
  • ಹೆಬ್ಬಾಳ: 81
  • ಹೊಂಬೇಗೌಡ ನಗರ: 24
  • ಜಯನಗರ 5ನೇ ಬ್ಲಾಕ್: 31
  • ಆರ್‌ವಿಸಿಇ ಮೈಲಸಂದ್ರ: 106
  • ಸಾನೇಗುರವ ಹಳ್ಳಿ: 60

ಮೈಸೂರು, ಹುಬ್ಬಳ್ಳಿ ಸೇರಿದಂತೆ ಇತರ ನಗರಗಳ ವಾಯು ಗುಣಮಟ್ಟ

  • ಬೆಂಗಳೂರು – 39
  • ಮೈಸೂರು – 39
  • ಹುಬ್ಬಳ್ಳಿ – 98
  • ಕಲಬುರಗಿ – 113
  • ಮಂಗಳೂರು – 129
  • ಹಾಸನ – 15

ಗಾಳಿಯ ಗುಣಮಟ್ಟ ಉತ್ತಮವಾಗಿರುವ ಪ್ರದೇಶಗಳಲ್ಲಿ ಸಾಮಾನ್ಯ ಚಟುವಟಿಕೆಗಳನ್ನು ಮುಂದುವರಿಸಬಹುದು. ಆದರೆ ಮಾಲಿನ್ಯ ಹೆಚ್ಚಿರುವ ಪ್ರದೇಶಗಳಲ್ಲಿ ಮಕ್ಕಳು, ವೃದ್ಧರು, ಅಸ್ತಮಾ ಹಾಗೂ ಉಸಿರಾಟದ ಸಮಸ್ಯೆ ಇರುವವರು ಹೆಚ್ಚು ಎಚ್ಚರಿಕೆ ವಹಿಸಬೇಕು. ಧೂಳು ಹೆಚ್ಚಿರುವ ರಸ್ತೆಗಳಲ್ಲಿ ಅನಗತ್ಯವಾಗಿ ಹೆಚ್ಚು ಸಮಯ ಕಳೆಯುವುದನ್ನು ತಪ್ಪಿಸುವುದು ಉತ್ತಮ.

Loading...

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ. ಪತ್ರಿಕೋದ್ಯಮ ಇವರು ಇಷ್ಟಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್‌ನಲ್ಲಿ ವೃತ್ತಿ ಜೀವನ ಆರಂಭಿಸಿರುವ ಇವರು, ಸಂಸ್ಥೆಯಲ್ಲಿ ಒಂದು ವರ್ಷದ ವೃತ್ತಿ ಅನುಭವ ಹೊಂದಿದ್ದಾರೆ. ರಾಜ್ಯ ಮತ್ತು ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us