ಇಂದಿನಿಂದ ಮೂರು ದಿನಗಳ ಕಾಲ ಸಿಇಟಿ ಪರೀಕ್ಷೆ; ಪರೀಕ್ಷಾ ಕೇಂದ್ರಗಳ ಬಳಿ ಜಾಮರ್, ಮೆಟಲ್ ಡಿಟೆಕ್ಟರ್ ಅಳವಡಿಕೆ
ಮೂರು ದಿನಗಳ ಕಾಲ ನಡೆಯಲಿರುವ ಸಿಇಟಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಟ್ಟುನಿಟ್ಟಿನ ನಿರ್ಬಂಧ ಹೇರಿದೆ. ಅದ್ರಲ್ಲೂ, ಧರ್ಮ ಸಂಘರ್ಷದ ಹೊತ್ತಲ್ಲಿ ವಿಶೇಷ ನಿಗಾ ವಹಿಸಿದೆ. ಧರ್ಮಸೂಚಕ ಸಮವಸ್ತ್ರ ಧರಿಸಿ ಬಂದವ್ರಿಗೆ ಅವಕಾಶ ಇರೋದಿಲ್ಲ.
ಬೆಂಗಳೂರು: ಇಂದಿನಿಂದ(ಜೂನ್ 16) ವೃತ್ತಿಪರ ಕೋರ್ಸ್ ಗಳ ಸಿಇಟಿ(CET) ಪರೀಕ್ಷೆ ಆರಂಭವಾಗ್ತಿದೆ, 3 ದಿನಗಳ ಕಾಲ 5 ಸಬ್ಜೆಕ್ಟ್ ಗಳ ಎಕ್ಸಾಂ ನಡೆಯಲಿದೆ. ಕೆಇಎ ಬೋರ್ಡ್ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದು, ನೀಟ್(NEET) ಮಾದರಿಯಲ್ಲಿ ಎಕ್ಸಾಂ ನಡೆಯಲಿದ್ದು ಪರೀಕ್ಷಾ ಕೇಂದ್ರಗಳ ಬಳಿ ಜಾಮರ್, ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ. ಹಿಜಾಬ್(Hijab) ಧರಿಸಿಬರುವವರಿಗೆ ಪರೀಕ್ಷೆಗೆ ಅವಕಾಶ ನೀಡಲಾಗುವುದಿಲ್ಲ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಫುಲ್ ಅಲರ್ಟ್ ಇತ್ತೀಚಿಗೆ ನಡೆದ PSI ಹಾಗೂ ಸಹಾಯಕ ಪ್ರಾಧ್ಯಾಪಕ ಪರೀಕ್ಷೆಗಳ ಅಕ್ರಮದಿಂದ ಎಚ್ಚೆತ್ತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಫುಲ್ ಅಲರ್ಟ್ ಆಗಿದೆ. ಈ ಬಾರಿಯ ವೃತ್ತಿಪರ ಕೋರ್ಸ್‌ಗಳ ಸಿಇಟಿ ಪರೀಕ್ಷೆಯನ್ನ ಟೈಟ್ ಸೆಕ್ಯೂರಿಟಿಯಲ್ಲಿ ನಡೆಸಲು ಸಜ್ಜಾಗಿದೆ. ಇಂದಿನಿಂದ ವೃತ್ತಿಪರ ಕೋರ್ಸ್‌ಗಳ ಸಿಇಟಿ ಪರೀಕ್ಷೆಗಳು ಆರಂಭವಾಗಲಿದ್ದು ಜೂ.18ರವರೆಗೂ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುತ್ತೆ. 3 ದಿನಗಳ ಕಾಲ 5 ವಿಷಯಗಳಿಗೆ ಪರೀಕ್ಷೆ ನಡೆಯಲಿದೆ. ವಿಶೇಷ ಅಂದ್ರೆ ಈ ಬಾರಿ ಸಿಇಟಿಯಲ್ಲಿ ಪ್ರಶ್ನೆ ಮತ್ತು ಉತ್ತರಗಳು ಇಂಗ್ಲಿಷ್ ಹಾಗೂ ಕನ್ನಡ ಎರಡೂ ಭಾಷೆಯಲ್ಲೂ ಇರಲಿದೆ. ಪ್ರತಿಯೊಂದು ಕೇಂದ್ರಕ್ಕೂ ಸಹಾಯಕ ಆಯುಕ್ತರ ದರ್ಜೆಯ ಅಧಿಕಾರಿಯೊಬ್ಬರನ್ನು ಪರೀಕ್ಷಾ ವೀಕ್ಷಕರಾಗಿ ನೇಮಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಒಟ್ಟು 2,16,525 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, ರಾಜ್ಯಾದ್ಯಂತ 486 ಕೇಂದ್ರಗಳಲ್ಲಿ ಪರೀಕ್ಷೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನೂ ಓದಿ: CET Exam: ನಾಳೆಯಿಂದ ಸಿಇಟಿ ಪರೀಕ್ಷೆ ಆರಂಭ: 2.11 ಲಕ್ಷ ವಿದ್ಯಾರ್ಥಿಗಳು ನೋಂದಣಿ, ಹಿಜಾಬ್ಗೆ ಇಲ್ಲ ಅವಕಾಶ
ಸಿಇಟಿಗೆ ಕಟ್ಟುನಿಟ್ಟಿನ ರೂಲ್ಸ್ ಮೂರು ದಿನಗಳ ಕಾಲ ನಡೆಯಲಿರುವ ಸಿಇಟಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಟ್ಟುನಿಟ್ಟಿನ ನಿರ್ಬಂಧ ಹೇರಿದೆ. ಅದ್ರಲ್ಲೂ, ಧರ್ಮ ಸಂಘರ್ಷದ ಹೊತ್ತಲ್ಲಿ ವಿಶೇಷ ನಿಗಾ ವಹಿಸಿದೆ. ಧರ್ಮಸೂಚಕ ಸಮವಸ್ತ್ರ ಧರಿಸಿ ಬಂದವ್ರಿಗೆ ಅವಕಾಶ ಇರೋದಿಲ್ಲ. ಪರೀಕ್ಷೆ ಕೇಂದ್ರದೊಳಕ್ಕೆ ಟ್ಯಾಬ್, ಮೊಬೈಲ್, ಕ್ಯಾಲ್ಕುಲೇಟರ್ ತರುವಂತಿಲ್ಲ. ಪರೀಕ್ಷಾ ಕೇಂದ್ರಗಳ ವಿಡಿಯೋ ಚಿತ್ರೀಕರಣ ಮಾಡಲಾಗುವುದು. ಇನ್ನು ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ, ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ. ಪರೀಕ್ಷೆ ಆಗಮಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಮುಖ, ಕಿವಿ ಮುಚ್ಚುವಂತಹ ವಸ್ತ್ರ ಧರಿಸುವಂತಿಲ್ಲ. ಇನ್ನು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲು ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಒಟ್ನಲ್ಲಿ ಸಿಇಟಿ ಪರೀಕ್ಷೆಗೆ ಕೆಇಎ ಬೋರ್ಡ್ ಫುಲ್ ಅಲರ್ಟ್ ಆಗಿ, ಟೈಟ್ ಸೆಕ್ಯುರಿಟಿ ಬಳಸಿಕೊಂಡು ಪರೀಕ್ಷೆ ನಡೆಸುತ್ತಿದೆ. ಯಾವುದೇ ಅವಾಂತರ ಉದ್ಭವಿಸದಂತೆ ಕಟ್ಟೆಚ್ಚರ ವಹಿಸಿದ್ದಾರೆ.
ವರದಿ: ಅನಿಲ್ ಕಲ್ಕೆರೆ, ಟಿವಿ9, ಬೆಂಗಳೂರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:15 am, Thu, 16 June 22