Coronavirus: ರಾಜ್ಯದಲ್ಲಿ ಹೊಸದಾಗಿ 648 ಜನರಲ್ಲಿ ಸೋಂಕು ಪತ್ತೆ, ಮಹಾರಾಷ್ಟ್ರ ಗಡಿಯಲ್ಲಿ 4 ಸಾವಿರದ ಗಡಿ ದಾಟಿದ ಕೊರೊನಾ
ಬೆಂಗಳೂರಲ್ಲಿ ಇಂದು ಹೊಸದಾಗಿ 615 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿಗೆ ಒಬ್ಬರು ಬಲಿಯಾಗಿದ್ದಾರೆ. ಹಾಗೂ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ.
ಬೆಂಗಳೂರು: 4 ತಿಂಗಳಿನಿಂದ ಮಾಯವಾಗಿದ್ದ ಕೊರೊನಾ(Coronavirus) ಈಗ ಮತ್ತೆ ತನ್ನ ಆಟ ಶುರುಮಾಡಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚಾಗುತ್ತಿದ್ದು ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಕೇಕೆ ಹಾಕ್ತಿದೆ. ನಿನ್ನೆ ಬೆಂಗಳೂರಿನ ಎರಡು ಖಾಸಗಿ ಶಾಲೆಗಳಲ್ಲಿ ಕೊರೊನಾ ಸ್ಫೋಟಗೊಂಡಿತ್ತು. ಇಂದು ರಾಜ್ಯದಲ್ಲಿ ಹೊಸದಾಗಿ 648 ಜನರಲ್ಲಿ ಸೋಂಕು ದೃಢಪಟ್ಟಿದೆ.
ಬೆಂಗಳೂರಲ್ಲಿ ಇಂದು ಹೊಸದಾಗಿ 615 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿಗೆ ಒಬ್ಬರು ಬಲಿಯಾಗಿದ್ದಾರೆ. ಹಾಗೂ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾ ಆ್ಯಕ್ಟಿವ್ ಕೇಸ್ಗಳ ಸಂಖ್ಯೆ 3,997 ಇದೆ. ರಾಜ್ಯದಲ್ಲಿ ಕೊವಿಡ್ ಪಾಸಿಟಿವಿಟಿ ರೇಟ್ ಶೇಕಡಾ 2.76ರಷ್ಟಿದೆ. ಇದನ್ನೂ ಓದಿ: ಕೆಜಿಎಫ್ ಟು ಡೆಲ್ಲಿ: ಕಾಂಗ್ರೆಸ್ ಮುಖಂಡ ಕೆಜಿಎಫ್ ಬಾಬುಗೆ ಇ.ಡಿ ಬುಲಾವ್; ನಾಳೆ ದೆಹಲಿಯತ್ತ ಪ್ರಯಾಣ
ಇಂದಿನ 15/06/2022 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/BGcRoZAK9I @CMofKarnataka @BSBommai @mla_sudhakar @Comm_dhfwka @MDNHM_Kar @BBMPCOMM @mysurucitycorp @mangalurucorp @DDChandanaNews @PIBBengaluru @KarnatakaVarthe pic.twitter.com/TASRAGW98A
— K’taka Health Dept (@DHFWKA) June 15, 2022
ಮಹಾರಾಷ್ಟ್ರದಲ್ಲಿ 24 ಗಂಟೆಯಲ್ಲಿ 4,024 ಜನರಿಗೆ ಕೊರೊನಾ ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಯಲ್ಲಿ 4,024 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹಾಗೂ 24 ಗಂಟೆಯಲ್ಲಿ 3,028 ಸೋಂಕಿತರು ಡಿಸ್ಚಾರ್ಜ್ ಆಗಿದ್ದಾರೆ. ಇಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ-19,261 ಇದೆ. ಪುಣೆಯ BJ ಮೆಡಿಕಲ್ ಕಾಲೇಜಿನ ನಾಲ್ವರಲ್ಲಿ BA.5 ರೂಪಾಂತರಿ ಪತ್ತೆಯಾಗಿದೆ.
ಪೀಣ್ಯ, ದಾಸರಹಳ್ಳಿಯ 2 ಶಾಲೆಗಳಲ್ಲಿ 31 ಪಾಸಿಟಿವ್ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದ್ದು, 4ನೇ ಅಲೆ ಆತಂಕ ಶುರುವಾಗಿದೆ. ದಾಸರಹಳ್ಳಿ ವಲಯದ 2 ಶಾಲೆಗಳಲ್ಲಿ ಸುಮಾರು 31 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ. ಪೀಣ್ಯ 2ನೇ ಹಂತದಲ್ಲಿರುವ ಖಾಸಗಿ ಶಾಲೆಯಲ್ಲಿ 6ನೇ ತರಗತಿಯ 10 ವಿದ್ಯಾರ್ಥಿಗಳಿಗೆ ಮತ್ತು ರಾಜಗೋಪಾಲನಗರದ ಖಾಸಗಿ ಶಾಲೆಯ 4 ಮತ್ತು 5ನೇ ತರಗತಿಯ ಒಟ್ಟು 21 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ಲಸಿಕೆ ಹಾಕಬೇಕು ಅಂತ ಜೂನ್ 9ರಂದು ಮಕ್ಕಳಿಗೆ ಱಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಿದ ವೇಳೆ ಕೆಲವರಲ್ಲಿ ಕೊರೊನಾ ಪಾಸಿಟಿವ್ ಬಂದಿತ್ತು. ಕೂಡಲೇ 2 ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗೆ ಱಪಿಡ್ ಆ್ಯಂಟಿಜೆನ್ ಟೆಸ್ಟ್ ಟೆಸ್ಟ್ ಮಾಡಲಾಗಿತ್ತು. ಬಳಿಕ ಪಾಸಿಟಿವ್ ಅದ ಮಕ್ಕಳ ಸ್ವಾಬ್ ಅನ್ನು RTPCRಟೆಸ್ಟ್ಗೆ ಕಳಿಸಲಾಗಿದೆ. ಸದ್ಯ 21 ವಿದ್ಯಾರ್ಥಿಗಳಿಗೆ RTPCR ನೆಗೆಟಿವ್ ಬಂದಿದ್ದು . ಉಳಿದ 10 ಮಕ್ಕಳ ರಿಪೋರ್ಟ್ಗೆ ಕಾಯಲಾಗುತ್ತಿದೆ. ಅಷ್ಟೇ ಅಲ್ಲ ಪಾಸಿಟಿವ್ ಅದ ವಿದ್ಯಾರ್ಥಿಗಳನ್ನು ಐಸೋಲೇಶನ್ ಮಾಡಲಾಗಿದೆ. ಕೊರೊನಾ ಕಾಣಿಸಿಕೊಂಡ ಶಾಲೆಗಳಿಗೆ ದಾಸರಹಳ್ಳಿಯ ಜಂಟಿ ಆಯುಕ್ತ ಜಗದೀಶ್ ಹಾಗೂ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ರು
ಶಾಲೆಯಲ್ಲಿ ಕೊರೊನಾ ಸ್ಫೋಟ ಆಗ್ತಿದ್ದಂತೆ ಪ್ರತಿಯೊಂದು ಶಾಲೆಯಲ್ಲೂ SOP ಪಾಲನೆ ಮಾಡುವಂತೆ ಬಿಬಿಎಂಪಿ ಸಲಹೆ ನೀಡಿದೆ. ಮೊದಲಿನಂತೆ ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರದ ಜೊತೆಗೆ ಎಲ್ಲಾ ಶಾಲಾ-ಕಾಲೇಜುಗಳ ಎಂಟ್ರಿಯಲ್ಲೇ ಟೆಂಪ್ರೇಚರ್ ಚೆಕ್ ಮಾಡುವಂತೆ ಬಿಬಿಎಂಪಿ ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ ದೇಶದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:39 pm, Wed, 15 June 22