AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Covid: ಕರ್ನಾಟಕದಲ್ಲಿ ಏರಿದ ಕೋವಿಡ್ ಪ್ರಕರಣಗಳು, 24 ಗಂಟೆಯಲ್ಲಿ ಬೆಂಗಳೂರಿನಲ್ಲೇ ಅತಿ ಹೆಚ್ಚು ಕೊರೋನಾ ಪ್ರಕರಣಗಳು ದಾಖಲು

ಶಿವಮೊಗ್ಗದಲ್ಲಿ 51, ಬಳ್ಳಾರಿಯಲ್ಲಿ 16 ಮತ್ತು ಕಲಬುರಗಿಯಲ್ಲಿ 13 ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿನಲ್ಲಿ ಅತಿ ಹೆಚ್ಚು ಹೊಸ ಪ್ರಕರಣಗಳು (143) ದಾಖಲಾಗಿವೆ. ಸುಮಾರು 8 ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ.

Karnataka Covid: ಕರ್ನಾಟಕದಲ್ಲಿ ಏರಿದ ಕೋವಿಡ್ ಪ್ರಕರಣಗಳು, 24 ಗಂಟೆಯಲ್ಲಿ ಬೆಂಗಳೂರಿನಲ್ಲೇ ಅತಿ ಹೆಚ್ಚು ಕೊರೋನಾ ಪ್ರಕರಣಗಳು ದಾಖಲು
ಸಾಂದರ್ಭಿಕ ಚಿತ್ರImage Credit source: Getty Images
Rakesh Nayak Manchi
|

Updated on:Mar 31, 2023 | 9:09 AM

Share

ಬೆಂಗಳೂರು: ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಮಹಾಮಾರಿ ಕೊರೋನಾ ಸೋಂಕು (Karnataka Covid-19) ಹೆಚ್ಚಳವಾಗುತ್ತಿದ್ದು, ಮಾರ್ಚ್ 30ರಂದು (ಗುರುವಾರ) 288 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 143 ಪ್ರಕರಣಗಳು ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ (Bengaluru) ಪತ್ತೆಯಾಗಿದೆ. ಗುರುವಾರದಂದು 158 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 40,35,744 ಸೋಂಕಿತರು ಸೋಂಕು ಮುಕ್ತರಾಗಿದ್ದಾರೆ. ಗುರುವಾರದಂದು 10,701 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಿದ್ದು, ಈ ಪೈಕಿ 288 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಆ ಮೂಲಕ ರಾಜ್ಯದಲ್ಲಿ ಒಟ್ಟು 40,77,103 ಕೋವಿಡ್ ಪ್ರಕರಣಗಳು ಪತ್ತೆಯಾದಂತಾಗಿದೆ. ನಿನ್ನೆ ರಾಜ್ಯದಲ್ಲಿ ಯಾವುದೇ ಸಾವು ಪ್ರಕರಣ ದಾಖಲಾಗಿಲ್ಲ, ಆದರೆ ಈವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 40,280 ಆಗಿದೆ. ರಾಜ್ಯದಲ್ಲಿ ನಿನ್ನೆ ಒಂದು ದಿನದಲ್ಲಿ ಪತ್ತೆಯಾದ ಪ್ರಕರಣಗಳ ಶೇಕಡಾವಾರು ಪ್ರಮಾಣ 2.23ರಷ್ಟಿದ್ದು, ವಾರದ ಶೇಕಡಾವಾರು ಪ್ರಮಾಣ 2.89ರಷ್ಟಿದೆ. ಸದ್ಯ ರಾಜ್ಯದಲ್ಲಿ 1037 ಸಕ್ರಿಯ ಪ್ರಕರಣಗಳು ಇದ್ದು, ಚಿಕಿತ್ಸೆ ಮುಂದುವರಿದಿದೆ.

ಇದನ್ನೂ ಓದಿ: Karnataka Rain: ರಾಜ್ಯದ ಹಲವೆಡೆ ವರ್ಷಧಾರೆ, ಮುಂದಿನ 2 ದಿನ ಬೆಂಗಳೂರು, ಮೈಸೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಳೆ

ಜಿಲ್ಲಾವಾರು ಕೋವಿಡ್ ಪತ್ತೆ ಪ್ರಕರಣಗಳನ್ನು ನೋಡುವುದಾದರೆ, ಶಿವಮೊಗ್ಗದಲ್ಲಿ 46, ಬಳ್ಳಾರಿಯಲ್ಲಿ 18, ಚಿಕ್ಕಮಗಳೂರು 13 ಮತ್ತು ಮೈಸೂರಿನಲ್ಲಿ 13 ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿನಲ್ಲಿ ಅತಿ ಹೆಚ್ಚು ಹೊಸ ಪ್ರಕರಣಗಳು (143) ದಾಖಲಾಗಿವೆ. ಎಂಟು ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಬೆಂಗಳೂರು ಮತ್ತು ಮಂಗಳೂರಿನ ವಿಮಾನ ನಿಲ್ದಾಣಗಳಲ್ಲಿ ಕ್ರಮವಾಗಿ 97 ಮತ್ತು 10 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಆದರೆ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ.

ಏತನ್ಮಧ್ಯೆ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,016 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದು ದೈನಂದಿನ ಸಂಖ್ಯೆಯಲ್ಲಿ ಶೇಕಡಾ 40 ಕ್ಕಿಂತ ಹೆಚ್ಚು ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಇಲಾಖೆ ಗುರುವಾರ ತಿಳಿಸಿದೆ. ಅಲ್ಲದೆ, ಇದು ಸುಮಾರು ಆರು ತಿಂಗಳಲ್ಲಿ ದಾಖಲಾದ ಗರಿಷ್ಠ ದೈನಂದಿನ ಕೋವಿಡ್ ಪ್ರಕರಣವಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 13,509 ಕ್ಕೆ ಏರಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:05 am, Fri, 31 March 23