Bengaluru Mysuru Expressway Toll Price Hike: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ದರ ಮತ್ತಷ್ಟು ಹೆಚ್ಚಳ

Bengaluru Mysuru Expressway Toll Price ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ದರ ಮತ್ತಷ್ಟು ಹೆಚ್ಚಳವಾಗಿದೆ. ಟೋಲ್ ಸಂಗ್ರಹ ಆರಂಭವಾದ 17 ದಿನದಲ್ಲೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 22ರಷ್ಟು ಟೋಲ್​ ದರ ಹೆಚ್ಚಿಸಿದೆ. ಯಾವ ವಾಹನಗಳಿಗೆ ಎಷ್ಟೆಷ್ಟು? ಈ ಕೆಳಗಿನಂತಿದೆ ನೋಡಿ ಟೋಲ್ ದರ ಪಟ್ಟಿ

Bengaluru Mysuru Expressway Toll Price Hike: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್ ದರ ಮತ್ತಷ್ಟು ಹೆಚ್ಚಳ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಟೋಲ್
Follow us
ರಮೇಶ್ ಬಿ. ಜವಳಗೇರಾ
|

Updated on:Mar 31, 2023 | 11:24 AM

ಕಳೆದ ಒಂದು ತಿಂಗಳಿನಿಂದ ಹಲವು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ವೇ(Bengaluru Mysuru expressway) ಟೋಲ್ ದರ ಹೆಚ್ಚಳ ಮಾಡಲಾಗಿದೆ. ಈಗಿರುವ ಟೋಲ್​ ದರ ಹೆಚ್ಚಾಗಿದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿರುವ ಮಧ್ಯೆಯೇ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ / NHAI) ಮತ್ತೆ ಶೇಕಡಾ 22ರಷ್ಟು ಟೋಲ್​ ದರ (Bengaluru Mysuru expressway toll price) ಹೆಚ್ಚಿಸಿದೆ. ನಾಳೆಯಿಂದ ಅಂದರೆ ಏಪ್ರಿಲ್​ 1ರಿಂದ ಈಗಿರುವ ಟೋಲ್​ಗಿಂತ ಶೇಕಡಾ 22ರಷ್ಟು ದರ ದುಬಾರಿಯಾಗಲಿದೆ. ಟೋಲ್ ಸಂಗ್ರಹ ಆರಂಭವಾದ 17 ದಿನದಲ್ಲೇ ಮತ್ತೆ ಟೋಲ್ ದರ ಹೆಚ್ಚಳ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ. ಪರಿಷ್ಕೃತ ಟೋಲ್​ ದರ ಪಟ್ಟಿ ಈ ಕೆಳಗಿನಂತಿದೆ ನೋಡಿ.

ಇದನ್ನೂ ಓದಿ: ಬೆಂಗಳೂರು ಮೈಸೂರು ಹೆದ್ದಾರಿ ವಿರುದ್ಧ ಮತ್ತೊಂದು ವಿವಾದ: ಟೋಲ್ ರಸ್ತೆಯಲ್ಲಿ ಓಡಾಡದಿದ್ರೂ ಶುಲ್ಕ ಕಡಿತ, ಸವಾರರ ಆಕ್ರೋಶ

ಮಾರ್ಚ್ 14 ರಿಂದ ಟೋಲ್ ಸಂಗ್ರಹ ಆರಂಭವಾಗಿತ್ತು. ಇದೀಗ ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮ 2008ರ ಪ್ರಕಾರ ದರ ಹೆಚ್ಚಳ ಮಾಡಲಾಗಿದ್ದು, ಬಿಡದಿ, ರಾಮನಗರ ವಾಹನ ಸವಾರರು ಸರ್ವಿಸ್ ರಸ್ತೆ ಬಳಸುವಂತೆ ಮನವಿ ಮಾಡಿದೆ. ಟೋಲ್ ದರ ಹೆಚ್ಚಳಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದು, ಹೆದ್ದಾರಿ ಪ್ರಾಧಿಕಾರ ಜನಸಾಮಾನ್ಯರ ಲೂಟಿ ಮಾಡುತ್ತಿದೆ ಎಂದು ಕಿಡಿಕಾರುತ್ತಿದ್ದಾರೆ.

ಇದನ್ನೂ ಓದಿ: Bengaluru Mysuru Expressway: ಬೆಂಗಳೂರಿನಿಂದ ಮೈಸೂರಿಗೆ ತೆರಳಲು ಪರ್ಯಾಯ ಮಾರ್ಗಗಳಿವು

ಹೀಗಿರಲಿದೆ ಪರಿಷ್ಕೃತ ದರ

  • ಕಾರು/ವ್ಯಾನ್/ಜೀಪ್: ಏಕಮುಖ ಸಂಚಾರ 165 ರೂ(30ರೂ ಹೆಚ್ಚಳ). ದ್ವಿಮುಖ ಸಂಚಾರ – 250 ರೂ(45ರೂ ಹೆಚ್ಚಳ).
  • ಲಘು ವಾಹನಗಳು/ಮಿನಿಬಸ್: 270 ರೂ.(50ರೂ ಹೆಚ್ಚಳ) ದ್ವಿಮುಖ ಸಂಚಾರ -405 ರೂ.(75 ರೂ. ಹೆಚ್ಚಳ)
  • ಟ್ರಕ್/ ಬಸ್/ಎರಡು ಆಕ್ಸೆಲ್ ವಾಹನ – 565 ರೂ(165 ರೂ ಹೆಚ್ಚಳ), ದ್ವಿಮುಖ ಸಂಚಾರ – 850 ರೂ(160 ರೂ.ಹೆಚ್ಚಳ)
  • ತ್ರಿ ಆಕ್ಸೆಲ್ ವಾಣಿಜ್ಯ ವಾಹನಗಳು: ಏಕ‌ಮುಖ ಸಂಚಾರ 615 ರೂ.(115ರೂ ಹೆಚ್ಚಳ), ದ್ವಿ ಮುಖಸಂಚಾರ – 925 ರೂ.( 225 ರೂ.ಹೆಚ್ಚಳ)
  • ಭಾರೀ ಕಟ್ಟಡ ನಿರ್ಮಾಣ ವಾಹಗನಳು/ಅರ್ಥ್ ಮೂವರ್ಸ್‌/4-6 ಆಕ್ಸೆಲ್ ವಾಹನಗಳು: 885 ರೂ.(165ರೂ ಹೆಚ್ಚಳ) ದ್ವಿಮುಖ ಸಂಚಾರ – 1,330 ರೂ. ಹೆಚ್ಚಳ(250ರೂ ಹೆಚ್ಚಳ)
  • 7 ಅಥವಾ ಅದಕ್ಕಿಂತ ಎಕ್ಸೆಲ್ ವಾಹನಗಳು: 1,080 ರೂ.(200ರೂ ಹೆಚ್ಚಳ) ದ್ವಿಮುಖ ಸಂಚಾರ – 1,620 ರೂ.( 305 ರೂ.ಹೆಚ್ಚಳ)

ಇನ್ನಷ್ಟು ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:12 am, Fri, 31 March 23

ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ವಿರಾಟ್ ಕೊಹ್ಲಿ ಒಂದಂಕಿಗೆ ಔಟ್ ಆಗುತ್ತಿದ್ದಂತೆ ಸ್ಟೇಡಿಯಂ ಖಾಲಿ ಖಾಲಿ
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು
ರೀಲ್ಸ್​​ ನೋಡುತ್ತಾ ಸರ್ಕಾರಿ ಬಸ್ ​ಚಲಾಯಿಸಿದ್ದ ಚಾಲಕ ಅಮಾನತು
ಪಿಡಿಓಗಳು ಕುಬೇರರು ಅನ್ನೋದನ್ನು ಸಾಬೀತು ಮಾಡಿರುವ ಹಿರೇಮಠ
ಪಿಡಿಓಗಳು ಕುಬೇರರು ಅನ್ನೋದನ್ನು ಸಾಬೀತು ಮಾಡಿರುವ ಹಿರೇಮಠ
ಸಂಸತ್ತಿನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ
ಸಂಸತ್ತಿನ ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ದಾವಣಗೆರೆಯ ಈಜುಪಟು
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ದಾವಣಗೆರೆಯ ಈಜುಪಟು
Budget Session 2025: ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಮಾತು
Budget Session 2025: ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಮಾತು
ನಮ್ಮ ಮನೆಯಲ್ಲಿ ನಾನು ಆಸ್ತಿಕ ಅದರೆ ನಮ್ಮ ತಂದೆ ನಾಸ್ತಿಕ: ಯತೀಂದ್ರ
ನಮ್ಮ ಮನೆಯಲ್ಲಿ ನಾನು ಆಸ್ತಿಕ ಅದರೆ ನಮ್ಮ ತಂದೆ ನಾಸ್ತಿಕ: ಯತೀಂದ್ರ
ಮನೆಯೊಡತಿ ಸಾವಿನ ಸುದ್ದಿ ತಿಳಿದು ಸಾಕು ನಾಯಿಯ ಮೂಕರೋಧನೆ
ಮನೆಯೊಡತಿ ಸಾವಿನ ಸುದ್ದಿ ತಿಳಿದು ಸಾಕು ನಾಯಿಯ ಮೂಕರೋಧನೆ
ಸಿದ್ದರಾಮಯ್ಯರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಇಡಿ ಯತ್ನ: ಯತೀಂದ್ರ
ಸಿದ್ದರಾಮಯ್ಯರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಇಡಿ ಯತ್ನ: ಯತೀಂದ್ರ