
ಬೆಂಗಳೂರು ಸೆ. 24: ರಾಜ್ಯದಲ್ಲಿ ಕಾವೇರಿ ಹಾಗೂ ಕೃಷ್ಣಾ ಕೊಳ್ಳದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ , ಒಳಹರಿವು ಹಾಗೂ ಹೊರಹರಿವಿನ ಸಂಪೂರ್ಣ ಮಾಹಿತಿಯನ್ನು ನೀರಾವರಿ ಇಲಾಖೆ ಬಿಡುಗಡೆ ಮಾಡಿದೆ. ಕಾವೇರಿ ಜಲಾನಯನ ಪ್ರದೇಶದ ಕೆಆರ್‌ಎಸ್, ಕಬಿನಿ ಹಾಗೂ ಹೇಮಾವತಿ ಡ್ಯಾಂಗಳೊಂದಿಗೆ ಉತ್ತರ ಕರ್ನಾಟಕದ ಜೀವನಾಡಿ ಆಲಮಟ್ಟಿ ಜಲಾಶಯದ ಇಂದಿನ ನಿಖರ ಅಂಕಿ-ಅಂಶಗಳ ವಿವರ ಇಲ್ಲಿದೆ.
1. ಕೆಆರ್‌ಎಸ್ ಜಲಾಶಯ (ಮಂಡ್ಯ):
ಗರಿಷ್ಠ ಮಟ್ಟ: 124.80 ಅಡಿ
ಇಂದಿನ ನೀರಿನ ಮಟ್ಟ: 105.74 ಅಡಿ
ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ (TMC)
ಇಂದಿನ ನೀರಿನ ಸಂಗ್ರಹ: 27.653 ಟಿಎಂಸಿ
ಒಳಹರಿವು: 2,546 ಕ್ಯೂಸೆಕ್
ಹೊರಹರಿವು: 4,078 ಕ್ಯೂಸೆಕ್
2. ಕಬಿನಿ ಜಲಾಶಯ (ಮೈಸೂರು):
ಗರಿಷ್ಠ ಮಟ್ಟ: 84.00 ಅಡಿ
ಇಂದಿನ ನೀರಿನ ಮಟ್ಟ: 68.63 ಅಡಿ
ಒಟ್ಟು ಸಾಮರ್ಥ್ಯ: 19.52 ಟಿಎಂಸಿ
ಇಂದಿನ ಸಂಗ್ರಹ: 11.02 ಟಿಎಂಸಿ (ಲೈವ್ ಕ್ಯಾಪ್: 1.21 ಟಿಎಂಸಿ)
ಒಳಹರಿವು: 646 ಕ್ಯೂಸೆಕ್ | ಒಟ್ಟು ಹೊರಹರಿವು: 500 ಕ್ಯೂಸೆಕ್ (ಕಾಲುವೆಗಳಿಗೆ: 0 ಕ್ಯೂಸೆಕ್)
ಮಳೆ: 2 ಮಿ.ಮೀ.
3. ಹೇಮಾವತಿ ಜಲಾಶಯ (ಹಾಸನ)
ಗರಿಷ್ಠ ಮಟ್ಟ: 2922.00 ಅಡಿ (37 ಟಿಎಂಸಿ)
ಇಂದಿನ ಮಟ್ಟ: 2891.40 ಅಡಿ (14.839 ಟಿಎಂಸಿ)
ಒಳಹರಿವು: 895 ಕ್ಯೂಸೆಕ್
ಹೊರಹರಿವು: ನದಿಗೆ 300 ಕ್ಯೂಸೆಕ್ | ಕಾಲುವೆಗೆ 4,200 ಕ್ಯೂಸೆಕ್
ಕಳೆದ ವರ್ಷ ಇದೇ ದಿನದ ಸ್ಥಿತಿ: 2,919.23 ಅಡಿ (34.456 ಟಿಎಂಸಿ ನೀರಿತ್ತು). 4,558 ಕ್ಯೂಸೆಕ್ ಒಳಹರಿವು ಹಾಗೂ ನದಿಗೆ 1,400 ಕ್ಯೂಸೆಕ್, ಕಾಲುವೆಗೆ 4,875 ಕ್ಯೂಸೆಕ್ ಹೊರಹರಿವು ಇತ್ತು. (ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನೀರಿನ ಸಂಗ್ರಹ ಕೊಂಚ ಕಡಿಮೆಯಾಗಿದೆ).
ಇದನ್ನೂ ಓದಿ: ಹೊನ್ನಾವರ ಶಾಲೆಯಲ್ಲಿ ಹದಗೆಟ್ಟ ವ್ಯವಸ್ಥೆ: ಕುಡಿಯಲು, ಶೌಚಾಲಯಕ್ಕೆ ಬಾವಿಯಿಂದ ನೀರು ಹೊರುತ್ತಿದ್ದಾರೆ ಪುಟ್ಟ ಮಕ್ಕಳು
4. ಆಲಮಟ್ಟಿ ಜಲಾಶಯ (ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ, ವಿಜಯಪುರ):
ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಆಲಮಟ್ಟಿ ಡ್ಯಾಂ ಸ್ಥಿತಿಗತಿ:
ಗರಿಷ್ಠ ಮಟ್ಟ: 519.60 ಮೀಟರ್
ಇಂದಿನ ನೀರಿನ ಮಟ್ಟ: 518.94 ಮೀಟರ್ (ಗರಿಷ್ಠ ಮಟ್ಟಕ್ಕೆ ಅತ್ಯಂತ ಸಮೀಪದಲ್ಲಿದೆ)
ಒಳಹರಿವು: ಇಲ್ಲ (0 ಕ್ಯೂಸೆಕ್)
ಹೊರಹರಿವು: 13,172 ಕ್ಯೂಸೆಕ್
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ