ರೋಗಿಗಳಿಗೆ ತಟ್ಟಲಿದೆ ಸರ್ಕಾರಿ ನೌಕರರ ಮುಷ್ಕರದ ಬಿಸಿ; ನಾಳೆಯಿಂದ ರಾಜ್ಯದಲ್ಲಿ ಓಪಿಡಿ ಸೇವೆ ಬಂದ್
ರಾಜ್ಯ ಸರ್ಕಾರಿ ನೌಕರರ ಸಂಘದ ಮುಷ್ಕರಕ್ಕೆ ನಾವು ಕೂಡ ಬೆಂಬಲ ವ್ಯಕ್ತಪಡಿಸಿದ್ದೇವೆ. ನಾಳೆ ಯಾವುದೇ ಓಪಿಡಿ ಸೇವೆ ಇರುವುದಿಲ್ಲ. ನಾಳೆಯಿಂದ ಕೇವಲ ಎಮರ್ಜೆನ್ಸಿ ಸೇವೆಗಳು ಮಾತ್ರ ಸಿಗಲಿದೆ. -ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ವಿವೇಕ್ ದೊರೆ

ಬೆಂಗಳೂರು: 7ನೇ ವೇತನ ಆಯೋಗ (7th Pay Commission) ವರದಿ ಜಾರಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರು(Karnataka Govt employees) ಮಾರ್ಚ್ 01ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇದರಿಂದ ನಾಳೆ ಬಹುತೇಕ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಾಸ ಕಂಡು ಬರಲಿದೆ. ಅದರಲ್ಲೂ ನಾಳೆ ರೋಗಿಗಳ ಕತೆ ಅದೂಗತಿಯಾಗಲಿದೆ. ಏಕೆಂದರೆ ಸರ್ಕಾರಿ ನೌಕರರ ಸಂಘದ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದೇವೆ ಎಂದು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ವಿವೇಕ್ ದೊರೆ ತಿಳಿಸಿದ್ದಾರೆ.
ನಾಳೆಯಿಂದ ರಾಜ್ಯದಲ್ಲಿ ಕೇವಲ ತುರ್ತು ಸೇವೆಗಳು ಮಾತ್ರ ಲಭ್ಯ
ರಾಜ್ಯ ಸರ್ಕಾರಿ ನೌಕರರ ಸಂಘದ ಮುಷ್ಕರಕ್ಕೆ ನಾವು ಕೂಡ ಬೆಂಬಲ ವ್ಯಕ್ತಪಡಿಸಿದ್ದೇವೆ. ನಾಳೆ ಯಾವುದೇ ಓಪಿಡಿ ಸೇವೆ ಇರುವುದಿಲ್ಲ. ನಾಳೆಯಿಂದ ಕೇವಲ ಎಮರ್ಜೆನ್ಸಿ ಸೇವೆಗಳು ಮಾತ್ರ ಸಿಗಲಿದೆ. ಅಪಘಾತ, ವಿಷ, ಡೆಲಿವರಿ, ಪೋಸ್ಟ್ ಮಾರ್ಟಮ್ ಸೇರಿ ಇತರೆ ತುರ್ತು ಸೇವೆಗಳನ್ನು ಮಾತ್ರ ನಾವು ನೀಡಲಿದ್ದೇವೆ. ಬೆಂಗಳೂರಿನಲ್ಲಿ 3 ಪ್ರಮುಖ ಆಸ್ಪತ್ರೆ, 105 ಪಿಎಸ್ಸಿ ಸೆಂಟರ್ಗಳು, 19 ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳ ಓಪಿಡಿ ಸೇವೆ ಬಂದ್ ಆಗುತ್ತೆ ಎಂದು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷ ವಿವೇಕ್ ದೊರೆ ತಿಳಿಸಿದ್ದಾರೆ.
ಇದನ್ನೂ ಓದಿ: Government Employees Strike: ಪರೀಕ್ಷೆ ಸಮಯದಲ್ಲಿ ಮುಷ್ಕರಕ್ಕೆ ಶಾಲಾ ಶಿಕ್ಷಕರ ಬೆಂಬಲ, ವಿದ್ಯಾರ್ಥಿ-ಪೋಷಕರಲ್ಲಿ ಆಂತಂಕ
ಇನ್ನು ವೈದ್ಯ ಸಂಘದ ನಿರ್ಧಾರದಿಂದ ರೋಗಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ವೈದ್ಯರು ದಯವಿಟ್ಟು ಬಂದ್ ಮಾಡಬಾರದು. ದೂರದ ಊರಿಂದ ರೋಗಿಗಳು ಬರ್ತಾರೆ, ಬಂದ್ ಮಾಡಿದ್ರೆ ಕಷ್ಟ ಆಗುತ್ತೆ. ಬಡವರಿಗೆ ಸರ್ಕಾರಿ ಆಸ್ಪತ್ರೆಗಳೇ ಗತಿ. ಹೀಗಿರುವಾಗ ಬಂದ್ ಮಾಡಬಾರದು ಸರ್ ಎಂದು ರೋಗಿಯೊಬ್ಬರು ಮನವಿ ಮಾಡಿದ್ದಾರೆ.
ಸರ್ಕಾರಿ ಕಚೇರಿಗಳು ಬಂದ್ ಆಗುವ ಸಾಧ್ಯತೆ; ಇಲ್ಲಿದೆ ಪಟ್ಟಿ
ಸರ್ಕಾರಿ ನೌಕರರಯ ಪಂಜಾಬ್, ರಾಜಸ್ಥಾನ, ಛತ್ತಿಸ್ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ ರಾಜ್ಯಗಳ ಮಾದರಿಯಲ್ಲಿ NPS ರದ್ದುಗೊಳಿಸಿ OPS ಜಾರಿಗೆ ನೌಕರರು ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆ ನಾಳೆ ಸರ್ಕಾರಿ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ವಿಧಾನಸೌಧದ ಎಲ್ಲಾ ಕಚೇರಿಗಳು, ಸಚಿವಾಲಯದ ಕಚೇರಿಗಳು, ಬಿಬಿಎಂಪಿ ಕಚೇರಿ, ತಾಲೂಕು ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ಪುರಸಭೆ ಕಚೇರಿ, ಗ್ರಾಮ ಪಂಚಾಯಿತಿ, ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆ (ಐಸಿಯು, ಎಂಐಸಿಯು ಹೊರತುಪಡಿಸಿ), ಕಂದಾಯ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪುರಸಭೆ, ಸರ್ಕಾರಿ ಹಾಸ್ಟೆಲ್ಗಳು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಜಲಮಂಡಳಿ, ಬಿಬಿಎಂಪಿ ಆಸ್ಪತ್ರೆಗಳು, ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಂದ್ ಇರಲಿವೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:50 pm, Tue, 28 February 23