AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶೇಷ ಕರ್ತವ್ಯ ಹುದ್ದೆ ಸೃಷ್ಟಿಸಿದ ಸರ್ಕಾರ: ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ LK ಅತೀಕ್ ನೇಮಕ

ಜೂನ್ 30ಕ್ಕೆ ಹಾಲಿ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಐಎಸ್ಎನ್ ಪ್ರಸಾದ್ ಅವರು ನಿವೃತ್ತಿಯಾಗಲಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಹಣಕಾಸು ಇಲಾಖೆಯ ವಿಶೇಷ ಕರ್ತವ್ಯದ ಹುದ್ದೆ ಸೃಷ್ಟಿಸಿದೆ.

ವಿಶೇಷ ಕರ್ತವ್ಯ ಹುದ್ದೆ ಸೃಷ್ಟಿಸಿದ ಸರ್ಕಾರ: ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ LK ಅತೀಕ್ ನೇಮಕ
ಎಲ್​ಕೆ ಅತೀಕ್
ರಮೇಶ್ ಬಿ. ಜವಳಗೇರಾ
|

Updated on: May 31, 2023 | 1:45 PM

Share

ಬೆಂಗಳೂರು: ಹಣಕಾಸು ಇಲಾಖೆಯ ವಿಶೇಷ ಕರ್ತವ್ಯದ ಮೇಲೆ ಎಲ್​ಕೆ ಅತಿಕ್(LK Atheeq )ಅವರನ್ನು ನಿಯೋಜನೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಜೂನ್ 30ಕ್ಕೆ ಹಾಲಿ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಐಎಸ್ಎನ್ ಪ್ರಸಾದ್ ಅವರು ನಿವೃತ್ತಿಯಾಗಲಿದ್ದಾರೆ. ಹೀಗಾಗಿ ವಿಶೇಷ ಕರ್ತವ್ಯದ ಮೇಲೆ ಜೂನ್ 30ರ ವರೆಗೆ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ(finance department additional chief secretary )ಎಲ್​ಕೆ ಅತಿಕ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇನ್ನು ಜೂನ್ 30ರಿಂದ ಹಣಕಾಸು ಇಲಾಖೆ ಅಡಿಷನಲ್ ಚೀಫ್ ಸೆಕ್ರೆಟರಿಯಾಗಿ ಎಲ್​ಕೆ ಅತೀಕ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಬೆಂಗಳೂರು ನೂತನ ಕಮಿಷನರ್ ಆಗಿ ದಯಾನಂದ್ ಅಧಿಕಾರ ಸ್ವೀಕಾರ

ಬೆಂಗಳೂರು: ಬೆಂಗಳೂರಿನ ನೂತನ ಕಮಿಷನರ್ ಆಗಿ ಬಿ ದಯಾನಂದ್ ಅವರು ಇಂದು(ಮೇ 31) ಅಧಿಕಾರ ವಹಿಸಿಕೊಂಡರು. ಬೆಂಗಳೂರಿನ ಕಮಿಷನರ್ ಕಚೇರಿಯಲ್ಲಿ ಹಿಂದಿನ ಕಮಿಷನರ್ ಪ್ರತಾಪ್ ರೆಡ್ಡಿ ಅವರು ಬ್ಯಾಟನ್ ನೀಡುವ ಮೂಲಕ ಅಧಿಕಾರ ಹಸ್ತಾಂತರ ಮಾಡಿದರು. ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನೂತನ ಬೆಂಗಳೂರು ನೂತನ ಕಮಿಷನರ್ ದಯಾನಂದ್, ಸಿಎಂ ಸಿದ್ದರಾಮಯ್ಯ ,ಸೇರಿದಂತೆ ಕರ್ನಾಟಕ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ತೆರೆಯ ಹಿಂದೆ ಮಾತನಾಡುತ್ತಿದೆ. ಈಗ ತೆರೆಯ ಮುಂದೆ ಮಾತನಾಡುತ್ತೀದ್ದೇನೆ. ನಾನು ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಮಗ. ಬಹಳಷ್ಟು ಚಾಲೆಂಜಸ್ ಇದ್ದಾವೆ. ಅದನ್ನು ಎದರಿಸಲು ಎಲ್ಲಾ ಸಿಬ್ಬಂದಿಯನ್ನು ಗಮನಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ. ಬೆಂಗಳೂರು ಬದಲಾವಣೆ ಬಗ್ಗೆ ಹೆಚ್ಚಿನ ಹೊತ್ತು ನೀಡುತ್ತೇನೆ. ಕಮಲ್ ಪಂತ್ ,ಪ್ರತಾಪ್ ರೆಡ್ಡಿ ಸೇರಿದಂತೆ ನಗರದಲ್ಲಿ ಹಿರಿಯ ಅಧಿಕಾರಿಗಳು ಬಂದು ಹೋಗಿದ್ದಾರೆ. ನಗರದಲ್ಲಿ ನಾಗರಿಕರು ಇಲಾಖೆ ಮೇಲೆ ಅಪಾರವಾಗಿ ವಿಶ್ವಾಸ ಮತ್ತು ನಂಬಿಕೆ ಇಟ್ಟಿದ್ದಾರೆ. ಅದನ್ನು ಉಳಿಸಿಕೊಳ್ಳವ ಕೆಲಸ ಮಾಡುತ್ತೇನೆ ಎಂದರು.

ಇದೇ ವೇಳೆ ಟೋಯಿಂಗ್ ಬಗ್ಗೆ ಪ್ರತಿಕ್ರಿಯಿಸಿದ್ದು, ಮುಂದೆ ಅದನ್ನು ನೋಡಬೇಕು. ಈ ಬಗ್ಗೆ ಚರ್ಚೆ ಮಾಡಬೇಕು. ಇಂಟಲಿಜೆನ್ಸಿ ಪೊಲೀಸ್ ಇಲಾಖೆಯ ಬ್ಯಾಕ್ ಬೋನ್. ಅದನ್ನು ಹೆಚ್ಚು ಬಲವರ್ಧನೆ ಮಾಡಬೇಕು. ಇವತ್ತಿನ ಪೊಲೀಸ್ ವ್ಯವಸ್ಥೆಗೆ ಅನುಗುಣವಾಗಿ ಇರಬೇಕು. ಟೆಕ್ನಾಲಜಿ ಹಾಗೂ ಸೈಬರ್ ಬಗ್ಗೆ ಕೆಲಸ ಆಗಬೇಕು: ಮಾತಾಡುವಾಗ ಮೊದಲಿಗೆ ನಾನು ಬೆಂಗಳೂರಿಗ ಎಂದು ಹೇಳುತ್ತೇನೆ. ಬೆಂಗಳೂರು ನಗರ ನಾನು ಹುಟ್ಟಿ ಬೆಳೆದ ಸ್ಥಳ. ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳನ್ನು ಜೊತೆಗೊಂಡಂತೆ‌ ಕೆಲಸ ಮಾಡುತ್ತೇವೆ. ಚಿಕ್ಕಂದಿನಿಂದ ನಗರ ಹಾಗೂ ಪೊಲೀಸ್ ಇಲಾಖೆಯನ್ನು ನೋಡಿದ್ದೇನೆ. ಬದಲಾವಣೆ ಪ್ರಕೃತಿ ನಿಯಮ. ಬದಲಾವಣೆ ಜೊತೆಗೆ ಐತಿಹಾಸಿಕ ವ್ಯವಸ್ಥೆಗಳನ್ನು ನೋಡುತ್ತೇವೆ. ಸಾಕಷ್ಟು ಹಿರಿಯ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಮಾಡಿರುವಂತಹ ವ್ಯವಸ್ಥೆ ಹಾಗೂ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುತ್ತೇವೆ. ಬದಲಾವಣೆ ಅವಶ್ಯಕತೆ ಇರುವ ಕಡೆ ಬದಲಾವಣೆ ಮಾಡಬೇಕು. ಟೆಕ್ನಾಲಜಿ ಹಾಗು ಸೈಬರ್ ಬಗ್ಗೆ ಕೆಲಸ ಆಗಬೇಕು ಎಂದು ಹೇಳಿದರು.