ಬೆಂಗಳೂರು: ಬಿಜೆಪಿ ನಾಯಕಿ ನೂಪುರ್ ಶರ್ಮಾ (Nupur Sharma) ಬೆಂಬಲಿಸಿ ಪೋಸ್ಟ್ ಹಾಕಿದ್ದಕ್ಕೆ ರಾಜಸ್ಥಾನದ ಉದಯಪುರದಲ್ಲಿ (Udaipur) ನಿನ್ನೆ (ಜೂನ್ 28) ಹಿಂದೂ ಯುವಕನ ತಲೆ ಕತ್ತರಿಸಿರುವ ಘಟನೆ ನಡೆದಿದೆ. ಉದಯಪುರದ ಟೈಲರ್ ಅಂಗಡಿ ಮಾಲೀಕನಾದ ಕನ್ನಯ್ಯಲಾಲ್ನನ್ನು ಮುಸ್ಲಿಂ ಸಮುದಾಯದ ಇಬ್ಬರು ಕೊಲೆ ಮಾಡಿದ್ದಾರೆ. ಕೊಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನೂ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಸದ್ಯ ಈ ಪ್ರಕರಣ ಬಾರೀ ಚರ್ಚೆಗೆ ಕಾರಣವಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ನಗರದಲ್ಲಿ ಹೈ ಅಲರ್ಟ್ ಇರುವಂತೆ ಕಮಿಷನರ್ ಪ್ರತಾಪ್ ರೆಡ್ಡಿ ಅವರು ಮೌಖಿಕವಾಗಿ ಎಲ್ಲಾ ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ. ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು. ಬೀಟ್ ಪೊಲೀಸರು ಅಲರ್ಟ್ ಆಗಿರಬೇಕೆಂದು ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ: Mahesh Babu: ಪತ್ನಿ ನಮ್ರತಾ ಜತೆ ಬಿಲ್ ಗೇಟ್ಸ್ ಭೇಟಿ ಮಾಡಿದ ಮಹೇಶ್ ಬಾಬು; ಫೋಟೋ ವೈರಲ್
ಕೊಲೆಗೆ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ:
ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜಸ್ಥಾನದಲ್ಲಿ ನಡೆದ ಹತ್ಯೆ ಅತ್ಯಂತ ಅಮಾನುಷವಾಗಿದೆ. ಕೊಲೆ ಆರೋಪಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು. ಧರ್ಮದ ಹೆಸರಲ್ಲಿ ಇದೆಲ್ಲಾ ನಡೆಯಬಾರದು. ಅವರೆಲ್ಲಾ ಮತಾಂಧರು, ಜಗತ್ತಿನ ನೆಮ್ಮದಿ ಕೆಡಿಸಿದ್ದಾರೆ. ಬುದ್ಧಿ ಜೀವಿಗಳ ನಾಲಿಗೆಗೆ ಲಕ್ವಾ ಹೊಡೆದಿದೆಯಾ? ಎಂದು ಹೇಳಿದರು.
ಎಲ್ಲಾ ವರ್ಗದ ತಪ್ಪನ್ನೂ ಖಂಡಿಸಬೇಕು. ಕೇವಲ ಒಂದು ವರ್ಗದವ ಪರ ನಿಲ್ಲುವುದು, ಇನ್ನೊಂದು ವರ್ಗದ ವಿರುದ್ಧ ಮಾತಾಡುವುದು ಅಪಾಯಕಾರಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಇದನ್ನೂ ಓದಿ: ಮೆಗಾ ಬಂದರುಗಳ ನಿರ್ಮಾಣಕ್ಕೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಬಂದರುಗಳಿಗೆ ಕೇಂದ್ರದ ಸೂಚನೆ
ದುಷ್ಕರ್ಮಿಗಳನ್ನು ಗಲ್ಲಿಗೇರಿಸಬೇಕೆಂದು ಶ್ರೀರಾಮಸೇನೆ ಒತ್ತಾಯ: ಘಟನೆ ಖಂಡಿಸಿ ಧಾರವಾಡದ ಡಿಸಿ ಕಚೇರಿ ಬಳಿ ಶ್ರೀರಾಮಸೇನೆ ಸಂಘಟನೆ ಪ್ರತಿಭಟನೆ ನಡೆಸುತ್ತಿದೆ. ಶ್ರೀರಾಮಸೇನೆ ಸಂಸ್ಥಾಪಕ ಮುತಾಲಿಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ದುಷ್ಕರ್ಮಿಗಳನ್ನು ಗಲ್ಲಿಗೇರಿಸಬೇಕೆಂದು ಒತ್ತಾಯಿಸಿದ್ದಾರೆ.
Published On - 12:00 pm, Wed, 29 June 22