ಮೆಗಾ ಬಂದರುಗಳ ನಿರ್ಮಾಣಕ್ಕೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಬಂದರುಗಳಿಗೆ ಕೇಂದ್ರದ ಸೂಚನೆ
Mega Ports: ಭಾರತದ ಕಡಲ ಆರ್ಥಿಕತೆಯನ್ನು ತ್ವರಿತವಾಗಿ ಅಭಿವೃದ್ಧಿಪಡಿಸಲು ಮತ್ತು ಉತ್ತೇಜಿಸುವ ನಿಟ್ಟಿನಲ್ಲಿ 2047ರ ವೇಳೆಗೆ ಎಲ್ಲಾ ಬಂದರುಗಳು ಮೆಗಾ ಬಂದರುಗಳನ್ನಾಗಿ ನಿರ್ಮಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಎಲ್ಲಾ ಬಂದರುಗಳಿಗೆ ಕರೆ ನೀಡಿದ್ದಾರೆ.
ನವದೆಹಲಿ: ಭಾರತದ ಕಡಲ ಆರ್ಥಿಕತೆಯನ್ನು ತ್ವರಿತವಾಗಿ ಅಭಿವೃದ್ಧಿಪಡಿಸಲು ಮತ್ತು ಉತ್ತೇಜಿಸುವ ನಿಟ್ಟಿನಲ್ಲಿ 2047ರ ವೇಳೆಗೆ ಎಲ್ಲಾ ಬಂದರುಗಳು ಮೆಗಾ ಬಂದರುಗಳನ್ನಾಗಿ ನಿರ್ಮಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಎಲ್ಲಾ ಬಂದರುಗಳಿಗೆ ಕರೆ ನೀಡಿದ್ದಾರೆ.
ಭಾರತದ ಕಡಲ ಆರ್ಥಿಕತೆಯನ್ನು ಹೆಚ್ಚಿಸುವ ಕುರಿತು ಮೂರು ದಿನಗಳ ಚಿಂತನ ಮಂಥನ ಕಾರ್ಯಕ್ರಮ ನಡೆಯಿತು. ಸಭೆಯಲ್ಲಿ ಕೆಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಕಡಲ ಆರ್ಥಿಕತೆಯಲ್ಲಿ ಭಾರತವನ್ನು ಮುಂದಕ್ಕೆ ಕೊಂಡೊಯ್ಯುವ ಆಲೋಚನೆಗಳು ಮತ್ತು ನಾವೀನ್ಯತೆಗಳ ಕುರಿತು ಚರ್ಚೆ ನಡೆಯಿತು.
ಕಂಟೈನರ್ ಟ್ರೇಲರ್‌ಗಳಿಗೆ ಬಫರ್ ಪಾರ್ಕಿಂಗ್ ಯಾರ್ಡ್, ಸ್ಮಾರ್ಟ್ ವೆಸೆಲ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್, 5ಜಿ ನೆಟ್‌ವರ್ಕ್ ಪೈಲಟ್ ಪ್ರಾಜೆಕ್ಟ್, ಮೇಲ್ವಿಚಾರಣಾ ನಿಯಂತ್ರಣ ಮತ್ತು ಆಯಿಲ್ ಪೈಪ್‌ಲೈನ್ ಕಾರ್ಯಾಚರಣೆಗಾಗಿ ಡೇಟಾ ಸ್ವಾಧೀನ (ಎಸ್‌ಸಿಎಡಿಎ) ವ್ಯವಸ್ಥೆ, ಸ್ವಯಂಚಾಲಿತ ವಾಹನ ವೀಕ್ಷಣೆಗಳ ಕುರಿತು ಚರ್ಚಿಸಲಾಯಿತು.
ಸಿಬ್ಬಂದಿಯ RFID ಸ್ಕ್ಯಾನಿಂಗ್, ಡ್ರೋನ್ ಕಣ್ಗಾವಲು, ಹಸಿರು ಉಗ್ರಾಣ ವ್ಯವಸ್ಥೆ, ಜಲಾಶಯಗಳ ಪುನರುಜ್ಜೀವನ ಇತ್ಯಾದಿ ವಿಚಾರಗಳ ಕುರಿತು ಮಾತುಕತೆ ನಡೆಯಿತು. ಎಲ್ಲಾ ಬಂದರುಗಳು ತಮ್ಮ ಪ್ರಮುಖ ಸ್ಥಳಗಳಲ್ಲಿ VHF ತಂತ್ರಜ್ಞಾನದ ಬಳಕೆಯನ್ನು ಅಳವಡಿಸಿಕೊಳ್ಳಲು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಸೂಚಿಸಲಾಯಿತು. ಮೂರು ದಿನದಲ್ಲಿ ಹಡಗು ಉದ್ಯಮದ ಕುರಿತು ಸಾಕಷ್ಟು ಚರ್ಚೆಗಳು ನಡೆದವು.
ಹಣ ಉಳಿತಾಯ ಹಾಗೂ ಖರ್ಚು ಕಡಿತಕ್ಕೆ ಸಂಬಂಧಿಸಿದಂತೆ ಬಂದರುಗಳನ್ನು ಸುಧಾರಿಸಲು ತೆಗೆದುಕೊಳ್ಳಬಹುದಾದ ನಿರ್ಣಯಗಳ ಬಗ್ಗೆ ಚರ್ಚಿಸಲಾಯಿತು. ಡ್ರೋನ್ ಕಣ್ಗಾವಲು, ಇಂಟರ್ನೆಟ್ ಆಫ್ ಥಿಂಗ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮುಂತಾದ ವಿವಿಧ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆಯಿಂದ ಭಾರತೀಯ ಬಂದರುಗಳಲ್ಲಿ ಕಾರ್ಯಾಚರಣೆಯನ್ನು ಗಣನೀಯವಾಗಿ ಸುಧಾರಿಸಬಹುದಾದ ಹೊಸ ತಲೆಮಾರಿನ ಸ್ವಯಂಚಾಲಿತ ತಂತ್ರಜ್ಞಾನಗಳ ಕುರಿತು ಸಭೆಯಲ್ಲಿ ಗಮನಹರಿಸಲಾಯಿತು.
ಬಹು-ಮಾದರಿ ಸಂಪರ್ಕದ ಪ್ರಾಮುಖ್ಯತೆ ಮತ್ತು ಡ್ರೆಡ್ಜಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ ಕಾರ್ಯನಿರ್ವಹಣೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಬಗ್ಗೆ ಒತ್ತು ನೀಡಿದರು.