AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಬ್ಬನ್​ಪಾರ್ಕ್​ನಲ್ಲಿ ನಾಯಿ ಕಾಟ ತಡೆಗೆ ಹೈಕೋರ್ಟ್​ ಆದೇಶ

ವಿದ್ಯಾವಂತರೇ ನಾಯಿಗಳನ್ನು ಮಲವಿಸರ್ಜನೆಗೆ ಕರೆತರುತ್ತಾರೆ. ಇದನ್ನು ತಡೆಯಲು ಬಿಬಿಎಂಪಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಅಭಿಪ್ರಾಯಪಟ್ಟರು.

ಕಬ್ಬನ್​ಪಾರ್ಕ್​ನಲ್ಲಿ ನಾಯಿ ಕಾಟ ತಡೆಗೆ ಹೈಕೋರ್ಟ್​ ಆದೇಶ
ಕರ್ನಾಟಕ ಹೈಕೋರ್ಟ್ ಮತ್ತು ಕಬ್ಬನ್​ಪಾರ್ಕ್​ನಲ್ಲಿ ನಾಯಿಕಾಟ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Dec 09, 2021 | 7:22 PM

Share

ಬೆಂಗಳೂರು: ಕಬ್ಬನ್​ಪಾರ್ಕ್​ಗೆ ನಾಯಿಗಳ ಪ್ರವೇಶದ ಬಗ್ಗೆ ಹೈಕೋರ್ಟ್​ ವಿಭಾಗೀಯಪೀಠ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ. ಬೀದಿನಾಯಿ ಮತ್ತು ಸಾಕುನಾಯಿಗಳ ಮಲ ವಿಸರ್ಜನೆ ಕಬ್ಬನ್​ಪಾರ್ಕ್​ನಲ್ಲಿ ದೊಡ್ಡ ಸಮಸ್ಯೆಯಾಗಿದೆ. ವಿದೇಶಗಳಲ್ಲಿ ನಾಯಿಗಳ ಮಲವನ್ನು ಮಾಲೀಕರೇ ಶುಚಿಗೊಳಿಸುತ್ತಾರೆ. ಆದರೆ ಇಲ್ಲಿ ವಿದ್ಯಾವಂತರೇ ನಾಯಿಗಳನ್ನು ಮಲವಿಸರ್ಜನೆಗೆ ಕರೆತರುತ್ತಾರೆ. ಇದನ್ನು ತಡೆಯಲು ಬಿಬಿಎಂಪಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಅಭಿಪ್ರಾಯಪಟ್ಟರು.

ಕಬ್ಬನ್​ಪಾರ್ಕ್ ಉದ್ಯಾನವನದಲ್ಲಿ ಬೀದಿನಾಯಿಗಳ ಹಾವಳಿಯಿಂದ ಆಗುತ್ತಿರುವ ತೊಂದರೆಗಳ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್​ ನಾಯಿಮಾಲೀಕರ ವರ್ತನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಸಾಕುನಾಯಿಗಳನ್ನು ಉದ್ಯಾನದೊಳಗೆ ಕರೆತರುವ ಕೆಲ ಮಾಲೀಕರು ಮಲ-ಮೂತ್ರ ವಿಸರ್ಜನೆ ಮಾಡಿಸುತ್ತಿದ್ದಾರೆ. ಸಾಕುನಾಯಿಗಳನ್ನು ನೋಡಿ ಬೀದಿನಾಯಿಗಳೂ ಕಬ್ಬನ್​ಪಾರ್ಕ್​ಗೆ ನುಗ್ಗುತ್ತಿವೆ. ಪಾರ್ಕ್​ನಲ್ಲಿ ನಾಯಿಗಳ ಪ್ರವೇಶಕ್ಕೆ ಕಡಿವಾಣ ಹಾಕಲು ಬಿಬಿಎಂಪಿ ಅಗತ್ಯಕ್ರಮ ತೆಗೆದುಕೊಳ್ಳಬೇಕು. ಜರುಗಿಸಿದ ಕ್ರಮದ ಬಗ್ಗೆ ಹೈಕೋರ್ಟ್​ಗೆ ಮಾಹಿತಿ ನೀಡಬೇಕು ಎಂದು ಸಿಜೆ ರಿತುರಾಜ್ ಅವಸ್ತಿ ಸೂಚಿಸಿದರು.

ನಾಯಿಗಳು ಕಬ್ಬನ್​ಪಾರ್ಕ್​ನಲ್ಲಿ ಮುಕ್ತವಾಗಿ ಸಂಚರಿಸುತ್ತಿರುವುದರಿಂದ ಜನರಿಗೆ ಓಡಾಡಲು, ಮಕ್ಕಳು ಆಟವಾಡಲು ಕಷ್ಟವಾಗುತ್ತಿದೆ. ಕೆಲವರು ಪಾರ್ಕ್​ನಲ್ಲಿಯೇ ಬೀದಿನಾಯಿಗಳಿಗೆ ಆಹಾರ ಕೊಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಅಂಥವರು ಬಾರದಿದ್ದಾಗ ಹಸಿವಿನಿಂದ ಸಿಟ್ಟಿಗೇಳುವ ನಾಯಿಗಳು ಜನರ ಮೇಲೆ ದಾಳಿ ಮಾಡುತ್ತಿವೆ. ಇಂಥ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಬಿಬಿಎಂಪಿ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸದಿದ್ದರೆ ಹೈಕೋರ್ಟ್​ ಪ್ರಕರಣ ದಾಖಲಿಸಿಕೊಂಡು ನೊಟೀಸ್ ಜಾರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಉದ್ಯಾನವನದ ಬಿದಿರು ಮೆಳೆಗಳನ್ನು ಈಗಾಗಲೇ ಸಾಕಷ್ಟು ನಾಯಿಗಳು ತಮ್ಮ ವಾಸಸ್ಥಳ ಮಾಡಿಕೊಂಡಿವೆ. ಈ ನಾಯಿಗಳನ್ನು ಹಿಡಿದು ಹೊರಗೆ ಸಾಗಿಸುವುದು ಮತ್ತು ಮತ್ತೊಮ್ಮೆ ನಾಯಿಗಳು ಉದ್ಯಾನಕ್ಕೆ ಬಾರದಂತೆ ತಡೆಯುವುದು ಸವಾಲಿನ ಕೆಲಸ. ಕಬ್ಬನ್​ಪಾರ್ಕ್​​ನಲ್ಲಿ ನಾಯಿಗಳ ಪ್ರವೇಶ ನಿರ್ಬಂಧಿಸುವ ಆದೇಶ ಜಾರಿಗೊಳಿಸುವುದು ಸಹ ಸುಲಭವಲ್ಲ. ಕಬ್ಬನ್ ಉದ್ಯಾನಕ್ಕೆ ವೆಂಕಟಪ್ಪ ಆರ್ಟ್ ಗ್ಯಾಲರಿ, ಪ್ರೆಸ್​ಕ್ಲಬ್, ಹೈಕೋರ್ಟ್ ಸೇರಿದಂತೆ ಹಲವೆಡೆಗಳಿಂದ ಪ್ರವೇಶಕ್ಕೆ ಅವಕಾಶವಿದೆ. ಮುಂದಿನ ದಿನಗಳಲ್ಲಿ ಬಿಬಿಎಂಪಿ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

ಇದನ್ನೂ ಓದಿ: ನಾಯಿ ವಿಚಾರಕ್ಕೆ ಕಿರಿಕ್, ಬೆಂಗಳೂರಿನ ವ್ಯಕ್ತಿಯ ಮೇಲೆ ಬಂದೂಕಿನಿಂದ ಗುಂಡು ಹಾರಿಸಿದ ಯುವಕ! ಇದನ್ನೂ ಓದಿ: ಪೊಲೀಸರನ್ನ ನಾಯಿಗೆ ಹೋಲಿಕೆ! ಚಿಕ್ಕಮಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ದೂರು ದಾಖಲು

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ