BBMP: ಬೆಂಗಳೂರಿನ ಕಸ ನಿರ್ವಹಣೆಗೆ ಕಂಪನಿ ಆರಂಭ; ಪಾಲಿಕೆ ತನ್ನ ಕೆಲಸವನ್ನು ಕಂಪನಿಗೆ ವಹಿಸಬಹುದೇ? ಹೈಕೋರ್ಟ್ ಪ್ರಶ್ನೆ
BBMP Waste Management: ಹೈಕೋರ್ಟ್ ಪ್ರಶ್ನೆಗೆ ಉತ್ತರಿಸಿದ ಬಿಬಿಎಂಪಿ ಪರ ವಕೀಲರು ಕಸ ನಿರ್ವಹಣೆಗೆ ಕಂಪನಿ ಸ್ಥಾಪನೆ ಸರ್ಕಾರದ ನಿರ್ಧಾರವಾಗಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ವಿವರಣೆ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದ ಹೈಕೋರ್ಟ್ ವಿಚಾರಣೆಯನ್ನು ಜೂನ್ 25ಕ್ಕೆ ಮುಂದೂಡಿದೆ.
ಬೆಂಗಳೂರು: ನಗರದ ಕಸ ನಿರ್ವಹಣೆಗೆ ಕಂಪನಿ ಆರಭಿಸಲು ಕಂಪನಿ ಆರಂಭಿಸಲು ಬಿಬಿಎಂಪಿಗೆ ಅಧಿಕಾರವಿದೆಯೇ? ಪಾಲಿಕೆ ತನ್ನ ಕೆಲಸವನ್ನು ಕಂಪನಿಗೆ ವಹಿಸಬಹುದೇ? ಎಂದು ಹೈಕೋರ್ಟ್ ಬಿಬಿಎಂಪಿ, ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ. ಬೆಂಗಳೂರಿನ ಕಸ ನಿರ್ವಹಣೆಯ ಬಗ್ಗೆ ಕಂಪನಿ ಆರಂಭಿಸುವ ಬಗೆಗಿನ ಪ್ರಸ್ತಾಪದ ಕುರಿತು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಈ ಪ್ರಶ್ನೆ ಎತ್ತಿದೆ.
ಹೈಕೋರ್ಟ್ ಪ್ರಶ್ನೆಗೆ ಉತ್ತರಿಸಿದ ಬಿಬಿಎಂಪಿ ಪರ ವಕೀಲರು ಕಸ ನಿರ್ವಹಣೆಗೆ ಕಂಪನಿ ಸ್ಥಾಪನೆ ಸರ್ಕಾರದ ನಿರ್ಧಾರವಾಗಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ವಿವರಣೆ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದ ಹೈಕೋರ್ಟ್ ವಿಚಾರಣೆಯನ್ನು ಜೂನ್ 25ಕ್ಕೆ ಮುಂದೂಡಿದೆ.
ಸರ್ಕಾರಿ ಉದ್ಯೋಗದಲ್ಲಿ ಮಂಗಳಮುಖಿಯರಿಗೆ ಮೀಸಲಾತಿ; ಅರ್ಜಿ ವಿಚಾರಣೆ ಸರ್ಕಾರಿ ಉದ್ಯೋಗದಲ್ಲಿ ಮಂಗಳಮುಖಿಯರಿಗೆ ಶೇಕಡಾ 1ರಷ್ಟು ಮೀಸಲಾತಿ ಒದಗಿಸುವಂತೆ ಕರಡು ಅಧಿಸೂಚನೆ ಹೊರಡಿಸಿ ರಾಜ್ಯ ಸರ್ಕಾರದಿಂದ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಲಾಗಿದೆ. ಈ ಮುನ್ನ ಸಂಗಮ ಸ್ವಯಂಸೇವಾ ಸಂಸ್ಥೆ ಮಂಗಳಮುಖಿಯರಿಗೆ ಉದ್ಯೋಗದಲ್ಲಿ ಮೀಸಲಾತಿ ಒದಗಿಸುವಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಈ ಸಂಬಂಧ ಕರ್ನಾಟಕ ನಾಗರಿಕ ಸೇವಾ ನಿಯಮಕ್ಕೆ ತಿದ್ದುಪಡಿ ತರಲು ಕರಡು ಅಧಿಸೂಚನೆ ಪ್ರಕಟಿಸಲಾಗಿದ್ದು, ಆಕ್ಷೇಪಣೆ ಪರಿಗಣಿಸಿದ ನಂತರ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಸರ್ಕಾರಿ ವಕೀಲ ವಿಜಯ್ ಕುಮಾರ್ ಪಾಟೀಲ್ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಈ ಸಾರ್ವಜನಿಕರ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜುಲೈ 20ಕ್ಕೆ ನಿಗದಿಪಡಿಸಿ ಮುಂದೂಡಿದೆ.
ಕೊವಿಡ್ ಮಾರ್ಗಸೂಚಿ ಉಲ್ಲಂಘಿಸಿ ನಂಜನಗೂಡಿನಲ್ಲಿ ಪೂಜೆ: ವಿಜಯೇಂದ್ರ ನಡೆಯ ಬಗ್ಗೆ ಹೈಕೋರ್ಟ್ ಸಿಟ್ಟು ಕೊವಿಡ್ ಮಾರ್ಗಸೂಚಿ ಉಲ್ಲಂಘಿಸಿ ಸಿಎಂ ಯಡಿಯೂರಪ್ಪ ಅವರ ಮಗ ಬಿ.ವೈ.ವಿಜಯೇಂದ್ರ ನಂಜನಗೂಡಿನಲ್ಲಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ಸಾರ್ವಜನಿಕರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಇಲ್ಲವೆಂದ ಮೇಲೆ ಇತರರಿಗೂ ಇರಬಾರದು. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಮುಜರಾಯಿ ಇಲಾಖೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಖಡಕ್ ಎಚ್ಚರಿಕೆ ನೀಡಿದೆ.
ವಿಜಯೇಂದ್ರ ಉದ್ದೇಶಪೂರ್ವಕವಾಗಿ ದೇವಾಲಯದ ಒಳಗೆ ಭೇಟಿ ನೀಡಿರಲಿಲ್ಲ. ಪೂಜೆ ವೇಳೆ ಅರ್ಚಕರು ಕರೆದರೆಂದು ಹೋಗಿದ್ದಾರೆ. ಬಿ.ವೈ.ವಿಜಯೇಂದ್ರ ಕೇವಲ ಐದರಿಂದ ಹತ್ತು ನಿಮಿಷವಷ್ಟೇ ಇದ್ದಿದ್ದರು ಎಂದು ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್‌ಗೆ ಎಜಿ ಪ್ರಭುಲಿಂಗ್ ನಾವದಗಿ ಸ್ಪಷ್ಟನೆ ನೀಡಲು ಪ್ರಯತ್ನಿಸಿದರು. ನಿಷೇಧವಿದ್ದರೂ ಜನರು ದೇವಾಲಯಕ್ಕೆ ಹೋಗಬಹುದೇ? ಹಾಗಿದ್ದರೆ ಜನಸಾಮಾನ್ಯರಿಗೂ ಆ ಅವಕಾಶ ನೀಡಬೇಕು. ನಿಯಮ ಉಲ್ಲಂಘಿಸಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ಅರ್ಚಕರಷ್ಟೇ ಹೊಣೆಯೇ, ಹೋದವರದ್ದಲ್ಲವೇ? ಎಂದು ಸಿಜೆ. ಎ.ಎಸ್.ಒಕಾ ನೇತೃತ್ವದ ಪೀಠ ಸರ್ಕಾರವನ್ನು ಪ್ರಶ್ನಿಸಿತು. ರಾಜಕಾರಣಿಗಳಿಗೆ ಇತರರಗಿಂತ ಹೆಚ್ಚು ಹೊಣೆಗಾರಿಕೆಯಿರುತ್ತದೆ. ಬಿ.ವೈ. ವಿಜಯೇಂದ್ರರಿಂದಲೂ ಕೋರ್ಟ್ ವಿವರಣೆ ಪಡೆಯಬಹುದು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಅಡ್ವೊಕೇಟ್ ಜನರಲ್ ಪ್ರತಿಕ್ರಿಯೆ ನೀಡಿದರು. ಇದೇ ವೇಳೆ ಪ್ರತಿಕ್ರಿಯಿಸಿದ ಕೋರ್ಟ್, ಈ ಪ್ರಕರಣ ಸಂಬಂಧಪಟ್ಟ ಎಲ್ಲರ ಕಣ್ತೆರೆಸಬೇಕು. ಅಧಿಕಾರಿಗಳು, ರಾಜಕಾರಣಿಗಳಿಗೆ ಅರಿವಾಗಬೇಕು ಎಂದು ನಿರ್ದೇಶನ ನೀಡಿತು.
ಕೊರೊನಾ ಹಾಗೂ ಲಾಕ್ಡೌನ್ ನಡುವೆಯೂ ನಂಜನಗೂಡು ದೇಗುಲದಲ್ಲಿ ಬಿ.ವೈ. ವಿಜಯೇಂದ್ರ ಪೂಜೆ ಮಾಡಿಸಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ಧ ಮೈಸೂರು ಜಿಲ್ಲಾಧಿಕಾರಿಗೆ ಈ ಮುನ್ನ ದೂರು ನೀಡಲಾಗಿತ್ತು. ಜಿಲ್ಲಾಧಿಕಾರಿಗಳಿಗೆ ಮೈಸೂರು ಜಿಲ್ಲಾ ಕಾಂಗ್ರೆಸ್ ಘಟಕ ಈ ಬಗ್ಗೆ ದೂರು ನೀಡಿದೆ. ವಿಜಯೇಂದ್ರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ದೂರಿನಲ್ಲಿ ತಿಳಿಸಲಾಗಿತ್ತು.
ಇದನ್ನೂ ಓದಿ:
ದೆಹಲಿ ಹಿಂಸಾಚಾರ ಪ್ರಕರಣದಲ್ಲಿ ಮೂವರು ವಿದ್ಯಾರ್ಥಿಗಳಿಗೆ ದೊರೆತಿರುವ ಜಾಮೀನು ತಡೆಹಿಡಿಯಲು ಸುಪ್ರೀಮ್ ಕೋರ್ಟ್ ನಕಾರ
Akshay Kumar: ಪಾಕಿಸ್ತಾನದ ಬಗ್ಗೆ ಅಕ್ಷಯ್ ಕುಮಾರ್ ಪ್ರೀತಿಯ ಮಾತು; ವಿಡಿಯೋ ವೈರಲ್ ಮಾಡಿದ ಕಮಾಲ್ ಖಾನ್
(Karnataka High Court asks state Govt on starting company to BBMP Waste Management)