ಬೆಂಗಳೂರು: ವಿಶ್ವ ಶಿಕ್ಷಣ, ಆರ್ಥಿಕ ಸಮಾವೇಶಗಳಲ್ಲಿ ಭಾಗವಹಿಸುವ ಹಿನ್ನೆಲೆ ಉನ್ನತ ಶಿಕ್ಷಣ ಮತ್ತು ಐಟಿ-ಬಿಟಿ ಇಲಾಖೆ ಸಚಿವ ಡಾ.ಅಶ್ವತ್ಥ್ ನಾರಾಯಣ(Dr Ashwath Narayan) ನಾಳೆ ಲಂಡನ್‌ಗೆ ತೆರಳಲಿದ್ದಾರೆ. ಲಂಡನ್ನಲ್ಲಿ ಮೇ 19ರಂದು ಕಾಮನ್‌ವೆಲ್ತ್ ರಾಷ್ಟ್ರಗಳ ಶಿಕ್ಷಣ ಸಮಾವೇಶ, ಮೇ 22ರಿಂದ ವರ್ಲ್ಡ್ ಎಜುಕೇಷನ್ ಫೋರಂ ಸಮಾವೇಶ ನಡೆಯಲಿದೆ ಹೀಗಾಗಿ ಸಮಾವೇಶದಲ್ಲಿ ಭಾಗಿಯಾಗಲು ಸಚಿವ ಡಾ.ಅಶ್ವತ್ಥ್ ನಾರಾಯಣ ನಾಳೆ ಲಂಡನ್‌ಗೆ ತೆರಳಲಿದ್ದಾರೆ.
ಲಂಡನ್ನಲ್ಲಿ ನಡೆಯುವ ಶಿಕ್ಷಣ ಸಮಾವೇಶದಲ್ಲಿ, 21ನೇ ಶತಮಾನದಲ್ಲಿ ರಾಷ್ಟ್ರೀಯ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಕಟ್ಟುವುದು ಹೇಗೆ? ಎಂಬ ವಿಷಯದ ಬಗ್ಗೆ ಡಾ.ಅಶ್ವತ್ಥ್ ನಾರಾಯಣ ಮಾತನಾಡಲಿದ್ದಾರೆ. ವರ್ಲ್ಡ್ ಎಜುಕೇಷನ್ ಫೋರಂನಲ್ಲಿ ಮೇ 22 ಮತ್ತು 23 ರಂದು ಸ್ಕಾಟ್ ಲ್ಯಾಂಡ್ ನಲ್ಲಿ ಇರುವ ಎಡಿನ್ ಬರೋ ವಿವಿ ಮತ್ತು ದುಂಡಿ ವಿವಿಗಳ ಮುಖ್ಯಸ್ಥರ ಜತೆ ಸಭೆಗಳನ್ನು ನಡೆಸಲಿದ್ದಾರೆ. ಇನ್ನು ಮೇ 26ರಿಂದ ಸ್ವಿಜರ್ಲೆಂಡಿನ ದಾವೋಸ್ನಲ್ಲಿ ವಿಶ್ವ ಆರ್ಥಿಕ ಸಮಾವೇಶ ನಡೆಯಲಿದೆ. ಅದರಲ್ಲೂ ಸಚಿವ ಡಾ.ಅಶ್ವತ್ಥ್ ನಾರಾಯಣ ಪಾಲ್ಗೊಳ್ಳಲಿದ್ದಾರೆ. ದಾವೋಸ್ನ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಡಾ.ಅಶ್ವತ್ಥ್ ನಾರಾಯಣ ಭಾಗವಹಿಸಲಿದ್ದಾರೆ. ಉನ್ನತ ಶಿಕ್ಷಣ ಇಲಾಖೆ ಎಸಿಎಸ್ ಕುಮಾರ ನಾಯಕ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್, ಉನ್ನತ ಶಿಕ್ಷಣ ಪರಿಷತ್ ಇಡಿ ಗೋಪಾಲ್ ಜೋಶಿ ಸಚಿವರ ಜೊತೆ ನಿಯೋಗದಲ್ಲಿ ತೆರಳಲಿದ್ದಾರೆ. ಇದನ್ನೂ ಓದಿ:Viral News: ಮೆರವಣಿಗೆಗೆ ಬರದೆ ಕುಡಿದು ಗೆಳೆಯರೊಂದಿಗೆ ಡ್ಯಾನ್ಸ್ ಮಾಡಿದ ವರ; ಬೇರೆಯವನನ್ನು ಮದುವೆಯಾದ ವಧು!
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
india nano conference: ಮಾರ್ಚ 7ರಂದು ಇಂಡಿಯಾ ನ್ಯಾನೋ ವರ್ಚುವಲ್ ಮೇಳ ಆರಂಭ ಬೆಂಗಳೂರು: ಇಂಡಿಯಾ ನ್ಯಾನೋ (India Nano) ಮೇಳ ಮಾರ್ಚ್ 7 ರಂದು ನಡೆಯಲಿದೆ ಎಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಡಾ. ಅಶ್ವಥ್ ನಾರಾಯಣ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಬೆಂಗಳೂರು ಇಂಡಿಯಾ ನ್ಯಾನೋ ಮೇಳ ಮಾರ್ಚ 7 ರಿಂದ 9ರವರೆಗೆ ವರ್ಚುವಲ್ ಆಗಿ ನಡೆಯಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಭಾಗವಹಿಸಲಿದ್ದಾರೆ. ನ್ಯಾನೋ ಸೈನ್ಸ್ ಮತ್ತು ನ್ಯಾನೋ ತಂತ್ರಜ್ಞಾನ ಕೇಂದ್ರೀಕರಿಸುವ ಭಾರತದ ಪ್ರಮುಖ ನ್ಯಾನೋ ಟೆಕ್ ಕಾರ್ಯಕ್ರಮವಾಗಿದ್ದು, ಸುಸ್ಥಿರ ಭವಿಷ್ಯಕ್ಕಾಗಿ ನ್ಯಾನೋಟೆಕ್ ಎಂಬ ಮುಖ್ಯ ವಿಷಯ ವಸ್ತುವಿನೊಂದಿಗೆ ಶೃಂಗ ಸಭೆ ನಡೆಯಲಿದೆ. ಕೆನಡಾ, ಜರ್ಮನಿ, ಇಸ್ರೇಲ್, ನಾರ್ತ್ ರೈನ್ ವೆಸ್ಟ್ ಫಾಲಿಯಾದ ಗ್ಲೋಬಲ್ ಇನ್ನೋವೇಷನ್ ಅಲಯನ್ಸ್ ನ ಪಾಲುದಾರರ ಜೊತೆಗೆ 2500ಕ್ಕೂ ಹೆಚ್ಚು ನೋಂದಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 75 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಭಾಷಣಕಾರರಿಂದ 25 ಸೆಷನ್ಗಳಲ್ಲಿ ಉಪನ್ಯಾಸ ನೀಡಲಿದ್ದು, 40ಕ್ಕೂ ಹೆಚ್ಚು ಕಂಪನಿಗಳಿಂದ ನ್ಯಾನೋ ಟೆಕ್ ಉತ್ಪನ್ನಗಳು, ಸೇವೆಗಳು ಮತ್ತು ನಾವೀನ್ಯತೆ ಮತ್ತು ಪೋಸ್ಟರ್ ಸೆಷನ್ ಮತ್ತು 150ಕ್ಕೂ ಹೆಚ್ಚು ಯುವ ಸಂಶೋಧಕರಿಂದ ಸಂಶೋಧನೆ ಪ್ರದರ್ಶನಗೊಳ್ಳಲಿದೆ.