Karnataka Legislative Council: ಪ್ರಮಾಣ ವಚನ ಸ್ವೀಕರಿಸಿದ ವಿಧಾನ ಪರಿಷತ್ ಏಳು ಸದಸ್ಯರು
ಜೆಡಿಎಸ್ ಸದಸ್ಯ ಟಿ.ಎ ಶರವಣ, ಬಿಜೆಪಿ ಸದಸ್ಯರಾದ ಲಕ್ಷಣ ಸವದಿ, ಛಲವಾದಿ ನಾರಾಯಣಸ್ವಾಮಿ, ಕೇಶವ ಪ್ರಸಾದ್, ಹೇಮಲತಾ, ಕಾಂಗ್ರೆಸ್‌ನ ಸದಸ್ಯರಾದ ನಾಗರಾಜ್, ಅಬ್ದುಲ್ ಜಬ್ಬಾರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಏಳು ಸದಸ್ಯರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಜೆಡಿಎಸ್ ಸದಸ್ಯ ಟಿ.ಎ ಶರವಣ, ಬಿಜೆಪಿ ಸದಸ್ಯರಾದ ಲಕ್ಷಣ ಸವದಿ, ಛಲವಾದಿ ನಾರಾಯಣಸ್ವಾಮಿ, ಕೇಶವ ಪ್ರಸಾದ್, ಹೇಮಲತಾ, ಕಾಂಗ್ರೆಸ್‌ನ ಸದಸ್ಯರಾದ ನಾಗರಾಜ್, ಅಬ್ದುಲ್ ಜಬ್ಬಾರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಹಂಗಾಮಿ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ, ಸಚಿವರಾದ ಆರ್ ಅಶೋಕ್, ಕೋಟ ಶ್ರೀನಿವಾಸ್ ಪೂಜಾರಿ ಉಪಸ್ಥಿತರಿದ್ದಾರೆ.
ಅಬ್ದುಲ್ ಜಬ್ಬಾರ್, ಅಲ್ಲಾಹ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಭಗವಂತನ ಹೆಸರಿನಲ್ಲಿ ನಾಗರಾಜ್ ಯಾದವ್ ಪ್ರಮಾಣ ವಚನ ಸ್ವೀಕರಿಸಿದ್ರು. ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಿನಲ್ಲಿ ಛಲವಾದಿ ನಾರಾಯಣಸ್ವಾಮಿ ಪ್ರಮಾಣವಚನ ಸ್ವೀಕರಿಸಿದ್ರೆ, ವಾಲ್ಮೀಕಿ ಹೆಸರಿನಲ್ಲಿ ಹೇಮಲತಾ ನಾಯಕ್ ಪ್ರಮಾಣವಚನ ಸ್ವೀಕರಿಸಿದ್ರು. ಹಾಗೂ ಭಗವಂತನ ಹೆಸರಿನಲ್ಲಿ ಲಕ್ಷ್ಮಣ ಸವದಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಶಿರಡಿ ಸಾಯಿಬಾಬಾ ಹಾಗೂ ತಿರುಪತಿ ವೆಂಕಟೇಶ್ವರ ಹೆಸರಿನಲ್ಲಿ ಶರವಣ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಎಟಿಎಂನಲ್ಲಿ ಒಂದಕ್ಕೆ ಐದರಷ್ಟು ಹಣ: ಎಟಿಎಂ ಎದುರು ಮುಗಿಬಿದ್ದ ಗ್ರಾಹಕರು
ವಿಧಾನ ಪರಿಷತ್‍ನ ಏಳು ಸದಸ್ಯರು ಜೂನ್ 14ರಂದು ನಿವೃತ್ತಿಯಾದರು. ಪ್ರತಿಪಕ್ಷ ಕಾಂಗ್ರೆಸ್‍ನ ಮೂವರು, ಜೆಡಿಎಸ್ ಹಾಗೂ ಆಡಳಿತಾರೂಢ ಬಿಜೆಪಿಯ ತಲಾ ಇಬ್ಬರು ಸದಸ್ಯರು ನಿವೃತ್ತಿ ಹೊಂದಿದ್ದರು. ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತ್ರ ಮರು ಆಯ್ಕೆಯಾಗಿದ್ದರು.
ಉಳಿದ ಆರು ಸದಸ್ಯರು ವಿಧಾನಸಭೆಯಿಂದ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ರ್ಪಧಿಸಿರಲಿಲ್ಲ. ಸ್ರ್ಪಧಿಸಲು ಅವರ ಪಕ್ಷಗಳು ಅವಕಾಶ ಮಾಡಿಕೊಟ್ಟಿರಲಿಲ್ಲ. ಬಿಜೆಪಿಯ ಲೆಹರ್ ಸಿಂಗ್, ಲಕ್ಷ್ಮಣ ಸವದಿ, ಜೆಡಿಎಸ್‍ನ ಹೆಚ್.ಎಂ.ರಮೇಶ್ ಗೌಡ, ಕೆ.ವಿ.ನಾರಾಯಣಸ್ವಾಮಿ, ಕಾಂಗ್ರೆಸ್‍ನ ಅಲ್ಲಂ ವೀರಭದ್ರಪ್ಪ, ಎಸ್. ವೀಣಾ ಅಚ್ಚಯ್ಯ ಹಾಗೂ ರಾಮಪ್ಪ ತಿಮ್ಮಾಪೂರ ಅವರು ನಿವೃತ್ತರಾಗಿದ್ದರು. ಇದನ್ನೂ ಓದಿ: Sippy Sidhu: ಶೂಟರ್ ಸಿಪ್ಪಿ ಸಿಧು ಹತ್ಯೆ ಪ್ರಕರಣ: 7 ವರ್ಷಗಳ ಬಳಿಕ ನ್ಯಾಯಮೂರ್ತಿ ಪುತ್ರಿ ಸಿಬಿಐ ವಶಕ್ಕೆ
ವಿಧಾನ ಸಭೆಯಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ಸ್ರ್ಪಧಿಸಿದ್ದ ಏಳು ಮಂದಿ ಅಭ್ಯರ್ಥಿಗಳು ಅವಿರೋಧವಾಗಿ ಅಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಸ್ರ್ಪಧಿಸಿದ್ದ ಲಕ್ಷ್ಮಣ ಸವದಿ, ಟಿ.ನಾರಾಯಣಸ್ವಾಮಿ, ಕೇಶವ ಪ್ರಸಾದ್, ಕಾಂಗ್ರೆಸ್‍ನಿಂದ ಸ್ರ್ಪಧಿಸಿದ್ದ ಎಂ.ನಾಗರಾಜು, ಕೆ.ಅಬ್ದುಲ್ ಜಬ್ಬಾರ್ ಹಾಗೂ ಜೆಡಿಎಸ್ ನಿಂದ ಸ್ರ್ಪಧಿಸಿದ್ದ ಟಿ.ಎ.ಶರವಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸದ್ಯ ಇಂದು ಇವರ ಪ್ರಮಾಣ ವಚನ ಕಾರ್ಯಕ್ರಮ ನಡೆದಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:26 pm, Thu, 16 June 22