Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 32,793 ಜನರಿಗೆ ಕೊರೊನಾ ದೃಢ; 7 ಮಂದಿ ಸಾವು

ಬೆಂಗಳೂರಿನಲ್ಲಿ ಇಂದು ಒಂದೇ ದಿನ 22,284 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 13,95,736 ಕ್ಕೆ ಏರಿಕೆಯಾಗಿದೆ. 13,95,736 ಸೋಂಕಿತರ ಪೈಕಿ 12,50,175 ಜನರು ಗುಣಮುಖರಾಗಿದ್ದಾರೆ.

Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 32,793 ಜನರಿಗೆ ಕೊರೊನಾ ದೃಢ; 7 ಮಂದಿ ಸಾವು
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಜನವರಿ 15) ಹೊಸದಾಗಿ 32,793 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 31,86,040 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,77,743 ಜನ ಗುಣಮುಖರಾಗಿ ಡಿಸ್ಚಾರ್ಜ್ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 7 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 38,418 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 1,69,850 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 22,284 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 13,95,736 ಕ್ಕೆ ಏರಿಕೆಯಾಗಿದೆ. 13,95,736 ಸೋಂಕಿತರ ಪೈಕಿ 12,50,175 ಜನರು ಗುಣಮುಖರಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇಂದು ಕೊರೊನಾ ಸೋಂಕಿನಿಂದ 5 ಮಂದಿ ಮೃತಪಟ್ಟಿದ್ದಾರೆ. ಅದರಂತೆ, ನಗರದಲ್ಲಿ ಕೊರೊನಾದಿಂದ ಈವರೆಗೆ 16,448 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 1,29,112 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ.

ಜಿಲ್ಲಾವಾರು ಕೊರೊನಾ ಪ್ರಕರಣಗಳ ವಿವರ

ಬಾಗಲಕೋಟೆ 106, ಬಳ್ಳಾರಿ 410, ಬೆಳಗಾವಿ 393, ಬೆಂಗಳೂರು ಗ್ರಾಮಾಂತರ 503, ಬೆಂಗಳೂರು ನಗರ 22,284, ಬೀದರ್ 171, ಚಾಮರಾಜನಗರ 93, ಚಿಕ್ಕಬಳ್ಳಾಪುರ 311, ಚಿಕ್ಕಮಗಳೂರು 196, ಚಿತ್ರದುರ್ಗ 204, ದಕ್ಷಿಣ ಕನ್ನಡ 792, ದಾವಣಗೆರೆ 153, ಧಾರವಾಡ 648, ಗದಗ 134, ಹಾಸನ 968, ಹಾವೇರಿ 17, ಕಲಬುರಗಿ 384, ಕೊಡಗು 150, ಕೋಲಾರ 541, ಕೊಪ್ಪಳ 93, ಮಂಡ್ಯ 718, ಮೈಸೂರು 729, ರಾಯಚೂರು 109, ರಾಮನಗರ 122, ಶಿವಮೊಗ್ಗ 305, ತುಮಕೂರು 1,326, ಉಡುಪಿ 607, ಉತ್ತರ ಕನ್ನಡ 237, ವಿಜಯಪುರ 76, ಯಾದಗಿರಿ ಜಿಲ್ಲೆಯಲ್ಲಿ 13 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.

ಕೊರೊನಾದಿಂದ ಮೃತಪಟ್ಟವರ ವಿವರ

ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ 5 ಮಂದಿ ಸಾವನ್ನಪ್ಪಿದ್ದಾರೆ. ಚಿಕ್ಕಬಳ್ಳಾಪುರ ಹಾಗೂ ಮೈಸೂರು ಜಿಲ್ಲೆಯಲ್ಲಿ ಕೊವಿಡ್​ನಿಂದ ಒಬ್ಬರು ಮೃತಪಟ್ಟಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಕೊರೊನಾದಿಂದ ಸಾವು ಸಂಭವಿಸಿಲ್ಲ.

ಇದನ್ನೂ ಓದಿ: ಆಸ್ಪತ್ರೆಗಳಿಗೆ ದಾಖಲಾಗಲು ಕರ್ನಾಟಕ ಸರ್ಕಾರದಿಂದ ಗೈಡ್​ಲೈನ್ಸ್ ಜಾರಿ; ಮುಂದಿನ 2 ವಾರ ಅನ್ವಯವಾಗುವಂತೆ ಆದೇಶ

ಇದನ್ನೂ ಓದಿ: ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಪ್ರಿಯಾಂಕ್ ಖರ್ಗೆಗೆ ಕೊರೊನಾ ದೃಢ, ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಕೆಲವೆಡೆ ಸಂಕ್ರಾಂತಿ ಆಚರಣೆ

Published On - 7:54 pm, Sat, 15 January 22

Click on your DTH Provider to Add TV9 Kannada