ಕಾಂಗ್ರೆಸ್ ಪಾದಯಾತ್ರೆಯಲ್ಲಿ ಪೊಲೀಸರು ಕೆಲಸವೇ ಮಾಡಿಲ್ಲ; ಡಿಕೆ ಶಿವಕುಮಾರ್ ಹೇಳಿಕೆ

ಮೇಕೆದಾಟು ಯೋಜನೆಯಿಂದ ಅರಣ್ಯ ನಾಶವಾಗುತ್ತದೆ ಎಂಬ ವಿಚಾರದ ಬಗ್ಗೆ ಮಾತನಾಡಿದ ಡಿಕೆಶಿ, ಮೇಧಾಪಾಟ್ಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಮೇಧಾ ಪಾಟ್ಕರ್ ಏನಾದರೂ ಮಾಡಿಕೊಳ್ಳಲಿ. ಅದಕ್ಕೆ ಸರ್ಕಾರದವರು ಉತ್ತರ ನೀಡಲಿ.

ಕಾಂಗ್ರೆಸ್ ಪಾದಯಾತ್ರೆಯಲ್ಲಿ ಪೊಲೀಸರು ಕೆಲಸವೇ ಮಾಡಿಲ್ಲ; ಡಿಕೆ ಶಿವಕುಮಾರ್ ಹೇಳಿಕೆ
ಡಿಕೆ ಶಿವಕುಮಾರ್

ಬೆಂಗಳೂರು: ಮೇಕೆದಾಟು (Mekedatu) ಯೋಜನೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ಸುಮಾರು 11 ದಿನಗಳ ಕಾಲ ಪಾದಯಾತ್ರೆ ನಡೆಸಲು ನಿರ್ಧರಿಸಿದ್ದರು. ಆದರೆ ಕೊರೊನಾ (Coronavirus) ಹೆಚ್ಚಾಗುತ್ತಿರುವ ಹಿನ್ನೆಲೆ ಐದನೇ ದಿನಕ್ಕೆ ಪಾದಯಾತ್ರೆ ಮೊಟಕುಗೊಳಿಸಿದ್ದರು. ಪಾದಯಾತ್ರೆ ವೇಳೆ ಕಾರ್ಯನಿರ್ವಹಿಸಿದ್ದ ಕೆಲ ಪೊಲೀಸರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ಕಾಂಗ್ರೆಸ್ ಪಾದಯಾತ್ರೆಯಲ್ಲಿ ಪೊಲೀಸರು ಕೆಲಸವೇ ಮಾಡಿಲ್ಲ. ನಮ್ಮ ಕಾರ್ಯಕರ್ತರೇ ನಮಗೆ ಭದ್ರತೆಯನ್ನು ನೀಡಿದ್ದರು ಅಂತ ಹೇಳಿದರು.

ಇನ್ನು ಮೇಕೆದಾಟು ಯೋಜನೆಯಿಂದ ಅರಣ್ಯ ನಾಶವಾಗುತ್ತದೆ ಎಂಬ ವಿಚಾರ ಬಗ್ಗೆ ಮಾತನಾಡಿದ ಡಿಕೆಶಿ, ಮೇಧಾಪಾಟ್ಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಮೇಧಾ ಪಾಟ್ಕರ್ ಏನಾದರೂ ಮಾಡಿಕೊಳ್ಳಲಿ. ಅದಕ್ಕೆ ಸರ್ಕಾರದವರು ಉತ್ತರ ನೀಡಲಿ. ನಾವು ಜನರ ಬದುಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಈ ಬಗ್ಗೆ ಸರ್ಕಾರವೇ ಒಂದು ಸಮಿತಿಯನ್ನು ರಚಿಸಲಿ ಎಂದು ಅಭಿಪ್ರಾಯಪಟ್ಟರು.

ಮೇಕೆದಾಟು ಯೋಜನೆಗಾಗಿ ಮತ್ತೆ ಪಾದಯಾತ್ರೆ ಮಾಡುತ್ತೇವೆ. ಸರ್ಕಾರ ಸ್ವಲ್ಪ ನಿಯಮ ಸಡಿಲಿಸಲಿ ಪಾದಯಾತ್ರೆ ಮಾಡುತ್ತೇವೆ. 50-100 ಜನಕ್ಕೆ ಅನುಮತಿ ಕೊಟ್ಟರೂ ಪಾದಯಾತ್ರೆ ಮಾಡುತ್ತೇವೆ ಅಂತ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ತಮಿಳುನಾಡಿನವರು ನಮ್ಮ ಸೋದರರು. ಅವರು ನಮ್ಮ ಸ್ನೇಹಿತರು. ನಾವು ಭಾರತದಲ್ಲಿ ಬದುಕುತ್ತಿದ್ದೇವೆ. ಕುಮಾರಸ್ವಾಮಿ ಬಳಿ ಹೊರ ರಾಜ್ಯದವರು ಕೆಲಸ ಮಾಡುತ್ತಿಲ್ಲವೇ. ಏನೋ ಬಾಯಿ ಚಪಲಕ್ಕೆ ಮಾತನಾಡ್ತಾರೆ ಮಾತನಾಡಲಿ ಅಂತ ಹೇಳಿದರು.

ನಮ್ಮ ವಿರುದ್ಧ ಮಾತ್ರ ಪ್ರಕರಣ ದಾಖಲು ಮಾಡಿದ್ದಾರೆ. ಬಿಜೆಪಿ ನಾಯಕರ ವಿರುದ್ಧ ಏಕೆ ಪ್ರಕರಣ ದಾಖಲು ಮಾಡಿಲ್ಲ. ನಾವು ಕೋರ್ಟ್ನಲ್ಲಿ ಈ ಬಗ್ಗೆಯೂ ಹೋರಾಡುತ್ತೇವೆ. ಕೇವಲ ಸರ್ಕಾರ ಅಲ್ಲ ಅಧಿಕಾರಿಗಳನ್ನ ಟಾರ್ಗೆಟ್ ಮಾಡ್ತೇವೆ . ಸರ್ಕಾರ ಎಚ್ಚೆತ್ತು ಎಲ್ಲರನ್ನೂ ಸಮನಾಗಿ ನೋಡದಿದ್ರೆ ಸರಿ ಇರಲ್ಲ. ಈಗ ಅದ್ಯಾವುದೋ ಹಳೇ ಹಳೇ ಕೇಸ್ ಓಪನ್ ಮಾಡಿದ್ದಾರೆ. ಆ ಕಾಲ ಬಂದೇ ಬರುತ್ತೆ. ನನ್ನ ಮೇಲೆ ಏನೇನು ಬೇಕೋ ಎಲ್ಲವನ್ನ ಮಾಡ್ತಾ ಇದ್ದಾರೆ. ಐಟಿ, ಇಡಿ ಸೇರಿ ಎಲ್ಲದರ ಬಗ್ಗೆ ಸಾಕ್ಷಿ ಸಮೇತ ಮಾತಾಡುವೆ. ಏನೇನು ತೊಂದರೆ ಕೊಡಬೇಕೋ ಕೊಡ್ತಾ ಇದ್ದಾರೆ ಅಂತ ಡಿಕೆಶಿ ಹೇಳಿದರು.

ಇದನ್ನೂ ಓದಿ

‘ಜಿಮ್​ನಲ್ಲಿ ಜೀವಿಸುವ ಸೈಕೋ’ ಅಂತ ಕರೆದುಕೊಂಡ ರಶ್ಮಿಕಾ ಮಂದಣ್ಣ; ಹೊಸ ಫೋಟೋ ವೈರಲ್​

ಲತಾ ಮಂಗೇಶ್ಕರ್​ಗೆ ಐಸಿಯುನಲ್ಲೇ ಮುಂದುವರಿದ ಚಿಕಿತ್ಸೆ; ಇನ್ನೂ 10 ದಿನ ವಿಶೇಷ ನಿಗಾದಲ್ಲಿ ಗಾಯಕಿ

Click on your DTH Provider to Add TV9 Kannada