ಬೆಂಗಳೂರು: ಮನೆಯ ಸಂಪ್‌ನಲ್ಲಿ ತಾಯಿ-ಮಗು ಮೃತದೇಹ ಪತ್ತೆ: ಸಾವಿನ ಕಾರಣ ನಿಗೂಢ!
ಮನೆಯ ಸಂಪ್‌ನಲ್ಲಿ ತಾಯಿ ಹಾಗೂ ಮಗುವಿನ ಮೃತದೇಹ ಪತ್ತೆಯಾದ ಘಟನೆ ಬೆಂಗಳೂರಿನ ಯಲಹಂಕ(Yalahanka) ನ್ಯೂಟೌನ್ ಬಳಿಯ ಈಸ್ಟ್ ಕಾಲೋನಿಯಲ್ಲಿ ನಡೆದಿದೆ. ಸ್ಥಳಕ್ಕಾಗಮಿಸಿದ ಯಲಹಂಕ ನ್ಯೂ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತ್ಮಹತ್ಯೆಯೋ ಅಥವಾ ಅಚನಾಕ್ಕಾಗಿ ಬಿದ್ದಿದ್ದಾರಾ ಎಂಬ ಕುರಿತು ತನಿಖೆ ನಡೆಸಿದ್ದಾರೆ.

ಬೆಂಗಳೂರು, ಏ.18: ಯಲಹಂಕ(Yalahanka) ನ್ಯೂಟೌನ್ ಬಳಿಯ ಈಸ್ಟ್ ಕಾಲೋನಿಯಲ್ಲಿ ಮನೆಯ ಸಂಪ್‌ನಲ್ಲಿ ತಾಯಿ ಹಾಗೂ ಮಗು ಮೃತದೇಹ ಪತ್ತೆಯಾಗಿದೆ. ಕವಿತಾ (40) ಹಾಗೂ ಪವನ್ (8) ಮೃತರು. ಸ್ಥಳಕ್ಕೆ ಯಲಹಂಕ ನ್ಯೂ ಟೌನ್ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಆತ್ಮಹತ್ಯೆಯೋ ಅಥವಾ ಅಚನಾಕ್ಕಾಗಿ ಬಿದ್ದಿದ್ದಾರಾ ಎಂಬ ಕುರಿತು ತನಿಖೆ ನಡೆಸಿದ್ದಾರೆ.
ಮನೆ ಮುಂದೆ ಪಾರ್ಕ್ ಮಾಡಿದ್ದ ಬೈಕ್ಗೆ ಕಾರು ಡಿಕ್ಕಿ
ಬೆಂಗಳೂರು: ಬಿಟಿಎಂ ಲೇಔಟ್ ಎರಡನೇ ಹಂತದ ಇ ಡಬ್ಲ್ಯು ಎಸ್ ಕಾಲೋನಿಯಲ್ಲಿ ಮನೆ ಮುಂದೆ ಪಾರ್ಕ್ ಮಾಡಿದ್ದ ಬೈಕ್ಗೆ ನಿಯಂತ್ರಣ ತಪ್ಪಿ ಕಾರೊಂದು ಡಿಕ್ಕಿಯಾಗಿದೆ. ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಬಳಿಕ 20 ಮೀಟರ್ ಎಳೆದುಕೊಂಡು ಸಾಗಿದೆ. ಬಳಿಕ ಗೋಡೆಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಷಾತ್ ಅಪಘಾತದಲ್ಲಿ ಯಾವುದೇ ಸಾವು- ನೋವು ಸಂಭವಿಸಿಲ್ಲ. ಅಪಘಾತ ಆಗುವ ಕೆಲವೇ ನಿಮಿಷಗಳ ಮುಂದಷ್ಟೇ ಪ್ರಿ ಸ್ಕೂಲ್ ಮಕ್ಕಳು ಶಾಲೆ ಮುಗಿಸಿ ಮನೆಗೆ ತೆರಳಿದ್ದರು. ಘಟನೆ ಬಳಿಕ ಮೈಕೋಲೇಔಟ್ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಲಾರಿ ಡಿಕ್ಕಿ; ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣ
ರಾಯಚೂರು: ಮಸ್ಕಿಯ ಅಶೋಕ ಶಿಲಾಶಾಸನ ರಸ್ತೆ ಬಳಿ ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಸಿಂಧನೂರು ಮೂಲದ ಶಾಮೀದ್ (22) ಹಾಗೂ ಸಲ್ಮಾ(10) ಮೃತರು. ಸಿಂಧನೂರಿನಿಂದ ಮುದಗಲ್‌ಗೆ ಮದುವೆಗೆ ತೆರಳುತ್ತಿದ್ದ ವೇಳೆ ಎದುರಿಗೆ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಈ ಕುರಿತು ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:03 pm, Thu, 18 April 24



