ಮಾರ್ಚ್ 9 ರಂದು ವಿಧಾನಸೌಧ ಸುತ್ತಮುತ್ತ ವಾಹನ ಸಂಚಾರಕ್ಕಿಲ್ಲ ಅವಕಾಶ
ಬೆಂಗಳೂರಿನಲ್ಲಿ ಭಾನುವಾರ ನಡೆಯಲಿರುವ ಕರ್ನಾಟಕ ಪೊಲೀಸ್ ರನ್‌ನ ಎರಡನೇ ಆವೃತ್ತಿಯಿಂದಾಗಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ. ವಿಧಾನಸೌಧದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಪಾರ್ಕಿಂಗ್‌ಗೆ ಅನುಮತಿಸಲಾದ ಸ್ಥಳಗಳು, ನಿರ್ಬಂಧಿಸಲಾದ ಪ್ರದೇಶಗಳ ಮಾಹಿತಿಯನ್ನು ಮತ್ತು ಸುಗಮ ಸಂಚಾರಕ್ಕಾಗಿ ಸೂಚನೆಗಳನ್ನು ಪಾಲಿಸಲು ಸಾರ್ವಜನಿಕರಿಗೆ ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ವಿಧಾನಸೌಧ
ವಿವೇಕ ಬಿರಾದಾರ
Updated on:
Mar 08, 2025 | 9:04 AM
ಬೆಂಗಳೂರು, ಮಾರ್ಚ್ 08: ಕರ್ನಾಟಕ ರಾಜ್ಯ ಪೊಲೀಸ್ (Karnataka Police) ಇಲಾಖೆಯ ವತಿಯಿಂದ 2ನೇ ಆವೃತ್ತಿಯ ರಾಜ್ಯ ಮಟ್ಟದ ಕರ್ನಾಟಕ ಪೊಲೀಸ್ ರನ್ (Karnataka Police Run) ಕಾರ್ಯಕ್ರಮವನ್ನು ಭಾನುವಾರ (ಮಾ.09) ರಂದು ಬೆಂಗಳೂರಿನಲ್ಲಿ (Bengaluru) ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮವು ವಿಧಾಸೌಧ ಮುಂಭಾಗದಲ್ಲಿರುವ ಗ್ರಾಂಡ್ ಸ್ಪಪ್ ಮೆಟ್ಟಿಲುಗಳಿಂದ ಆರಂಭವಾಗಲಿದ್ದು, ಕೆ.ಆರ್ ವೃತ್ತ, ನೃಪತುಂಗರಸ್ತೆ, ಕಸ್ತೂರಬಾ ರಸ್ತೆ, ಸಿದ್ದಲಿಂಗಯ್ಯ ವೃತ್ತ, ಕ್ಲೀನ್ಸ್ ಪ್ರತಿಮೆ ವೃತ್ತ, ಸಿಟಿಒ ಜಂಕ್ಷನ್, ಪೊಲೀಸ್ ತಿಮ್ಮಯ್ಯ ವೃತ್ತದ ಮೂಲಕ ವಿಧಾನಸೌಧವನ್ನು ತಲುಪಲಿದೆ. ಈ ಹಿನ್ನೆಲೆಯಲ್ಲಿ ವಿಧಾನಸೌಧ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ವಾಹನ ಸಂಚಾರ ನಿರ್ಬಂಧ
ವಿಧಾನಸೌಧದ ಕಡೆಗೆ ಸಂಚರಿಸುವ ವಾಹನಗಳನ್ನು ಕೆ.ಆರ್ ಸರ್ಕಲ್‌ನಲ್ಲಿ ಮಾರ್ಗ ಬದಲಾಯಿಸಿ ಪೊಲೀಸ್ ಕಾರ್ನರ್ ಕಡೆಗೆ ಚಲಿಸಲು ಅವಕಾಶ ಕಲ್ಪಿಸಲಾಗಿದೆ ಹಾಗೂ ವಿಧಾನಸೌಧದ ಕಡೆಗೆ ಯಾವುದೇ ವಾಹನಗಳ ಪ್ರವೇಶಕ್ಕೆ ಬೆಳಗ್ಗೆ 06:00 ರಿಂದ 10:00 ಗಂಟೆಯವರೆಗೆ ಅವಕಾಶವಿರುವುದಿಲ್ಲ.
ಬಾಳೇಕುಂದ್ರಿ ವೃತ್ತ ಮತ್ತು ಸಿಟಿಒ ಜಂಕ್ಷನ್‌ನಿಂದ ವಿಧಾನಸೌಧ ಕಡೆಗೆ ಹೋಗುವ ವಾಹನಗಳನ್ನು ಪೊಲೀಸ್ ತಿಮ್ಮಯ್ಯ ಜಂಕ್ಷನ್‌ನಲ್ಲಿ ರಾಜಭವನದ ಕಡೆಗೆ ಹಾಗೂ ಕನ್ನಿಂಗ್ ಹ್ಯಾಮ್ ರಸ್ತೆ ಕಡೆಗೆ ಕಳುಹಿಸಲಾಗುವುದು. ವಿಧಾನಸೌಧ ಕಡೆಗೆ ಯಾವುದೇ ವಾಹನಗಳ ಪ್ರವೇಶಕ್ಕೆ ಬೆಳಗ್ಗೆ 06:00 ರಿಂದ 10:00 ಗಂಟೆಯವರೆಗೆ ಅವಕಾಶವಿರುವುದಿಲ್ಲ.
ಹಳೆ ಮದ್ರಾಸ್ ರಸ್ತೆ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆಯ ಕಡೆಗೆ ಹೋಗುವ ವಾಹನಗಳನ್ನು ಪಡ್ಲನ್ ಜಂಕ್ಷನ್‌ನಿಂದ ದೇವಾಂಗ ರಸ್ತೆ, ಶಾಂತಿನಗರ ಮತ್ತು ರಿಚ್ಮಂಡ್ ವೃತ್ತಕ್ಕೆ ಕಳುಹಿಸಲಾಗುವುದು.
ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿರುವ ಸ್ಥಳಗಳು
ನೆಹರು ಪ್ಲಾನೆಟೋರಿಯಮ್ ಅವರಣ
ಹೈಕೋರ್ಟ್ ಪಾರ್ಕಿಂಗ್ ಪ್ರದೇಶ
ಎಂ.ಎಸ್ ಬಿಲ್ಡಿಂಗ್ ಸುತ್ತ ಮುತ್ತಲಿನ ಪ್ರದೇಶಗಳು
ಸ್ಕೌಟ್ ಆ್ಯಂಡ್ ಗೈಡ್ ಮೈದಾನ, ಅರಮನೆ ರಸ್ತೆ
ಶ್ರೀ ಕಂಠೀರದ ಸ್ಟೇಡಿಯಂ ಆವರಣ
ಸಾರ್ವಜನಿಕರ ಶಿಕ್ಷಣ ಇಲಾಖೆಯ ಕಟ್ಟಡದ ಅವರಣ
ಜ್ಞಾನ ಜ್ಯೋತಿ ಆಡಿಟೋರಿಯಂ ಆವರಣ
ಲೋಕೋಪಯೋಗಿ ಇಲಾಖಾ ಕಚೇರಿಯ ಆವರಣ. ಕೆ.ಆರ್. ವೃತ್ತ.
ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ಆವರಣ
ಯು.ಬಿ.ಸಿಟಿ (ಪಾವತಿ ಆಧಾರದ ಮೇಲೆ)
ಎಂ.ಎಲ್.ಸಿ.ಪಿ. ಪಾರ್ಕಿಂಗ್ ಫ್ರೀಡಂ ಪಾರ್ಕ್ ಹತ್ತಿರ (ಪಾವತಿ ಆಧಾರದ ಮೇಲೆ)
ಗ್ರಾಹಕರಿಗೆ ಸ್ಮಾರ್ಟ್ ಮೀಟರ್ ಶಾಕ್: ದರ ಶೇ.400ರಿಂದ 800ರಷ್ಟು ಏರಿಕೆ
ವಾಹನ ಸವಾರರ ಗಮನಕ್ಕೆ: ಇಂದಿನಿಂದ ಬೆಂಗಳೂರಿನ ಈ ಫ್ಲೈ ಓವರ್ ಬಂದ್
ನಮ್ಮ ಮೆಟ್ರೋ ದರ ಏರಿಕೆ ನಂತರ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚಳ: ವರದಿ
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ: ಹೆದ್ದಾರಿ ಪ್ರಾಧಿಕಾರ ಮಹತ್ವದ ಕ್ರಮ
ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮೆಟ್ರೊ ಮತ್ತು ಇತರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸಿ ಕಾರ್ಯಕ್ರಮದ ಸ್ಥಳವನ್ನು ತಲುಪಲು ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
Published On - 8:23 am, Sat, 8 March 25
Vivek Biradar
ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.