ವಾಣಿಜ್ಯ, ಕೈಗಾರಿಕಾ ವಲಯಕ್ಕೆ ಶಾಕ್ ಕೊಟ್ಟ ಕೆಇಆರ್​ಸಿ: ವಿರೋಧದ ನಡುವೆ ವಿದ್ಯುತ್​​ ದರ ಏರಿಕೆ

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (KERC) 2025-26ನೇ ಆರ್ಥಿಕ ವರ್ಷಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ವಲಯಕ್ಕೆ ಸಂಬಂಧಿಸಿ ವಿದ್ಯುತ್ ದರ ಏರಿಸಿದೆ. ತೀವ್ರ ವಿರೋಧದ ನಡುವೆಯೂ KERC ತನ್ನ ಭರವಸೆ ಮರೆತು ದರ ಏರಿಸಿದ್ದು, ಈ ನಿರ್ಧಾರಕ್ಕೆ ಉದ್ಯಮಿಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹೆಚ್ಚಳ ಆಗಿರುವ ದರದ ಸಂಪೂರ್ಣ ಮಾಹಿತಿ ಇಲ್ಲಿದೆ.

ವಾಣಿಜ್ಯ, ಕೈಗಾರಿಕಾ ವಲಯಕ್ಕೆ ಶಾಕ್ ಕೊಟ್ಟ ಕೆಇಆರ್​ಸಿ: ವಿರೋಧದ ನಡುವೆ ವಿದ್ಯುತ್​​ ದರ ಏರಿಕೆ
ಸಾಂದರ್ಭಿಕ ಚಿತ್ರ
Image Credit source: Google

Updated on: Mar 04, 2026 | 1:46 PM

ಬೆಂಗಳೂರು, ಮಾರ್ಚ್​​ 04: ವಾಣಿಜ್ಯ ಮತ್ತು ಕೈಗಾರಿಕಾ ವಲಯಕ್ಕೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಶಾಕ್​​ ಕೊಟ್ಟಿದೆ. 2025-26ರ ಆರ್ಥಿಕ ವರ್ಷಕ್ಕೆ ಅನ್ವಯಿಸುವಂತೆ ವಿದ್ಯುತ್ ದರ ಏರಿಕೆ ಮಾಡಲಾಗಿದ್ದು, ಈ ನಿರ್ಧಾರ ಖಂಡಿಸಿ ಕೈಗಾರಿಕೋದ್ಯಮಿಗಳು ಮತ್ತು ವಾಣಿಜ್ಯೋದ್ಯಮಿಗಳು ಗರಂ ಆಗಿದ್ದಾರೆ. ದರ ಏರಿಕೆ ಸಂಬಂಧ ಫೆಬ್ರವರಿ 20ರಂದು ಸಾರ್ವಜನಿಕರ ಜೊತೆ ಚರ್ಚೆ ನಡೆದಿದ್ದು, ಈ ವೇಳೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ವಿದ್ಯುತ್ ದರ ಏರಿಕೆ ಮಾಡಲ್ಲವೆಂದು ಕೆಇಆರ್​ಸಿ ಭರವಸೆ ನೀಡಿತ್ತು. ಆದರೀಗ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಯುಟರ್ನ್​​ ಹೊಡೆದಿರೋದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಯೂನಿಟ್​​ಗೆ ಎಷ್ಟು ದರ ಏರಿಕೆ?

  • LT-3(A) ವಾಣಿಜ್ಯ ಬಳಕೆ ವಿದ್ಯುತ್ ದರ ₹7ರಿಂದ ₹7.10ಕ್ಕೆ ಏರಿಕೆ
  • LT-5 ಕೈಗಾರಿಕೆಗೆ ಬಳಸುವ ವಿದ್ಯುತ್ ದರ ₹4.50ನಿಂದ ₹5.20ಕ್ಕೆ ಏರಿಕೆ
  • HT-2(A) ಮೆಟ್ರೋ, ರೈಲ್ವೆ & ಇತರೆ ವಿದ್ಯುತ್ ದರ ₹6.60ನಿಂದ 6.70ಕ್ಕೆ ಏರಿಕೆ
  • HT-2(B) ಕಾಂಪ್ಲೆಕ್ಸ್, ಥಿಯೇಟರ್, ಹೋಟೆಲ್​ಗೆ ಬಳಸು ವಿದ್ಯುತ್ ದರ 5.95 ರೂ.ನಿಂದ 6.90 ರೂ.ಗೆ ಏರಿಕೆ

ಇದನ್ನೂ ಓದಿ: ಕೆಪಿಎಸ್​ಸಿ ವಿರುದ್ಧ ಮತ್ತೆ ಅಕ್ರಮ ಆರೋಪ; ಧ್ವನಿ ಎತ್ತಿದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್

ಪ್ರಹ್ಲಾದ್ ಜೋಶಿ ಕಿಡಿ

KERCಯಿಂದ ವಾಣಿಜ್ಯ, ಕೈಗಾರಿಕೆ ಬಳಕೆ ವಿದ್ಯುತ್ ದರ ಹೆಚ್ಚಳ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ. ದರ ಏರಿಸುವುದರಲ್ಲಿ ರಾಜ್ಯ ಸರ್ಕಾರ ಹಾಫ್​ ಸೆಂಚುರಿ ಬಾರಿಸಿದೆ. ಇದುವರೆಗೆ 50ಕ್ಕೂ ಹೆಚ್ಚು ವಸ್ತುಗಳು, ಸೇವೆಗಳ ದರ ಹೆಚ್ಚಿಸಿದ್ದಾರೆ. ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ದರ ಹೆಚ್ಚಳಕ್ಕೆ ತೀರ್ಮಾನಿಸಿದ್ದು, ಇದು ಕಾಂಗ್ರೆಸ್ ದುರಾಡಳಿತದ ಪರಮಾವಧಿಯಾಗಿದೆ. ಕೈಗಾರಿಕೆಗಳು ಕರ್ನಾಟಕ ಬಿಟ್ಟೋಗುವಂತೆ ಈ ರೀತಿ ಮಾಡ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್ ಸರ್ಕಾರ ಕೈಗಾರಿಕಾ ವಿರೋಧಿಯಾಗಿದ್ದು, ಕರ್ನಾಟಕ ರಾಜ್ಯದ ಆರ್ಥಿಕ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಭ್ರಷ್ಟಾಚಾರ ಮಿತಿ ಮೀರಿದ್ದು, ವಿತ್ತೀಯ ಶಿಸ್ತು ಮಾಯವಾಗಿದೆ. ಕರ್ನಾಟಕ ರಾಜ್ಯದ ಒಟ್ಟು ಸಾಲ 8.4 ಲಕ್ಷ ಕೋಟಿಗೆ ತಲುಪಿದೆ ಎಂದವರು ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:35 pm, Wed, 4 March 26

Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Follow Us