ಉಕ್ರೇನ್​​ನಲ್ಲಿ ಕರ್ನಾಟಕದ 346 ವಿದ್ಯಾರ್ಥಿಗಳು ಸಿಲುಕಿರುವ ಮಾಹಿತಿ; ವಿದೇಶಾಂಗ ಇಲಾಖೆಯ ಮಾರ್ಗಸೂಚಿಯ ವೆಬ್ ಪೋರ್ಟಲ್ ಸ್ಥಾಪನೆ

ಉಕ್ರೇನ್‌ನ ಬೇರೆ ಕಡೆ ಪರಿಸ್ಥಿತಿ ನಮಗೆ ಗೊತ್ತಿಲ್ಲ. ನಾವಿರುವ ಕಡೆ ಸುರಕ್ಷಿತವಾಗಿದ್ದೇವೆ ಎಂದು ಉಕ್ರೇನ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಚಾಮರಾಜನಗರದ ವಿದ್ಯಾರ್ಥಿನಿ ಭೂಮಿಕಾ ಹೇಳಿಕೆ ನೀಡಿದ್ದಾರೆ.

ಉಕ್ರೇನ್​​ನಲ್ಲಿ ಕರ್ನಾಟಕದ 346 ವಿದ್ಯಾರ್ಥಿಗಳು ಸಿಲುಕಿರುವ ಮಾಹಿತಿ; ವಿದೇಶಾಂಗ ಇಲಾಖೆಯ ಮಾರ್ಗಸೂಚಿಯ ವೆಬ್ ಪೋರ್ಟಲ್ ಸ್ಥಾಪನೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Feb 25, 2022 | 4:42 PM

ಬೆಂಗಳೂರು: ಉಕ್ರೇನ್​​ನಲ್ಲಿ ಕರ್ನಾಟಕದ 346 ವಿದ್ಯಾರ್ಥಿಗಳು ಸಿಲುಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ಟಿವಿ9ಗೆ ಮಾಹಿತಿ ನೀಡಿದ್ದಾರೆ. ಕರ್ನಾಟಕ ಸರ್ಕಾರ ನಿಯೋಜಿಸಿರುವ ಆಯುಕ್ತರು, ರಾಜ್ಯದ 29 ಜಿಲ್ಲೆಗಳ 346 ಜನ ಉಕ್ರೇನ್​​ನಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅದರಂತೆ, ಉಕ್ರೇನ್ ನಲ್ಲಿ ಈವರೆಗೆ ರಾಜ್ಯದ 346 ಜನರು ಸಿಲುಕಿಕೊಂಡಿರುವ ಬಗ್ಗೆ ತಿಳಿದುಬಂದಿದೆ. ಬೆಂಗಳೂರು 115, ಮೈಸೂರು 30, ವಿಜಯಪುರ 24, ಬಾಗಲಕೋಟೆ 22, ತುಮಕೂರು 16, ಹಾವೇರಿ 14, ದಾವಣಗೆರೆ 12, ಚಿಕ್ಕಮಗಳೂರು 10, ಹಾಸನ 10, ರಾಯಚೂರು 10, ಚಿಕ್ಕಬಳ್ಳಾಪುರ 9, ದಕ್ಷಿಣ ಕನ್ನಡ 9, ಕೊಡಗು 9, ಬಳ್ಳಾರಿ 6, ಧಾರವಾಡ 6, ಉಡುಪಿ 6, ಗದಗ 5, ಕಲಬುರಗಿ 5, ಚಾಮರಾಜನಗರ 4, ಕೋಲಾರ 4, ಮಂಡ್ಯ 4, ಬೀದರ್ 3, ಚಿತ್ರದುರ್ಗ 3, ಶಿವಮೊಗ್ಗ 3, ರಾಮನಗರ 2, ಉತ್ತರ ಕನ್ನಡ 2, ವಿಜಯನಗರ 1, ಬೆಂಗಳೂರು ಗ್ರಾಮಾಂತರ, ಕೊಪ್ಪಳ ತಲಾ ಒಬ್ಬರು ಹೀಗೆ ಉಕ್ರೇನ್​​ನಲ್ಲಿ 346 ವಿದ್ಯಾರ್ಥಿಗಳು ಸಿಲುಕಿರುವ ಮಾಹಿತಿ ಲಭಿಸಿದೆ.

ಉಕ್ರೇನ್‌ನಲ್ಲಿ ನಾವು ಸುರಕ್ಷಿತವಾಗಿದ್ದೇವೆ. ಹೆದರುವಂತದ್ದು ಇಲ್ಲ. ಯುದ್ದ ನಡೆಯುತ್ತಿದೆ ಆದ್ರೆ ನಾವೆಲ್ಲ ಸುರಕ್ಷಿತ ಸ್ಥಳದಲ್ಲಿದ್ದೇವೆ. ಯುದ್ಧದ ಬಗ್ಗೆ ಮೊದಲೇ ತಿಳಿದಿದ್ದರಿಂದ 15-20 ದಿನಕ್ಕಾಗುವಷ್ಟು ಆಹಾರ ಶೇಖರಣೆ ಮಾಡಿಟ್ಟುಕೊಂಡಿದ್ದೇವೆ. ಉಕ್ರೇನ್‌ನ ಬೇರೆ ಕಡೆ ಪರಿಸ್ಥಿತಿ ನಮಗೆ ಗೊತ್ತಿಲ್ಲ. ನಾವಿರುವ ಕಡೆ ಸುರಕ್ಷಿತವಾಗಿದ್ದೇವೆ ಎಂದು ಉಕ್ರೇನ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಚಾಮರಾಜನಗರದ ವಿದ್ಯಾರ್ಥಿನಿ ಭೂಮಿಕಾ ಹೇಳಿಕೆ ನೀಡಿದ್ದಾರೆ.

ಉಕ್ರೇನ್ ‌ನಲ್ಲಿ ಉಡುಪಿಯ ಕಲ್ಯಾಣಪುರ ಮೂಲದ ವಿದ್ಯಾರ್ಥಿ ಕೂಡ ಸಿಲುಕಿದ್ದಾರೆ. ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿರುವ ಗ್ಲೆನ್ ವೀಲ್ ಮೆಕ್ಲಿನ್ ಫೆರ್ನಾಂಡೀಸ್, ಉಕ್ರೇನ್ ಹೋಗಿ 10 ದಿನವಾಯ್ತು ಎಂದು ತಿಳಿದುಬಂದಿದೆ. ಸದ್ಯಕ್ಕೆ ಮಗನನ್ನು ಸೇಫ್ ಬಂಕರ್ಗೆ ಶಿಫ್ಟ್ ಮಾಡಲಾಗಿದೆ. ಆದ್ರೆ ಅಲ್ಲಿ ಸರಿಯಾದ ಆಹಾರ ಸಿಗುತ್ತಿಲ್ಲ. ಪ್ರತಿ ಅರ್ಧ ಗಂಟೆಗೆ ಒಮ್ಮೆ ವಿಡಿಯೋ ಕಾಲ್ ಮಾಡಿ ನಾವು ಧೈರ್ಯ ತುಂಬುತ್ತಿದ್ದೇವೆ. ಆದರೂ ಯುದ್ದದ ಸ್ಥಿತಿಯನ್ನು ನೋಡಿದಾಗ ನಮಗೆ ಭಯವಾಗುತ್ತಿದೆ. ಸರ್ಕಾರ ಆದಷ್ಟು ಬೇಗ ಎಲ್ಲ ವಿಧ್ಯಾರ್ಥಿಗಳನ್ನು ಕರೆ ತರಬೇಕು ಎಂದು ಮೆಕ್ಲಿನ್ ಫೆರ್ನಾಂಡೀಸ್ ತಂದೆ ತಂದೆ ಮೆಲ್ವಿನ್ ಫೆರ್ನಾಂಡಿಸ್ ಹೇಳಿಕೆ ನೀಡಿದ್ದಾರೆ.

ಉಕ್ರೇನ್​ನಲ್ಲಿ ಇರುವ ಹಾಸನದ ಐವರು ವಿದ್ಯಾರ್ಥಗಳಿಗೂ ಆತಂಕ ಹೆಚ್ಚಿದೆ. ಕೀವ್ ನ ಇಂಟರ್ ನ್ಯಾಶನಲ್ ಯುನಿವರ್ಸಿಟಿಯಲ್ಲಿ ವೈದ್ಯಕೀಯ ಪದವಿ ನಡೆಯುತ್ತಿರೋ ವಿದ್ಯಾರ್ಥಿಗಳು, ಅಲ್ಲಿನ‌ ಆತಂಕ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ. ನಿನ್ನೆ ತುಂಬಾ ಭಯದ ವಾತಾವರಣ ಇತ್ತು. ಇಂದು ಸ್ವಲ್ಪ ತಿಳಿಯಾಗಿದೆ. ಕೀವ್ ನಿಂದ ಸುಮಿಗೆ ನಮ್ಮನ್ನು ಸ್ಥಳಾಂತರ ಮಾಡಿದ್ದಾರೆ. ನಿನ್ನೆ ಒಂದು ಕೋಣೆಯಲ್ಲಿ ತಮ್ಮನ್ನ ರಕ್ಷಿಸಿಟ್ಡ ಬಗ್ಗೆ ಫೋಟೊ ವೀಡಿಯೋ ಶೆರ್ ಮಾಡಿದ್ದಾರೆ. ನಿನ್ನೆ ನೂರಾರು ವಿದ್ಯಾರ್ಥಿಗಳಿಗೆ ಮೆಟ್ರೊ ಸ್ಟೇಷನ್ ನಲ್ಲಿ ಆಶ್ರಯ ಒದಗಿಸಲಾಗಿತ್ತು. ಇಂದು ಎಲ್ಲರನ್ನೂ ಸುಮಿ ಎಂಬ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಕೂಡಲೆ ಎಲ್ಲಾ ಭಾರತೀಯ ವಿದ್ಯಾರ್ಥಿಗಳನ್ನು ಬೇಗನೆ ಭಾರತಕ್ಕೆ ಕರೆತರಲು ಪೋಷಕರು ಮನವಿ ಮಾಡಿದ್ದಾರೆ. ಹಾಸನದ ವಿಜಯನಗರ ಬಡಾವಣೆ ಯ ವೇಣುಗೋಪಾಲ ಪುತ್ರಿ ಸಂಜನಾ ಹಾಗು ಇತರರು ಸುಮಿಯಲ್ಲಿ ನೆಲೆಸಿರೊ ಬಗ್ಗೆ ಪೋಷಕರ ಮಾಹಿತಿ ನೀಡಿದ್ದಾರೆ.

ಉಕ್ರೇನ್ ನಲ್ಲಿ ಸಿಲುಕಿರುವ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿ, ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ವಾಸಿ ತನ್ಮಯ, ಹಾಸ್ಟಲ್ ನ ಬಂಕರ್ ನಲ್ಲಿ ತಂಗಿದ್ದೇವೆ. ನಿನ್ನೆಗಿಂತ ಇಂದು ಬಾಂಬ್ ಸಿಡಿತದ ಶಬ್ದ ಹೆಚ್ಚಾಗಿದೆ. ರಷ್ಯಾ ಗಡಿ ಕೇವಲ 25 ಕೀಲೋ ಮೀಟರ್ ದೂರದಲ್ಲಿದೆ. ಈಗ ಊಟ ಕೊಟ್ಟಿದ್ದಾರೆ. ಅವಶ್ಯಕ ವಸ್ತುಗಳ ಖರೀದಿಗೆ ಈಗ ಅರ್ಧ ಗಂಟೆ ಸಮಯ ನೀಡಿದ್ದಾರೆ. ಇಂದು ಸ್ನೋ ಫಾಲ್ ಸಹ ಹೆಚ್ಚಾಗಿದೆ. ಬಂಕರ್​ನಲ್ಲಿ ಇನ್ನೂರು ಜನ ಇದ್ದೇವೆ. ಕರ್ನಾಟಕದವರೆ 35 ಜನ ಇದ್ದೇವೆ. ಭಾರತೀಯ ವಿದೇಶಾಂಗ ಇಲಾಖೆಯವರು ಸಂಪರ್ಕ ಮಾಡಿದ್ರು. ಈಗ ಮತ್ತೆ ಬಾಂಬಿಂಗ್ ಆರಂಭವಾಗಿದೆ. ನಮ್ಮ ಸುತ್ತಲು ಏನು ನಡೆಹಯುತ್ತಿದೆ ಅಂತ ಗೊತ್ತಾಗ್ತಿಲ್ಲ ಎಂದು ಭಯದಿಂದ ಪೋನ್ ಕಟ್ ಮಾಡಿದ್ದಾರೆ.

ವಿದೇಶಾಂಗ ಇಲಾಖೆಯ ಮಾರ್ಗಸೂಚಿ ಮಾಹಿತಿ ಹೊಂದಿರುವ ವೆಬ್ ಪೋರ್ಟಲ್ ಸ್ಥಾಪನೆ

ಯಾವುದೇ ಕನಿಷ್ಠ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳು ಬಂಧಿಯಾಗಿದ್ದಾರೆ. ಕೂಡಲೆ ತಮ್ಮ ಮಕ್ಕಳನ್ನ ವಾಪಸ್ ಕರೆಸಿ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. ನಿನ್ನೆಯೇ ಬಂಕರ್ ಗೆ ವಿದ್ಯಾರ್ಥಿಗಳನ್ನು ಸರ್ಕಾರ ಸ್ಥಳಾಂತರ ಮಾಡಿದೆ. ಮಕ್ಕಳ ಪರಿಸ್ಥಿತಿ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರ ಕುರಿತ ಮಾಹಿತಿಗಾಗಿ ವೆಬ್ ಪೋರ್ಟಲ್ ಸ್ಥಾಪಿಸಲಾಗಿದೆ. ಕೆಎಸ್​ಡಿಎಂಎ ವೆಬ್ ಪೋರ್ಟಲ್ ಸ್ಥಾಪಿಸಿದೆ. ಅಲ್ಲಿ ಸಿಲುಕಿರುವವರ ವಿವರ, ವಿದೇಶಾಂಗ ಇಲಾಖೆ ಮತ್ತು ಭಾರತ ಸರ್ಕಾರದ ವೆಬ್ ಸೈಟ್ ನಿಂದ ಸಂಗ್ರಹಿಸಿದ ಮಾಹಿತಿ, ಸಹಾಯವಾಣಿ ಸಂಖ್ಯೆ, ಇ-ಮೇಲ್, ವಿದೇಶಾಂಗ ಇಲಾಖೆಯ ಮಾರ್ಗಸೂಚಿ ಮಾಹಿತಿ ಹೊಂದಿರುವ ವೆಬ್ ಪೋರ್ಟಲ್ ಸ್ಥಾಪನೆ ಮಾಡಲಾಗಿದೆ.

ವೆಬ್​ ಪೋರ್ಟಲ್​ಗೆ ಈ ಲಿಂಕ್ ಕ್ಲಿಕ್ ಮಾಡಿ: ವೆಬ್ ಪೋರ್ಟಲ್

ಉಕ್ರೇನ್​​ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವಂತೆ ಮನವಿ ಮಾಡಲಾಗಿದೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಜೊತೆ ಮಾತುಕತೆ ನಡೆಸಲಾಗಿದೆ. ಜೈಶಂಕರ್​ ಜತೆ ರಾಜೀವ್ ಚಂದ್ರಶೇಖರ್ ಮಾತುಕತೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಎಸ್.ಜೈಶಂಕರ್ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Breaking: ಉಕ್ರೇನ್ ಶಸ್ತ್ರಾಸ್ತ್ರ ತ್ಯಜಿಸಿದರೆ ಮಾತುಕತೆಗೆ ಸಿದ್ಧ: ರಷ್ಯಾ ವಿದೇಶಾಂಗ ಸಚಿವರ ಮಹತ್ವದ ಹೇಳಿಕೆ

ಇದನ್ನೂ ಓದಿ: ‘ಏನು ಮಾಡುತ್ತೀರೋ ಮಾಡಿಕೊಳ್ಳಿ’; ಸಾಯುವ ಮುನ್ನ ಧೈರ್ಯದಿಂದ ರಷ್ಯಾ ಪಡೆಯನ್ನು ಎದುರಿಸಿದ ಉಕ್ರೇನ್ ಸೈನಿಕರು

Published On - 4:40 pm, Fri, 25 February 22

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್