AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಮಗಾರಿ ಕಾರಣ: ಬೆಂಗಳೂರು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

Namma Metro: ನೇರಳೆ ಮಾರ್ಗದ (ಪರ್ಪಲ್ ಲೈನ್) ರೈಲುಗಳ ಕಾರ್ಯಾಚರಣೆ ಆರಂಭವಾಗುವ ಬೈಯ್ಯಪ್ಪನಹಳ್ಳಿ ನಿಲ್ದಾಣದಲ್ಲಿ ಮೆಟ್ರೋ ಸಂಚಾರ ವ್ಯತ್ಯಯವಾಗಿದೆ.

ಕಾಮಗಾರಿ ಕಾರಣ: ಬೆಂಗಳೂರು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
ಬೆಂಗಳೂರು ನಮ್ಮ ಮೆಟ್ರೋ (ಪ್ರಾತಿನಿಧಿಕ ಚಿತ್ರ)
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Feb 25, 2022 | 5:51 PM

Share

ಬೆಂಗಳೂರು: ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದೆ. ಬೈಯ್ಯಪ್ಪನಹಳ್ಳಿ-ವೈಟ್​ಫೀಲ್ಡ್​​ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ನೇರಳೆ ಮಾರ್ಗದ (ಪರ್ಪಲ್ ಲೈನ್) ರೈಲುಗಳ ಕಾರ್ಯಾಚರಣೆ ಆರಂಭವಾಗುವ ಬೈಯ್ಯಪ್ಪನಹಳ್ಳಿ ನಿಲ್ದಾಣದಲ್ಲಿ ಮೆಟ್ರೋ ಸಂಚಾರ ವ್ಯತ್ಯಯವಾಗಿದೆ. ಪ್ಲಾಟ್​ಫಾರಂ 3ರಿಂದ ಮಾತ್ರವೇ ಆಗಮನ, ನಿರ್ಗಮನ ಸಂಚಾರ ನಿರ್ವಹಿಸಲಾಗುತ್ತಿದೆ. ಮಾರ್ಚ್ 2ರಿಂದ ಆರಂಭಿಸಿ ಮುಂದಿನ 6 ತಿಂಗಳ ಕಾಲದಲ್ಲಿ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ನಮ್ಮ ಮೆಟ್ರೋ ಮಾಧ್ಯಮ ಪ್ರಕಟಣೆ ನೀಡಿದೆ.

ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಮೆಟ್ರೊ

ಬೆಂಗಳೂರಿನ ಹಲವೆಡೆ ಮೆಟ್ರೋ ವಿಸ್ತರಣೆ ಕಾಮಗಾರಿಗಳು ಭರದಿಂದ ಸಾಗಿವೆ. ರಾತ್ರಿ ವೇಳೆ ನಡೆಯುತ್ತಿರುವ ಕಾಮಗಾರಿಗಳಿಂದ ತೊಂದರೆಯಾಗುತ್ತಿದೆ ಎಂದು ಬೆಂಗಳೂರಿನ ವಿವಿಧೆಡೆ ಜನರು ದೂರು ಸಲ್ಲಿಸಿದ್ದರು. ಮಕ್ಕಳು ಮತ್ತು ಹಿರಿಯ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂಬ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ನಿಗಮವು ರಾತ್ರಿ ಕಾಮಗಾರಿಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಕೊರೋನಾ ಹೊಡೆತದಿಂದ ಮೆಟ್ರೋಗೆ 905 ಕೋಟಿ ನಷ್ಟ!

ಕೊರೊನಾ ಪಿಡುಗು ವ್ಯಾಪಕವಾಗಿ ಹರಡಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ವಿಧಿಸಲಾಗಿದ್ದ ಲಾಕ್​ಡೌನ್​ನಿಂದಾಗಿ ಮೆಟ್ರೊ ಸಂಚಾರಕ್ಕೂ ನಿರ್ಬಂಧ ವಿಧಿಸಲಾಗಿತ್ತು. ಇದು ಮೆಟ್ರೋದ ಆದಾಯ ಗಳಿಕೆಯ ಮೇಲೆಯೂ ಪರಿಣಾಮ ಬೀರಿದೆ. ಮೆಟ್ರೋ ನಿಗಮವು 2020-21ರ ಸಾಲಿನಲ್ಲಿ ₹ 81.97 ಕೋಟಿ ಆದಾಯ ಗಳಿಸಿದೆ. 2019-20ರ ಸಾಲಿಗೆ ಹೋಲಿಸಿದರೆ ಇದು ಶೇ 83ರಷ್ಟು ನಷ್ಟ. ಒಟ್ಟಾರೆಯಾಗಿ ಮೆಟ್ರೊದಿಂದಾಗಿ ನಮ್ಮ ಮೆಟ್ರೋ ನಿಗಮನವು ಒಂದು ವರ್ಷದಲ್ಲಿ 905 ಕೋಟಿ ನಷ್ಟ ಅನುಭವಿಸಿತ್ತು.

ಇದನ್ನೂ ಓದಿ: ಮೊಬೈಲ್ ನೋಡ್ತಾ ಮೈಮರೆಯಬೇಡಿ; ಮೆಟ್ರೋ ನಿಲ್ದಾಣದಲ್ಲಿ ಮೊಬೈಲ್​ನಲ್ಲೇ ಮುಳುಗಿದ್ದ ವ್ಯಕ್ತಿಗೆ ಏನಾಯ್ತು ನೋಡಿ!

ಇದನ್ನೂ ಓದಿ: ಮೊಬೈಲ್​ ನೋಡುತ್ತಾ ಮೆಟ್ರೋ ಹಳಿಗೆ ಬಿದ್ದ ವ್ಯಕ್ತಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ