ಮುಷ್ಕರ ನಡೆಸದಂತೆ ಹೈಕೋರ್ಟ್ ಆದೇಶ: ಮೂರು ವಾರಗಳ ಕಾಲ ಮುಷ್ಕರ ಮುಂದೂಡಿದ ಸಾರಿಗೆ ನೌಕರರು
ಮೂರು ವಾರಗಳ ಕಾಲ ಯಾವುದೇ ಮುಷ್ಕರ ನಡೆಸದಂತೆ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದ ಹಿನ್ನಲೆ ಸಾರಿಗೆ ನೌಕರರು ನಾಳೆಯಿಂದ ನಿಗದಿಪಡಿಸಿದ್ದ ಮುಷ್ಕರವನ್ನು ಮೂರುವಾರಗಳ ಕಾಲ ಮುಂದೂಡಿದ್ದಾರೆ. ಈ ಬಗ್ಗೆ ಎಲ್ಲಾ ನೌಕಕರಿಗೂ ಮಾಹಿತಿ ನೀಡಲಾಗಿದೆ.
ಬೆಂಗಳೂರು: ಮೂರು ವಾರಗಳ ಕಾಲ ಯಾವುದೇ ಮುಷ್ಕರ ನಡೆಸದಂತೆ ಕರ್ನಾಟಕ ಹೈಕೋರ್ಟ್ (High Court Of Karnataka) ಆದೇಶ ಹೊರಡಿಸಿದ ಹಿನ್ನಲೆ ಸಾರಿಗೆ ನೌಕರರು ನಾಳೆಯಿಂದ ನಿಗದಿಪಡಿಸಿದ್ದ ಮುಷ್ಕರವನ್ನು (Karnataka Transport Employees Strike) ಮೂರುವಾರಗಳ ಕಾಲ ಮುಂದೂಡಿದ್ದು, ಎಲ್ಲಾ ನೌಕರರಿಗೂ ಮಾಹಿತಿ ನೀಡಲಾಗಿದೆ. ಈ ಬಗ್ಗೆ ವಿಲ್ಸನ್ ಗಾರ್ಡಾನ್ನಲ್ಲಿರುವ ನೌಕರರ ಕಚೇರಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದಿಂದ ಸುದ್ದಿಗೋಷ್ಠಿ ನಡೆಸಲಾಗಿದ್ದು, ಸಮಾನ ಮನಸ್ಕರ ವೇದಿಕೆಯ ರಾಜ್ಯಾಧ್ಯಕ್ಷ ಚಂದ್ರಶೇಖರ್, ಸಾರಿಗೆ ನೌಕರರ ಮುಖಂಡ ಎಸ್ ನಾಗರಾಜ್, ಸೇರಿದಂತೆ ಹಲವರು ಭಾಗಿಯಾಗಿದರು. ಈ ವೇಳೆ ಮಾತನಾಡಿದ ಚಂದ್ರಶೇಖರ್, ಕೋರ್ಟ್ ಆದೇಶ ಪಾಲಿಸಿ 3 ವಾರಗಳ ಕಾಲ ಮುಷ್ಕರ ಮುಂದೂಡಿದ್ದೇವೆ ಎಂದು ತಿಳಿಸಿದರು.
ಇದೊಂದು ರಾಜಕೀಯ ಪಿತೂರಿ ಎಂದು ಹೇಳಿದ ಚಂದ್ರಶೇಖರ್, ನಾಳೆಯಿಂದ ನಡೆಯಲಿದ್ದ ಮುಷ್ಕರಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ ಯಾರೋ ಮಹಾನುಭಾವರು ಕೋರ್ಟ್ಗೆ ಪಿಐಎಲ್ ಹಾಕಿದರು. ಅದರಂತೆ ಮೂರು ವಾರಗಳ ಕಾಲ ಯಾವುದೇ ಮುಷ್ಕರ ನಡೆಸದಂತೆ ಹೈಕೋರ್ಟ್ ಸೂಚಿಸಿದೆ. ಕೋರ್ಟ್ ಆದೇಶ ಪಾಲಿಸಿ 3 ವಾರಗಳ ಕಾಲ ಮುಷ್ಕರ ಮುಂದೂಡಿದ್ದೇವೆ. ಈ ಬಗ್ಗೆ ಎಲ್ಲಾ ನೌಕರರಿಗೆ ಮಾಹಿತಿ ನೀಡಿದ್ದೇವೆ. ಕಳೆದ ಬಾರಿ ಹೋರಾಟ ಮಾಡುವಾಗಲೂ ಇದೇ ರೀತಿ ಆಗಿತ್ತು ಎಂದರು. ಅಲ್ಲದೆ, ಪಿಐಎಲ್ ಹಾಕಿದ್ದ ಮಹಾನುಭಾವ ಸಾರಿಗೆ ನೌಕರರ ಸಮಸ್ಯೆ ತಿಳಿದುಕೊಳ್ಳಬೇಕಿತ್ತು ಎಂದು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ: ನಾಳಿನ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್: 3 ವಾರಗಳ ಕಾಲ ಯಾವುದೇ ಮುಷ್ಕರ ನಡೆಸದಂತೆ ಆದೇಶ
ಮುಂದಿನ ಸರ್ಕಾರದ ನಡೆಯನ್ನು ನೋಡಿಕೊಂಡು ನಾವು ಮುಷ್ಕರ ಮಾಡುತ್ತೇವೆ ಎಂದು ಹೇಳಿದ ಚಂದ್ರಶೇಖರ್, ನಾವು ಕಾನೂನು ಹೋರಾಟ ಮಾಡುತ್ತೇವೆ. ಪಿಎಲ್ ಹಾಕಿದವರ ಮಾಹಿತಿ ಪಡೆದು ಹೋರಾಟ ಮಾಡುತ್ತೇವೆ. ನಮಗೆ ಪಿಐಎಲ್ ಹಾಕಿರುವ ನಮಗೆ ಮಾಹಿತಿ ಇರಲಿಲ್ಲ. ಮಾಧ್ಯಮಗಳಲ್ಲಿ ಬಂದ ಮೇಲೆ ನಮಗೆ ಗೊತ್ತಾಗಿದೆ. ಕಳೆದ ಬಾರಿ ನಾವು ಹೋರಾಟ ಮಾಡುವಾಗಲೂ ಇದೇ ರೀತಿಯಾಗಿತ್ತು. ಇದೀಗಾ ಮತ್ತೆ ಇದೇ ರೀತಿಯಾ ಸಮಸ್ಯೆಯಾಗುತ್ತಿದೆ. ಮೊನ್ನೆಯ ಜಂಟಿ ಸಭೆಯಲ್ಲಿ ಒಳ ಒಪ್ಪಂದವನ್ನ ಮಾಡಿಕೊಂಡು ನೌಕರರ ಬಾಯಿಗೆ ಮಣ್ಣು ಹಾಕಿದ್ದಾರೆ. ಆದರೆ ಪಿಐಎಲ್ ಹಾಕಿದವರು ಸಾರಿಗೆ ನೌಕರರ ಸಮಸ್ಯೆಗಳೇನು ಅಂತ ತಿಳಿದುಕೊಳ್ಳಬೇಕು ಎಂದರು.
ಸಾರಿಗೆ ನೌಕರರ ಬೇಡಿಕೆಗಳೇನು?: ಸಾರಿಗೆ ನೌಕರರಿಗೆ ಶೇ 25 ರಷ್ಟು ವೇತನ ಹೆಚ್ಚಳ ಆಗಬೇಕು, ನೌಕರರ ಹಾಲಿ ಇರುವ ಬಾಟ, ಭತ್ಯೆಗಳು 5 ಪಟ್ಟು ಹೆಚ್ಚಿಸವೇಕು, ವೈದ್ಯಕೀಯ ಸೌಲಭ್ಯ ಕಲ್ಪಿಸುವುದು, ಎಲ್ಲಾ ನೌಕರರಿಗೆ ಪ್ರತಿ ತಿಂಗಳು ಹೊರರೋಗಿ ಚಿಕಿತ್ಸೆ ವೆಚ್ಚಕ್ಕಾಗಿ 2 ಸಾವಿರ ನೀಡಬೇಕು, ಕಳೆದ ಬಾರಿ ಮುಷ್ಕರ ವೇಳೆ ವಜಾಗೊಂಡ ನೌಕರರ ಮರುನೇಮಕ ಮಾಡುವುದು, ಹೆಚ್ಚುವರಿ ಕೆಲಸದ ಅವಧಿಗೆ ಟೈಮ್ ಭತ್ಯೆ ನೀಡಬೇಕು, ನೌಕರರಿಗೆ ಪಾಳಿ ವ್ಯವಸ್ಥೆ ಜಾರಿಯಾಗಬೇಕು, ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕ ನಿಲ್ಲಿಸಬೇಕು, ಎಲ್ಲ ನೌಕರರಿಗೆ ಗ್ರಾಚ್ಯೂಟಿ ನೀಡಬೇಕು, ಕೂಡಲೇ ಖಾಲಿ ಹುದ್ದೆಗಳನ್ನ ಭರ್ತಿ ಮಾಡಬೇಕು ಎಂಬುದು ನೌಕರರ ಬೇಡಿಕೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:29 pm, Thu, 23 March 23