ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ: ಹೂವು, ಹಣ್ಣುಗಳ ಬೆಲೆ ಹೆಚ್ಚಳ ಮಧ್ಯೆ ಖರೀದಿಗೆ ಮುಗಿಬಿದ್ದ ಜನ
Varamahalakshmi Festival: ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಹಬ್ಬದ ಸಂಭ್ರಮದ ಮಧ್ಯೆ ಜನರಿಗೆ ಬೆಲೆ ಏರಿಕೆ ಬಿಸಿತಟ್ಟಿದೆ. ಹೂವು, ಹಣ್ಣು ಮತ್ತು ತರಕಾರಿಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಆದರೂ ಜನರು ಮಾರುಕಟ್ಟೆಗಳತ್ತ ಹರಿದು ಬರುತ್ತಿದ್ದಾರೆ. ಯಾವುದರ ದರ ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ಆಗಸ್ಟ್ 08: ಇಂದು ನಾಡಿನೆಲ್ಲೆಡೆ ವರಮಹಾಲಕ್ಷ್ಮಿ ಹಬ್ಬದ (Varamahalakshmi Festival) ಸಂಭ್ರಮ. ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬವೂ ಒಂದು. ಹೀಗಾಗಿ ನಗರದ ಬಹುತೇಕ ಮಾರುಕಟ್ಟೆಗಳತ್ತ ಜನಸಾಗರವೇ (people) ಹರಿದು ಬರುತ್ತಿದ್ದು, ತರಕಾರಿ, ಹೂವು, ಹಣ್ಣು, ಪೂಜಾ ಸಾಮಾಗ್ರಿಗಳ ಬೆಲೆ ಹೆಚ್ಚಳ ಮಧ್ಯೆಯೂ ಖರೀದಿಗೆ ಜನರು ಮುಗಿಬೀಳುತ್ತಿದ್ದಾರೆ. ಕಳೆದ ವಾರಕ್ಕಿಂತ ಈ ವಾರ ಅಗತ್ಯ ವಸ್ತುಗಳ ದರ ಹೆಚ್ಚಳವಾಗಿದೆ.
ವರಮಹಾಲಕ್ಷ್ಮಿ ಹಬ್ಬ ಮಹಿಳೆಯರ ಅಚ್ಚುಮೆಚ್ಚಿನ ಹಬ್ಭ. ಹೀಗಾಗಿ, ಹೂವು, ಹಣ್ಣು, ತರಕಾರಿ ಸೇರಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ. ಬೆಳ್ಳಂಬೆಳಗ್ಗೆ ಕೆ.ಆರ್ ಮಾರ್ಕೆಟ್ಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡಿ ಅಗತ್ಯ ವಸ್ತುಗಳು ಖರೀದಿಸಿದರು. ಹಬ್ಬದ ಕಾರಣ ಹೂವು, ಹಣ್ಣುಗಳ ಬೆಲೆ ಡಬ್ಬಲ್ ಆಗಿದೆ.
ಯಾವುದರ ದರ ಎಷ್ಟಿದೆ?
ತರಕಾರಿ ಪ್ರಸ್ತುತ ದರ
- ಹುರುಳಿಕಾಯಿ 150 ರೂ
- ಕ್ಯಾಪ್ಸಿಕಂ 80 ರೂ
- ಬೀನ್ಸ್ 80 ರೂ
- ಬದನೆಕಾಯಿ 60 ರೂ
- ಹೂಕೋಸು 30 ರೂ
- ತೊಂಡೆಕಾಯಿ 45 ರೂ.
ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬ: ಮಾರುಕಟ್ಟೆಗಳಲ್ಲಿ ಹೂವು, ಹಣ್ಣುಗಳ ಬೆಲೆ ಗಗನಕ್ಕೆ, ಬೆಚ್ಚಿಬಿದ್ದ ಗ್ರಾಹಕ
ಹಣ್ಣುಗಳ ಪ್ರಸ್ತುತ ದರ
- ಸೇಬು 300 ರೂ
- ದಾಳಿಂಬೆ 280 ರೂ
- ಕಿತ್ತಳೆ 200 ರೂ
- ಮೂಸಂಬಿ 150 ರೂ
- ಸಪೋಟ 150 ರೂ
- ದ್ರಾಕ್ಷಿ 200 ರೂ
- ಸೀತಾಫಲ 200 ರೂ
ಹೂವಿನ ದರ
- ಕನಕಾಂಬರ 1600 ರೂ
- ಮಲ್ಲಿಗೆ, ಮಳ್ಳೆ ಹೂವು 900 ರೂ
- ಕಾಕಡ 800 ರೂ
- ಸೇವಂತಿಗೆ 800 ರೂ
- ಗುಲಾಬಿ 500 ರೂ
- ಕಣಗಲೆ 500 ರೂ
- ಸುಗಂಧರಾಜ 500 ರೂ
- ತಾವರೆ (ಜೋಡಿಗೆ) 150 ರೂ
- ಜೋಡಿ ಬಾಳೆಕಂದು 80 ರೂ
ಖಾಸಗಿ ಬಸ್ಗಳಿಂದ ಸುಲಿಗೆ
ಇಂದು ವರಮಹಾಲಕ್ಷ್ಮೀ ಹಬ್ಬ, ನಾಡಿದ್ದು ರಕ್ಷಬಂಧನ ಹಬ್ಬ, ಭಾನುವಾರ ರಜಾ ದಿನ ಹೀಗೆ 3 ದಿನ ಸಾಲು ಸಾಲು ರಜೆ ಬಂದಿದೆ. ಇದ್ರಿಂದ ಬೆಂಗಳೂರಿಂದ ಊರುಗಳತ್ತ ಜನ ತೆರಳ್ತಿದ್ದಾರೆ. ಖಾಸಗಿ ಬಸ್ನವರು ದುಪ್ಪಟ್ಟು ಟಿಕೆಟ್ ದರ ನಿಗದಿ ಮಾಡಿ ವಸೂಲಿ ಮಾಡ್ತಿದ್ದಾರೆ.
ಇದನ್ನೂ ಓದಿ: ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ಬೆಂಗಳೂರಿನಿಂದ ಮಂಗಳೂರಿಗೆ 700 ರೂ ಇದ್ದ ಟಿಕೆಟ್ ದರ ಈಗ 1200 ರೂ ಆಗಿದೆ. ಬೆಳಗಾವಿಗೆ 750 ರೂ ಇದ್ದ ಟಿಕೆಟ್ ದರ 1300ಕ್ಕೆ ಏರಿಕೆಯಾಗಿದೆ. ಹುಬ್ಬಳ್ಳಿಗೆ 900 ರೂ ಇದ್ದ ದರ ಈಗ 1500 ರೂ ಆಗಿದೆ. ಬಳ್ಳಾರಿಗೆ 600 ರೂಪಾಯಿ ಇದ್ದ ಬಸ್ ಟಿಕೆಟ್ ದರ 1000 ರೂ ಗಡಿ ದಾಟಿದೆ. ಟಿಕೆಟ್ ದರ ಏರಿಕೆಗೆ ಪ್ರಯಾಣಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ಪ್ರದೀಪ್
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




