AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀರಿನ ಕೊರತೆ ಎದುರಿಸಲು ರೆಡಿಯಾಗಬೇಕಿದ್ಯಾ ಕರ್ನಾಟಕ?: ಶಾಕಿಂಗ್​​ ಮಾಹಿತಿ ಬಿಚ್ಚಿಟ್ಟ ವರದಿ

ರಾಜ್ಯದಲ್ಲಿ ತೀವ್ರ ನೀರಿನ ಕೊರತೆಯ ಕುರಿತು ಆತಂಕಕಾರಿ ವರದಿ ಬಹಿರಂಗಗೊಂಡಿದೆ. ಈ ಬೇಸಿಗೆಯಲ್ಲಿ 207 ತಾಲೂಕುಗಳಲ್ಲಿ ನೀರಿನ ಅಭಾವ ಎದುರಾಗುವ ಸಾಧ್ಯತೆ ಇದ್ದು, ಈಗಾಗಲೇ 60 ತಾಲ್ಲೂಕುಗಳು ತೀವ್ರ ಸಂಕಷ್ಟದಲ್ಲಿವೆ. 2,258 ಗ್ರಾಮ ಪಂಚಾಯಿತಿಗಳನ್ನು ಅಪಾಯಕಾರಿ ಪ್ರದೇಶಗಳೆಂದು ಗುರುತಿಸಲಾಗಿದೆ. ಕೃಷ್ಣಾ-ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆ ಕೊರತೆಯು ಕೃಷಿ, ವನ್ಯಜೀವಿ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವರದಿ ಎಚ್ಚರಿಸಿದೆ.

ನೀರಿನ ಕೊರತೆ ಎದುರಿಸಲು ರೆಡಿಯಾಗಬೇಕಿದ್ಯಾ ಕರ್ನಾಟಕ?: ಶಾಕಿಂಗ್​​ ಮಾಹಿತಿ ಬಿಚ್ಚಿಟ್ಟ ವರದಿ
ಸಾಂದರ್ಭಿಕ ಚಿತ್ರImage Credit source: shutterstock.com
ಪ್ರಸನ್ನ ಹೆಗಡೆ
|

Updated on:Mar 30, 2026 | 11:34 AM

Share

ಬೆಂಗಳೂರು, ಮಾರ್ಚ್​​ 30: ದಿನದಿಂದ ದಿನಕ್ಕೆ ರಾಜ್ಯದಲ್ಲಿನ ಏರಿಕೆಯಾಗುತ್ತಿರುವ ಬೇಸಿಗೆ ತಾಪಮಾನವು ಕುಡಿಯುವ ನೀರಿನ ಸಂಕಷ್ಟಕ್ಕೆ ಕಾರಣವಾಗುವ ಸಾಧ್ಯತೆ ಇದೆ. ರಾಜ್ಯ ಮಟ್ಟದ ಹವಾಮಾನ ವೀಕ್ಷಣಾ ಸಮಿತಿಯ ಇತ್ತೀಚಿನ ವರದಿ ಪ್ರಕಾರ, ಈ ಬೇಸಿಗೆಯಲ್ಲಿ 207 ತಾಲೂಕುಗಳಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇದ್ದು, ಈಗಾಗಲೇ 60 ತಾಲ್ಲೂಕುಗಳು ತೀವ್ರ ನೀರಿನ ಅಭಾವವನ್ನು ಎದುರಿಸುತ್ತಿವೆ. ಜೊತೆಗೆ 2,258 ಗ್ರಾಮ ಪಂಚಾಯಿತಿಗಳನ್ನು ಅಪಾಯ ಪ್ರದೇಶಗಳಾಗಿ ಗುರುತಿಸಲಾಗಿದ್ದು, ಅವುಗಳಲ್ಲಿ 212 ಪಂಚಾಯಿತಿಗಳು ಈಗಾಗಲೇ ಗಂಭೀರ ನೀರಿನ ಸಂಕಷ್ಟದಲ್ಲಿವೆ ಎನ್ನಲಾಗಿದೆ.

31 ಜಿಲ್ಲೆಗಳ ಪೈಕಿ ಉತ್ತರ ಕನ್ನಡ (12), ಬೆಳಗಾವಿ (14), ಕಲಬುರಗಿ (11) ಮತ್ತು ತುಮಕೂರು (10) ಜಿಲ್ಲೆಗಳ ತಾಲೂಕುಗಳು ಹೆಚ್ಚು ಸಮಸ್ಯೆಗೆ ಒಳಗಾಗಿವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಲಬುರಗಿ (180), ಉತ್ತರ ಕನ್ನಡ (170), ಹಾವೇರಿ (138), ಮಂಡ್ಯ (130) ಮತ್ತು ಬೆಳಗಾವಿ (126) ಜಿಲ್ಲೆಗಳು ಹೆಚ್ಚು ಪರಿಣಾಮ ಎದುರಿಸುತ್ತಿವೆ. ಸಂಕಷ್ಟ ನಿವಾರಣೆಗೆ ಸರ್ಕಾರ ಒಟ್ಟು 60 ಟ್ಯಾಂಕರ್‌ಗಳನ್ನು ನಿಯೋಜಿಸಿದೆ. ಜೊತೆಗೆ 270 ಖಾಸಗಿ ಬೋರ್‌ವೆಲ್‌ಗಳನ್ನು ಬಳಸಿಕೊಂಡು 246 ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ.

ಇದನ್ನೂ ಓದಿ: ಎಸ್ಟಿಯವರ ಜಮೀನಿನಲ್ಲಿ ಎಸ್ಸಿ ಯುವಕ ನೀರು ಕುಡಿದಿದ್ದಕ್ಕೆ ಭಾರೀ ಗಲಾಟೆ; 24 ಮಂದಿಗೆ ಗಾಯ!

ಮಾರ್ಚ್​​ನಿಂದ ಮೇ ಅವಧಿಯ ತೀವ್ರ ಬೇಸಿಗೆಯಲ್ಲಿ ರಾಜ್ಯದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ಕಾಣಿಸಿಕೊಳ್ಳುವ ಸಾಧ್ಯತೆ ಅಂದಾಜಿಸಲಾಗಿದೆ. ಜುಲೈ-ಆಗಸ್ಟ್ ಅವಧಿಯಲ್ಲಿ ಕಡಿಮೆ ಮಳೆಯಾಗುವ ನಿರೀಕ್ಷೆ ಇದ್ದು, ಕೃಷ್ಣಾ ಮತ್ತು ಕಾವೇರಿ ನದಿ ತಟ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯ ಕೊರತೆ ಉಂಟಾಗಬಹುದು. ಇದರಿಂದ ಕೃಷಿ ಕಾರ್ಯಗಳಿಗೆ ಹಾನಿಯಾಗುವುದಲ್ಲದೆ, ನೀರಿನ ಕೊರತೆಯಿಂದ ಕಾಡು ಪ್ರಾಣಿಗಳು ಮಾನವ ವಸತಿಗಳತ್ತ ಬರುತ್ತಿರುವ ಸಾಧ್ಯತೆ ಇದೆ. ಜೊತೆಗೆ ಜನರಲ್ಲಿ ರೋಗಗಳ ಪ್ರಮಾಣವೂ ಹೆಚ್ಚಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:33 am, Mon, 30 March 26

Follow Us
Prasanna Hegde
Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಿದ್ ಶ್ರೀರಾಮ್ ಗಾಯನಕ್ಕೆ ಹಿನ್ನೆಲೆ ಸಂಗೀತದ ಅವಶ್ಯಕತೆಯೇ ಇಲ್ಲ: ವಿಡಿಯೋ
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ
ಬೆಂಗಳೂರಿನ ಆಟೋ ಚಾಲಕನಿಗೆ ಹಿಂದಿಯಲ್ಲಿ ನಿಂದಿಸಿದ ಮಹಿಳೆ
ಬ್ಲೌಸ್ ಹಿಂದೆ ಮೂಡಿತು ‘ಈ ಸಲ ಕಪ್ ನಮ್ದೇ’ ಡಿಸೈನ್
ಬ್ಲೌಸ್ ಹಿಂದೆ ಮೂಡಿತು ‘ಈ ಸಲ ಕಪ್ ನಮ್ದೇ’ ಡಿಸೈನ್
ಡಿಕೆ ಶಿವಕುಮಾರ್ ಸಿಎಂ ಆದ ಬಳಿಕ ಕುಮಾರಕೃಪಾ ಅತಿಥಿ ಗೃಹವೇ ಸರ್ಕಾರಿ ನಿವಾಸ?
ಡಿಕೆ ಶಿವಕುಮಾರ್ ಸಿಎಂ ಆದ ಬಳಿಕ ಕುಮಾರಕೃಪಾ ಅತಿಥಿ ಗೃಹವೇ ಸರ್ಕಾರಿ ನಿವಾಸ?
ಮಗು ಜನಿಸಿದ್ದಕ್ಕೆ ನೆಲಭೋಜನ ಮಾಡಿ ಹರಕೆ ತೀರಿಸಿದ ವಸಿಷ್ಠ ಸಿಂಹ, ಹರಿಪ್ರಿಯಾ
ಮಗು ಜನಿಸಿದ್ದಕ್ಕೆ ನೆಲಭೋಜನ ಮಾಡಿ ಹರಕೆ ತೀರಿಸಿದ ವಸಿಷ್ಠ ಸಿಂಹ, ಹರಿಪ್ರಿಯಾ