ಕರ್ನಾಟಕ ಹವಾಮಾನ ವರದಿ: ರಾಜ್ಯದ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗುವ ಮುನ್ಸೂಚನೆ

Karnataka Weather: ಕರ್ನಾಟಕದಲ್ಲಿ ಫೆಬ್ರವರಿ 26, 2026 ರಂದು ಮುಖ್ಯವಾಗಿ ಶುಷ್ಕ ಹವಾಮಾನವಿದ್ದು, ಉತ್ತರ ಒಳನಾಡು ಮತ್ತು ಕರಾವಳಿ ಭಾಗಗಳಲ್ಲಿ ಹಗುರ ಮಳೆಯ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನಲ್ಲಿ ಒಣ ಹವಾಮಾನ ಮುಂದುವರಿಯಲಿದ್ದು, ರಾಜ್ಯಾದ್ಯಂತ ತಾಪಮಾನ ಏರಿಕೆಯಾಗಲಿದೆ. ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನ ಬಿಸಿಲಿನ ತೀವ್ರತೆ ಹೆಚ್ಚಿರಲಿದೆ. ಮುನ್ನೆಚ್ಚರಿಕೆ ವಹಿಸಲು ಹವಾಮಾನ ಇಲಾಖೆ ಸೂಚಿಸಿದೆ.

ಕರ್ನಾಟಕ ಹವಾಮಾನ ವರದಿ: ರಾಜ್ಯದ ಕೆಲವು ಭಾಗಗಳಲ್ಲಿ ಹಗುರ ಮಳೆಯಾಗುವ ಮುನ್ಸೂಚನೆ
ಕರ್ನಾಟಕ ಹವಾಮಾನ
Image Credit source: Tv9 kannada

Updated on: Feb 26, 2026 | 6:28 AM

ಬೆಂಗಳೂರು, ಫೆ.26: ಕರ್ನಾಟಕದಲ್ಲಿ ಇಂದು (ಫೆಬ್ರವರಿ 26, 2026) ಮುಖ್ಯವಾಗಿ ಶುಷ್ಕ ಹವಾಮಾನವಿದ್ದು, ಕೆಲವು ಭಾಗಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನ 32°C ಮತ್ತು ಕನಿಷ್ಠ ತಾಪಮಾನ 20°C ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಕಲಬುರಗಿ, ಗದಗ ಮತ್ತು ವಿಜಯಪುರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲೂ ಹಗುರ ಮಳೆಯ ಮುನ್ಸೂಚನೆ ಇದೆ.

ಬೆಂಗಳೂರು (ನಗರ ಮತ್ತು ಗ್ರಾಮಾಂತರ), ಬಳ್ಳಾರಿ, ಚಾಮರಾಜನಗರ ಸೇರಿದಂತೆ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30°C ಮತ್ತು ಕನಿಷ್ಠ ತಾಪಮಾನ 19°C ಇರಲಿದ್ದು, ಆಕಾಶವು ಭಾಗಶಃ ಮೋಡದಿಂದ ಕೂಡಿರುತ್ತದೆ. ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಮಧ್ಯಾಹ್ನದ ಸಮಯದಲ್ಲಿ ಬಿಸಿಲು ಹೆಚ್ಚಿರಲಿದ್ದು, ಅಗತ್ಯ ಮುನ್ನೆಚ್ಚರಿಕೆ ವಹಿಸಿ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಆಕಾಶ ಮೋಡದಿಂದ ಕೂಡಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ತುಂತುರು ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ಸುಮಾರು 33°C ರಿಂದ 34°C ವರೆಗೆ ಇರಲಿದ್ದು, ಮಧ್ಯಾಹ್ನ ಸೆಖೆಯ ಅನುಭವ ಹೆಚ್ಚಿರಲಿದೆ. ಸಮುದ್ರದ ಕಡೆಯಿಂದ ಬರುವ ಗಾಳಿಯಿಂದಾಗಿ ತೇವಾಂಶ (Humidity) ಹೆಚ್ಚಿರಲಿದ್ದು, ಬೆವರುವಿಕೆ ಮತ್ತು ಉಸಿರುಕಟ್ಟಿದ ವಾತಾವರಣ ಕಂಡುಬರಬಹುದು. ಈ ಭಾಗಗಳಲ್ಲಿ ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣವಿರುತ್ತದೆ.

ಇನ್ನು ಇಂದು ಕಲಬುರಗಿಯಲ್ಲಿ ತೀವ್ರವಾದ ಬಿಸಿಲು ಇರಲಿದೆ. ಮಧ್ಯಾಹ್ನದ ಸಮಯದಲ್ಲಿ ಸೆಖೆ ಹೆಚ್ಚಾಗಿರುತ್ತದೆ.ಗರಿಷ್ಠ ತಾಪಮಾನ 36°C ತಲುಪಬಹುದು, ಕನಿಷ್ಠ ತಾಪಮಾನ 22°C ಇರಲಿದೆ. ಆಕಾಶವು ಬಹುತೇಕ ಸ್ವಚ್ಛವಾಗಿದ್ದು, ಮಳೆಯ ಸಾಧ್ಯತೆ ತೀರಾ ಕಡಿಮೆ. ಬೆಳಗಾವಿಯಲ್ಲಿ ಬಿಸಿಲು ಇದ್ದರೂ ಸಹ, ಆಕಾಶವು ಮೋಡದಿಂದ ಕೂಡಿರುತ್ತದೆ.ಬೆಳಗಾವಿಯ ಕೆಲವು ಭಾಗಗಳಲ್ಲಿ ಇಂದು ಹಗುರ ಮಳೆಯಾಗುವ ಸಾಧ್ಯತೆ ಇದೆ. ಗುಡುಗು ಸಹಿತ ಮಳೆಯಾದರೂ ಆಶ್ಚರ್ಯವಿಲ್ಲ. ಗರಿಷ್ಠ ತಾಪಮಾನ 32°C ಮತ್ತು ಕನಿಷ್ಠ ತಾಪಮಾನ 19°C ಇರಲಿದೆ. ಮಲೆನಾಡು ಭಾಗದಲ್ಲಿ ಹವಾಮಾನವು ಮಿಶ್ರಫಲವಾಗಿರಲಿದೆ. ಶಿವಮೊಗ್ಗದಲ್ಲಿ ಇಂದು ಆಕಾಶವು ಭಾಗಶಃ ಮೋಡದಿಂದ ಕೂಡಿರುತ್ತದೆ.

ಇದನ್ನೂ ಓದಿ: ಇಂದಿನಿಂದ ಶಿರಸಿ ಜಾತ್ರೆ ಶುಭಾರಂಭ; ಗದ್ದುಗೆ ಏರಿ ಕುಳಿತ ಮಾರಿಕಾಂಬಾ

ಮಲೆನಾಡಿನ ಘಟ್ಟ ಪ್ರದೇಶಗಳಲ್ಲಿ ಮತ್ತು ಶಿವಮೊಗ್ಗದ ಕೆಲವು ಭಾಗಗಳಲ್ಲಿ ಸಂಜೆ ಅಥವಾ ರಾತ್ರಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನ 33°C ಮತ್ತು ಕನಿಷ್ಠ ತಾಪಮಾನ 20°C ಇರಲಿದೆ. ಬೆಳಗಿನ ಜಾವ ತಂಪಾದ ಗಾಳಿ ಇರಲಿದ್ದು, ಮಧ್ಯಾಹ್ನ ಸ್ವಲ್ಪ ಸೆಖೆ ಇರುತ್ತದೆ. ಮೈಸೂರಿನಲ್ಲಿ ಸದ್ಯಕ್ಕೆ ಮಳೆಯ ಮುನ್ಸೂಚನೆ ಕಡಿಮೆ ಇದ್ದು, ಒಣ ಹವಾಮಾನವಿರುತ್ತದೆ. ಮೈಸೂರಿನಲ್ಲಿ ಇಂದು ಬಿಸಿಲು ಸ್ವಲ್ಪ ಜಾಸ್ತಿ ಇರಲಿದೆ. ಹಗಲಿನಲ್ಲಿ ತಾಪಮಾನ ಏರಿಕೆಯಾಗುವುದರಿಂದ ಸಾರ್ವಜನಿಕರಿಗೆ ಸೆಖೆಯ ಅನುಭವವಾಗಲಿದೆ.ಗರಿಷ್ಠ ತಾಪಮಾನ 34°C ವರೆಗೆ ತಲುಪಬಹುದು ಮತ್ತು ಕನಿಷ್ಠ ತಾಪಮಾನ 19°C ಇರಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Follow Us