ಬೆಂಗಳೂರು ವಿಮಾನ ನಿಲ್ದಾಣಕ್ಕೆ ಭಾರತದ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿ ಗರಿ
ಜೂನ್ 16 ರಂದು ಫ್ರಾನ್ಸ್‌ನ ಪ್ಯಾಸೆಂಜರ್ ಟರ್ಮಿನಲ್ ಎಕ್ಸ್‌ಪೋದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿತ್ತು. "ಈ ಕಾರ್ಯಕ್ರಮವು ವಿಮಾನ ನಿಲ್ದಾಣ ವಲಯಕ್ಕೆ ಅತ್ಯಂತ ಪ್ರತಿಷ್ಠಿತ ಗುಣಮಟ್ಟದ ಪ್ರಶಸ್ತಿಗಳಲ್ಲಿ ಒಂದಾಗಿದೆ..
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು (Kempegowda International Airport) 2022ರ ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಪ್ರಶಸ್ತಿಗಳಲ್ಲಿ (2022 Skytrax World Airport Awards) ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿಯನ್ನು ಪಡೆದುಕೊಂಡಿದೆ. ವಿಮಾನ ಪ್ರಯಾಣಿಕರ ಜಾಗತಿಕ ಸಮೀಕ್ಷೆಯು ಅತ್ಯುತ್ತಮ ಗ್ರಾಹಕ ಸೇವೆಯನ್ನು ಹೊಂದಿದೆ ಎಂದು ಹೇಳಿದ್ದರಿಂದ ಈ ಮನ್ನಣೆ ನೀಡಲಾಗಿದೆ ಎಂದು ಬೆಂಗಳೂರು ಏರ್‌ಪೋರ್ಟ್ ಹೇಳಿದೆ. ಚೆಕ್-ಇನ್‌ನಿಂದ ನಿರ್ಗಮನವರೆಗೆ, ಆಗಮನ ಮತ್ತು ವರ್ಗಾವಣೆ, ಭದ್ರತೆ ಮತ್ತು ವಲಸೆಯಿಂದ ಶಾಪಿಂಗ್‌ವರೆಗೆ, ಸಮೀಕ್ಷೆಯು ವಿಮಾನ ನಿಲ್ದಾಣದ ಸೇವೆ ಮತ್ತು ಪ್ರಮುಖ ಕಾರ್ಯಕ್ಷಮತೆಯ ಅಂಶಗಳಾದ್ಯಂತ ಗ್ರಾಹಕರ ಅನುಭವವನ್ನು ಮೌಲ್ಯಮಾಪನ ಮಾಡುತ್ತದೆ ಎಂದು ಬೆಂಗಳೂರು ವಿಮಾನ ನಿಲ್ದಾಣದ ಹೇಳಿಕೆ ತಿಳಿಸಿದೆ. ತಮಗೆ ಮತ ಹಾಕಿದ್ದಕ್ಕಾಗಿ ವಿಮಾನ ನಿಲ್ದಾಣವ ಧನ್ಯವಾದ ಸಂದೇಶವನ್ನು ಟ್ವೀಟ್ ಮಾಡಿದೆ. ಜೂನ್ 16 ರಂದು ಫ್ರಾನ್ಸ್‌ನ ಪ್ಯಾಸೆಂಜರ್ ಟರ್ಮಿನಲ್ ಎಕ್ಸ್‌ಪೋದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿತ್ತು. “ಈ ಕಾರ್ಯಕ್ರಮವು ವಿಮಾನ ನಿಲ್ದಾಣ ವಲಯಕ್ಕೆ ಅತ್ಯಂತ ಪ್ರತಿಷ್ಠಿತ ಗುಣಮಟ್ಟದ ಪ್ರಶಸ್ತಿಗಳಲ್ಲಿ ಒಂದಾಗಿದೆ, ಪ್ರಪಂಚದಾದ್ಯಂತದ ವಿಮಾನ ನಿಲ್ದಾಣಗಳ ಸಿಇಒಗಳು, ಅಧ್ಯಕ್ಷರು ಮತ್ತು ಹಿರಿಯ ಆಡಳಿತ ಮಂಡಳಿಯವರು ಕಾರ್ಯಕ್ರಮದಲ್ಲಿ ಹಾಜರಿದ್ದರು ಎಂದು ವಿಮಾನ ನಿಲ್ದಾಣವು ತಿಳಿಸಿದೆ.
ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಇತ್ತೀಚೆಗೆ ಪ್ರಯಾಣಿಕರಿಗೆ ಉತ್ತಮ ವ ವಿಶ್ರಾಂತಿಯ ಅನುಭವವನ್ನು ನೀಡಲು ಅಂತರಾಷ್ಟ್ರೀಯ ಮತ್ತು ದೇಶೀಯ ಲಾಂಜ್‌ಗಳನ್ನು ಅನಾವರಣಗೊಳಿಸಿದೆ. ಈ ಲಾಂಜ್ ಗಳಿಗೆ 080 ಲಾಂಜ್ ಎಂದು ಹೆಸರಿಡಲಾಗಿದೆ. 080 ಎಂಬುದು ಬೆಂಗಳೂರಿನ ಎಸ್ಟಿಡಿ ಕೋಡ್ .
#BLRAirport has been voted as the ‘Best Regional Airport in India & South Asia’ at the #Skytrax World Airport Awards 2022. Thank you to our passengers who appreciated our hard work & voted for us. @MoCA_GoI @skytrax_uk #bengaluru #airport #aviation #award #SkytraxAwards #win pic.twitter.com/4NuBJlA7Ff
— BLR Airport (@BLRAirport) June 17, 2022
ಉದ್ಯಮಿ ನರೇಶ್ ರಂಕಾ ಸೇಥಿಯಾ ಅವರು ಲಾಂಜ್‌ನ ಫೋಟೊಗಳನ್ನು ಹಂಚಿದ್ದು 080 ಲೌಂಜ್ ಅದ್ಭುತವಾದ ಆಹಾರ ಮತ್ತು ಆಹ್ಲಾದಕರ ವಾತಾವರಣ ಹೊಂದಿದೆ. ಶ್ರೀ ವೀರಭದ್ರಯ್ಯ ಅವರ ವೈಯಕ್ತಿಕ ಸೇವೆಯ ಸ್ಪರ್ಶವು ಅದನ್ನು ಇನ್ನಷ್ಟು ಉತ್ತಮಗೊಳಿಸಿದೆ.
ರಾಜ್ಯದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ