ಕೆಆರ್ ಪುರಂ ಪೊಲೀಸರಿಗೆ ದಂಗುಬಡಿಸಿದ ಮಗು ಕಿಡ್ನಾಪ್ ಕೇಸ್: ಪೋಷಕರ ಬೇಜವಾಬ್ದಾರಿಗೆ ಖಾಕಿ ಶಾಕ್
ಮೀನಾ ದಂಪತಿ ನಿನ್ನೆ(ಮೇ 11) ರಾತ್ರಿ ಸುಮಾರು 7.30ರ ವೇಳೆ ಕೆ.ಆರ್.ಪುರಂ ಪೊಲೀಸ್ ಠಾಣೆಗೆ ಬಂದು ತಮ್ಮ 6 ವರ್ಷದ ಮಗಳು ಕಿಡ್ನಾಪ್ ಆಗಿದ್ದಾಳೆ ಎಂದು ದೂರು ದಾಖಲಿಸಿದ್ದರು.
ಬೆಂಗಳೂರು: ಮಕ್ಕಳ ಮೇಲೆ ಪ್ರಾಣನೇ ಇಟ್ಟುಕೊಳ್ಳುವ ಪೋಷಕರು ಅವರಿಗೆ ಚಿಕ್ಕ ಗಾಯ, ಸಣ್ಣಪುಟ್ಟ ನೋವಾದರೂ ಸಹಿರೋದಿಲ್ಲ. ಅಂತಹದರಲ್ಲಿ ಕಣ್ಣ ಮುಂದೆ ಆಟ ಆಡುತ್ತಿದ್ದ ಪುಟ್ಟ ಮಗಳು ಕಾಣಿಸುತ್ತಿಲ್ಲ ಅಂದ್ರೆ ಎದೆ ಛಲ್ ಎನ್ನುತ್ತೆ. ಯಾರ್ ಕಿಡ್ನಾಪ್(Kidnap) ಮಾಡಿದ್ರೂ, ಎಲ್ಲಿದ್ದಾಳೋ, ಹೇಗಿದ್ದಾಳೋ, ತಿಂದ್ಲಾ ಎಂಬ ನಾನಾ ಪ್ರಶ್ನೆಗಳು ತಲೆಯಲ್ಲಿ ಸುಳಿದಾಡಿ ಬರೀ ಕೆಟ್ಟ ಯೋಚನೆಗಳೇ ಬಂದು ನಿಲ್ಲುತ್ತವೆ. ಮುಂದೇನು ಎಂದೂ ಚಿಂತಿಸಲಾಗದ ಸ್ಥಿತಿಗೆ ತಂದು ನಿಲ್ಲಿಸುತ್ತವೆ. ಇದೇ ರೀತಿ ಬೆಂಗಳೂರಿನಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಮಗಳು ಕಿಡ್ನಾಪ್ ಆಗಿದ್ದಾಳೆಂದು ಪೋಷಕರು ಕೇಸ್ ದಾಖಲಿಸಿದ್ದು ಪೋಷಕರ ಬೇಜವಾಬ್ದಾರಿಗೆ(Parents Negligence) ಪೊಲೀಸರೇ ಶಾಕ್ ಆಗಿದ್ದಾರೆ.
ಮೀನಾ ದಂಪತಿ ನಿನ್ನೆ(ಮೇ 11) ರಾತ್ರಿ ಸುಮಾರು 7.30ರ ವೇಳೆ ಕೆ.ಆರ್.ಪುರಂ ಪೊಲೀಸ್ ಠಾಣೆಗೆ ಬಂದು ತಮ್ಮ 6 ವರ್ಷದ ಮಗಳು ಕಿಡ್ನಾಪ್ ಆಗಿದ್ದಾಳೆ ಎಂದು ದೂರು ದಾಖಲಿಸಿದ್ದರು. ಮನೆ ಮುಂದೆ ಆಟವಾಡುತ್ತಿದ್ದ 6 ವರ್ಷದ ಮಗಳು ಈಗ ಕಾಣಿಸುತ್ತಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ದೂರಿನ್ವಯ ಕಿಡ್ನಾಪ್ ಕೇಸ್ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಮಗುವಿಗಾಗಿ ಹುಡುಕಾಟ ಶುರು ಮಾಡಿದರು. ಇದೇ ವೇಳೆ ಕಿಡ್ನಾಪ್ ಆದ ಸ್ಥಳದ ಅಂದ್ರೆ ಕೆ.ಆರ್.ಪುರಂ ಬಳಿಯ ಜನತಾ ಕಾಲೋನಿ ಬಳಿ ಕ್ಲೂ ಹುಡುಕಲು ಪೊಲೀಸರು ತೆರಳಿದ್ದ ವೇಳೆ ಮನೆಯಲ್ಲೂ ಹುಡುಕಾಟ ನಡೆಸಿದ್ದಾರೆ. ಆಗ ಬಟ್ಟೆ ಕೆಳಗೆ ಮಗಳು ಮಲಗಿರುವುದು ಕಂಡುಬಂದಿದೆ.
ಇದನ್ನೂ ಓದಿ: ಕಾರು-ಬೈಕ್ ನಡುವೆ ಭೀಕರ ಅಪಘಾತ, ಸ್ಥಳದಲ್ಲೆ ಇಬ್ಬರು ಸಾವು: ದ್ವೇಷಕ್ಕೆ ನಡೆಯಿತಾ ಅಪಘಾತ ರೀತಿಯ ಕೊಲೆ?
ಮಗಳು ಮಲಗಿದಾಗ ತಾಯಿ ಒಣಗಿದ್ದ ಬಟ್ಟೆಯನ್ನು ಮಗುವಿನ ಮೇಲೆ ತಂದು ಹಾಕಿದ್ರು. ಮಗು ಮಲಗಿ ಚೆನ್ನಾಗಿ ನಿದ್ರಿಸಿದ್ದ ಕಾರಣ ತಾಯಿ ಬಟ್ಟೆ ಹಾಕಿದ್ರೂ ಎಚ್ಚರಗೊಡಿರಲಿಲ್ಲ. ಹೀಗಾಗಿ ಕಣ್ಣಿಗೆ ಮಗಳು ಕಾಣದ ಕಾರಣ ಗಾಬರಿಯಾದ ಪೋಷಕರು ಕೇಸ್ ದಾಖಲಿಸಿ ಪೊಲೀಸರನ್ನೂ ಹುಡುಕಾಟಕ್ಕಚ್ಚಿದ್ದರು. ಕೆಲ ಕಾಲ ಆತಂಕ ಸೃಷ್ಠಿಯಾಗಿತ್ತು. ಮಗು ಸಿಕ್ಕಿದ್ದಕ್ಕೆ ಪೋಷಕರು ನಿರಾಳರಾಗಿದ್ದು ಪೋಷಕರ ಬೇಜವಾಬ್ದಾರಿತನಕ್ಕೆ ಪೊಲೀಸರು ಶಾಕ್ ಆಗಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:50 am, Fri, 12 May 23