Science Gallery: ಬೆಂಗಳೂರಿನ ಸೈನ್ಸ್ ಗ್ಯಾಲರಿಗೆ ಕಿರಣ್ ಮಜುಂದಾರ್, ರೋಹಿಣಿ ನಿಲೇಕಣಿ, ಕ್ರಿಸ್ ಗೋಪಾಲಕೃಷ್ಣನ್ ಜಂಟಿಯಾಗಿ ರೂ. 51 ಕೋಟಿ ಧನಸಹಾಯ
Bengaluru News: ಸೈನ್ಸ್ ಗ್ಯಾಲರಿಯ ಕಟ್ಟಡ ನಿರ್ಮಾಣಕ್ಕೆ ಖ್ಯಾತ ಉದ್ಯಮಿಗಳಾದ ಕಿರಣ್ ಮಜುಂದಾರ್ ಶಾ, ರೋಹಿಣಿ ನಿಲೇಕಣಿ ಮತ್ತು ಕ್ರಿಸ್ ಗೋಪಾಲಕೃಷ್ಣನ್ ಅವರು ಜಂಟಿಯಾಗಿ 51 ಕೋಟಿ ರೂ. ಧನಸಹಾಯ ನೀಡಿದ್ದಾರೆ.
ಬೆಂಗಳೂರು: ಬೆಂಗಳೂರಿನ ಸೈನ್ಸ್ ಗ್ಯಾಲರಿಯ (Science Gallery) ಕಟ್ಟಡ ನಿರ್ಮಾಣಕ್ಕೆ ಖ್ಯಾತ ಉದ್ಯಮಿಗಳಾದ ಕಿರಣ್ ಮಜುಂದಾರ್ ಶಾ (Kiran Mazumdar Shaw), ರೋಹಿಣಿ ನಿಲೇಕಣಿ (Rohini Nilekani) ಮತ್ತು ಕ್ರಿಸ್ ಗೋಪಾಲಕೃಷ್ಣನ್ (Kris Gopalakrishnan) ಅವರು ಜಂಟಿಯಾಗಿ 51 ಕೋಟಿ ರೂ. ಧನಸಹಾಯ ನೀಡಿದ್ದಾರೆ. ಈ ಸೈನ್ಸ್ ಗ್ಯಾಲರಿಯಲ್ಲಿ ಸಂಶೋಧನೆ ಆಧಾರಿತ ಕಾರ್ಯಗಳು ನಡೆಯಲಿವೆ. ಇದು ಮುಂದಿನ ವರ್ಷದಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದು ಸೈನ್ಸ್ ಗ್ಯಾಲರಿಯ ಸಂಸ್ಥಾಪಕ ನಿರ್ದೇಶಕಿ ಡಾ. ಜಾಹ್ನವಿ ಫಾಲ್ಕೆ ಹೇಳಿದ್ದಾರೆ.
ಲಾಭರಹಿತ ಸಾರ್ವಜನಿಕ ಸಂಸ್ಥೆಯಾದ ಸೈನ್ಸ್ ಗ್ಯಾಲರಿ ಬೆಂಗಳೂರು (SGB)ಗೆ ಜಂಟಿಯಾಗಿ ಈ ಮೂವರು 51 ಕೋಟಿ ರೂ. ಕೊಡುಗೆ ನೀಡಿದ್ದಾರೆ. ಈ ನಿಧಿಯು ಕರ್ನಾಟಕ ಸರ್ಕಾರವು ಮಾಡಿದ ಬಂಡವಾಳ ಹೂಡಿಕೆಗೆ ಸೇರಿಕೊಳ್ಳುತ್ತದೆ. ಈ ಕಟ್ಟಡದಲ್ಲಿ ನೈಸರ್ಗಿಕ ವಿಜ್ಞಾನ ಪ್ರಯೋಗಾಲಯ, ಆಹಾರ ಪ್ರಯೋಗಾಲಯ, ವಸ್ತು ಪ್ರಯೋಗಾಲಯ, ನ್ಯೂ ಮೀಡಿಯಾ ಪ್ರಯೋಗಾಲಯ ಮುಂತಾದ ವ್ಯವಸ್ಥೆಗಳು ಇರುತ್ತವೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರಿಯಕರನ ಜೊತೆ ಸೇರಿ ಕಟ್ಟಿಕೊಂಡ ಗಂಡನನ್ನೇ ಕೊಂದಿದ್ದ ಪತ್ನಿ ಪೊಲೀಸ್ ಬಲೆಗೆ
ಬಯೋಕಾನ್ ಆ್ಯಂಡ್ ಬಯೋಕಾನ್ ಬಯಾಲಜೀಸ್ ಮುಖ್ಯಸ್ಥರಾದ ಕಿರಣ್ ಮಜುಂದಾರ್ ಶಾ, ಎಕ್‌ಸ್ಟೆಪ್ ಫೌಂಡೇಶನ್‌ನ ಸಹ-ಸ್ಥಾಪಕರು ಮತ್ತು ನಿರ್ದೇಶಕರಾದ ರೋಹಿಣಿ ನಿಲೇಕಣಿ, ಆಕ್ಸಿಲರ್ ವೆಂಚರ್ಸ್‌ನ ಅಧ್ಯಕ್ಷರು ಮತ್ತು ಇನ್ಫೋಸಿಸ್‌ನ ಸಹ-ಸಂಸ್ಥಾಪಕರಾದ ಕ್ರಿಸ್ ಗೋಪಾಲಕೃಷ್ಣನ್ ಎಲ್ಲರೂ ಸೈನ್ಸ್ ಗ್ಯಾಲರಿಯ ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದಾರೆ.
ಇದು ಅಂತಾರಾಷ್ಟ್ರೀಯ ನೆಟ್‌ವರ್ಕ್‌ನಲ್ಲಿ ಯಾವುದೇ ಸೈನ್ಸ್ ಗ್ಯಾಲರಿಗೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಇದುವರೆಗೂ ನೀಡಿರುವ ಅತ್ಯಧಿಕ ಕೊಡುಗೆಯಾಗಿದೆ ಎನ್ನಲಾಗಿದೆ. ಕರ್ನಾಟಕ ಸರ್ಕಾರವು ಈ ಸೈನ್ಸ್ ಗ್ಯಾಲರಿಯ ನಿರ್ಮಾಣಕ್ಕಾಗಿ ಭೂಮಿ ಮತ್ತು ಆರಂಭಿಕ ಬಂಡವಾಳವನ್ನು ಒದಗಿಸಿದೆ. ಪ್ರತಿ ವರ್ಷ ಅದರ ಕಾರ್ಯಾಚರಣೆಯ ವೆಚ್ಚದ ಮೂರನೇ 1 ಭಾಗವನ್ನು ಭರಿಸುವ ಮೂಲಕ ಸಂಸ್ಥೆಯನ್ನು ಬೆಂಬಲಿಸಲು ಬದ್ಧವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Tue, 15 November 22