ದಕ್ಷಿಣ ಭಾರತಕ್ಕೆ ಎದುರಾಗಲಿದೆಯೇ ಭೀಕರ ಅಪಾಯ?: ಕೋಡಿಶ್ರೀಗಳ ಭವಿಷ್ಯಕ್ಕೆ ಪೂರಕವಾಯಿತೇ ಅಮೆರಿಕದ ಎಲ್ ನಿನೋ ಸೈನ್ಸ್ ರಿಪೋರ್ಟ್

ಕೋಡಿಮಠದ ಶ್ರೀಗಳು ದಕ್ಷಿಣ ಭಾರತಕ್ಕೆ ಪ್ರವಾಹದ ಭವಿಷ್ಯ ನುಡಿದರೆ, ಅಮೆರಿಕಾದ ಎಲ್ ನಿನೋ ವರದಿ ತೀವ್ರ ತಾಪಮಾನ ಏರಿಕೆ ಮತ್ತು ಬರಗಾಲದ ಭೀತಿ ತೋರಿದೆ. ಎರಡೂ ಭವಿಷ್ಯವಾಣಿಗಳು ಅಪಾಯವನ್ನು ಸೂಚಿಸಿದರೂ, ನಿರ್ದಿಷ್ಟವಾಗಿ ಮುಂಗಾರಿನ ಪರಿಣಾಮ ಮತ್ತು ಮಳೆ ವಿಷಯದಲ್ಲಿ ವಿಭಿನ್ನವಾಗಿವೆ. ಈ ಭಿನ್ನಾಭಿಪ್ರಾಯಗಳು ರಾಜ್ಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿವೆ.

ದಕ್ಷಿಣ ಭಾರತಕ್ಕೆ ಎದುರಾಗಲಿದೆಯೇ ಭೀಕರ ಅಪಾಯ?: ಕೋಡಿಶ್ರೀಗಳ ಭವಿಷ್ಯಕ್ಕೆ ಪೂರಕವಾಯಿತೇ ಅಮೆರಿಕದ ಎಲ್ ನಿನೋ ಸೈನ್ಸ್ ರಿಪೋರ್ಟ್
ಎಲ್ ನಿನೋ ವರದಿ, ಕೋಡಿಶ್ರೀ ಭವಿಷ್ಯ
Edited By:

Updated on: Sep 26, 2026 | 6:34 PM

ಬೆಂಗಳೂರು, ಸೆ.26: ಇತ್ತೀಚೆಗೆ ಅರಸೀಕೆರೆ ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಡಾಕ್ಟರ್ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಮುಂದಿನ ಆರು ತಿಂಗಳಲ್ಲಿ ಭಾರತಕ್ಕೆ, ಅದರಲ್ಲಿಯೂ ವಿಶೇಷವಾಗಿ ದಕ್ಷಿಣ ಭಾರತಕ್ಕೆ ದೊಡ್ಡ ಅಪಾಯ ಎದುರಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ಇದರ ಬೆನ್ನಲ್ಲೇ, ಎಲ್ ನಿನೋಗೆ ಸಂಬಂಧಿಸಿದಂತೆ ಅಮೆರಿಕಾದ ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್ ಬಿಡುಗಡೆ ಮಾಡಿದ ಅಧ್ಯಯನ ವರದಿಯು ಕೋಡಿಶ್ರೀಗಳ ಭವಿಷ್ಯಕ್ಕೆ ಪೂರಕವಾಗಿರುವ ಅಂಶಗಳನ್ನು ಒಳಗೊಂಡಿದೆ ಎಂಬ ಚರ್ಚೆಗಳು ವ್ಯಾಪಕವಾಗಿವೆ.

ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್ಸ್ಟಿಟ್ಯೂಟ್‌ನ ಸಂಶೋಧನಾ ವಿಭಾಗದ ಕ್ಲೈಮೇಟ್ ಇಂಪ್ಯಾಕ್ಟ್ ಲ್ಯಾಬ್ ವರದಿಯ ಪ್ರಕಾರ, ಸೂಪರ್ ಎಲ್ ನಿನೋ ಪರಿಣಾಮವು ಭಾರತಕ್ಕೆ ಬಹುವಾಗಿ ಕಾಡಲಿದೆ. ಈ ಅಧ್ಯಯನದ ವರದಿಯು ದಕ್ಷಿಣ ಭಾರತದ ರಾಜ್ಯಗಳು ಇದರಿಂದ ಹೆಚ್ಚು ಅಪಾಯಕ್ಕೆ ಸಿಲುಕಲಿವೆ ಎಂದು ಎಚ್ಚರಿಸಿದೆ. ವರದಿಯ ಪ್ರಕಾರ, ಜಾಗತಿಕವಾಗಿ ತಾಪಮಾನವು ಸಾಮಾನ್ಯಕ್ಕಿಂತ 1.2 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಬಹುದು. ಇದು ಉಷ್ಣತೆಯ ತೀವ್ರತೆಯಿಂದಾಗಿ ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ ಮತ್ತು ಭಾರತದ ಮುಂಗಾರಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಪರಿಣಾಮದಿಂದ ಸುಮಾರು 15,800 ಸಾವು ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ. ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದಲ್ಲಿ ಇದರ ಪರಿಣಾಮ ಹೆಚ್ಚು ಇರಲಿದೆ ಎಂದು ವರದಿಯಲ್ಲಿ ಮುನ್ಸೂಚನೆ ನೀಡಲಾಗಿದೆ.

ಕೋಡಿಮಠದ ಶ್ರೀಗಳು ತಮ್ಮ ಭವಿಷ್ಯದಲ್ಲಿ “ಕಟ್ಟೆ ಇಲ್ಲದ ಬಾವಿ ಹುಟ್ಟಿ, ನೆಟ್ಟನೀ ಸುರಂಗವ ಕೊರೆದು, ಗಟ್ಟಿ ಭೂಮಿ ಬಟ್ಟಬಯಲಾಯಿತು” ಎಂದು ಹೇಳಿದ್ದರು. ಅಲ್ಲದೆ, ನೇಪಾಳದಲ್ಲಿ ಉಂಟಾದಂತಹ ಭೀಕರ ಪ್ರವಾಹದ ರೀತಿಯಲ್ಲೇ ದಕ್ಷಿಣ ಭಾರತದಲ್ಲೂ ಪ್ರವಾಹಗಳು ಅಪ್ಪಳಿಸುತ್ತವೆ. ಸಮುದ್ರದ ನೀರು ಒಳನುಗ್ಗಿ ಊರಿಗೆ ಊರೇ ಮುಳುಗಲಿದೆ ಎಂದು ವಿವರಿಸಿದ್ದರು. ಮುಂಬರುವ ದಿನಗಳಲ್ಲಿ ಇನ್ನಷ್ಟು ಕಷ್ಟಗಳು ಹೆಚ್ಚಾಗುತ್ತವೆ ಎಂದೂ ತಿಳಿಸಿದ್ದರು.

ಇಲ್ಲಿದೆ ನೋಡಿ ವಿಡಿಯೋ:

Kodi Shree Prediction vs Super ElNino: ಎಲ್ ನಿನೋ ವರದಿ ಬಹಿರಂಗ ಬೆನ್ನಲ್ಲೇ ಕೋಡಿಶ್ರೀಗಳ ಭವಿಷ್ಯ ಚರ್ಚೆ| #TV9D

ಆದರೆ, ಎಲ್ ನಿನೋ ವರದಿ ಮತ್ತು ಕೋಡಿಶ್ರೀಗಳ ಭವಿಷ್ಯದ ನಡುವೆ ಕೆಲವು ಮಹತ್ವದ ವ್ಯತ್ಯಾಸಗಳಿವೆ. ಎರಡೂ ದಕ್ಷಿಣ ಭಾರತಕ್ಕೆ ಸಂಕಷ್ಟ ಎದುರಾಗಲಿದೆ ಎಂಬುದನ್ನು ಸ್ಪಷ್ಟಪಡಿಸಿದರೂ, ಸಂಕಷ್ಟದ ಸ್ವರೂಪ ಭಿನ್ನವಾಗಿದೆ. ಕೋಡಿಶ್ರೀಗಳ ಭವಿಷ್ಯದಲ್ಲಿ ಪ್ರವಾಹ, ಜಲಪ್ರವಾಹದ ಬಗ್ಗೆ ಪ್ರಸ್ತಾಪವಿದ್ದರೆ, ಎಲ್ ನಿನೋ ವರದಿಯಲ್ಲಿ ಅನಾವೃಷ್ಟಿ, ತಾಪಮಾನದ ಏರಿಕೆಯ ಬಗ್ಗೆ ಉಲ್ಲೇಖವಿದೆ. ಎರಡರಲ್ಲೂ ಸಾವು-ನೋವಿನ ಬಗ್ಗೆ ಎಚ್ಚರಿಕೆ ನೀಡಲಾಗಿದೆ ಎಂಬುದು ಗಮನಾರ್ಹ.

ಇದನ್ನೂ ಓದಿ: ಕೋಡಿಶ್ರೀ ನುಡಿದ ಭವಿಷ್ಯವಾಣಿಗಳು ಯಾವುದೆಲ್ಲ ನಿಜವಾಗಿವೆ? ಇಲ್ಲಿದೆ ನೋಡಿ

ಕೋಡಿಶ್ರೀಗಳ ಭವಿಷ್ಯದ ಪ್ರಕಾರ, ಮುಂಗಾರು ಮಳೆ ವಿರಳವಾಗಿದ್ದರೂ ರೈತರು ಕುಗ್ಗುವ ಅಗತ್ಯವಿಲ್ಲ. ಹಿಂಗಾರು ಮಳೆ ಉತ್ತಮವಾಗಿ ಸುರಿಯುತ್ತದೆ, ನಾಡಿನ ಕೆರೆ-ಕಟ್ಟೆಗಳೆಲ್ಲವೂ ಭರ್ತಿಯಾಗುತ್ತವೆ. ಮುಂಗಾರಿನಲ್ಲಿ ಬೆಳೆ ಕಳೆದುಕೊಂಡ ರೈತರಿಗೆ ಹಿಂಗಾರು ಮಳೆಯಿಂದ ಪರಿಹಾರ ಸಿಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ, ಎಲ್ ನಿನೋ ಅಧ್ಯಯನದ ವರದಿ ಪ್ರಕಾರ, ಡಿಸೆಂಬರ್ 2026 ರಿಂದ ಫೆಬ್ರವರಿ 2027ರ ಅವಧಿಯಲ್ಲಿ ಮಾತ್ರವೇ ಸುಮಾರು 7,400ಕ್ಕೂ ಹೆಚ್ಚು ಸಾವು ಸಂಭವಿಸಬಹುದು. ಇತರ ಪ್ರದೇಶಗಳಲ್ಲಿ ಇದರ ಭೀಕರತೆ ಕಡಿಮೆಯಾಗುತ್ತಾ ಬಂದರೂ, ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಇದರ ಅಪಾಯ ಕಡಿಮೆಯಾಗುವುದಿಲ್ಲ. ಚಳಿಗಾಲದಲ್ಲಿ ದಕ್ಷಿಣ ಭಾರತದ ಹವಾಮಾನದಲ್ಲಿ ಆಗುವ ಬದಲಾವಣೆಗಳಿಂದ ಪರಿಣಾಮ ಹೆಚ್ಚು ಇರುತ್ತದೆ. ಮಳೆ ಸುರಿಯದೆ ಉಷ್ಣಾಂಶ ಏರಿಕೆಯಾಗಿ ಸಾವು-ನೋವು ಸಂಭವಿಸಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕೋಡಿಶ್ರೀಗಳು ಸಮೃದ್ಧಿಯ ಮಳೆ ಎಂದು ಹೇಳಿದರೆ, ವರದಿಯು ಅನಾವೃಷ್ಟಿಯನ್ನು ಎತ್ತಿ ತೋರಿಸಿದೆ.

ಒಟ್ಟಾರೆ, ಕೋಡಿಶ್ರೀಗಳ ಆಧ್ಯಾತ್ಮಿಕ ಭವಿಷ್ಯ ಮತ್ತು ವೈಜ್ಞಾನಿಕ ಎಲ್ ನಿನೋ ವರದಿ ಎರಡೂ ದಕ್ಷಿಣ ಭಾರತಕ್ಕೆ ಕಷ್ಟದ ದಿನಗಳನ್ನು ಸೂಚಿಸಿರುವುದು ಆತಂಕ ಮೂಡಿಸಿದೆ. ಎರಡೂ ವರದಿಗಳ ನಡುವಿನ ಸಾಮ್ಯತೆಗಳು ಮತ್ತು ವ್ಯತ್ಯಾಸಗಳು, ಭವಿಷ್ಯದಲ್ಲಿ ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರುವ ಅವಶ್ಯಕತೆಯನ್ನು ಎತ್ತಿ ಹಿಡಿಯುತ್ತವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us