ಪ್ರಾರ್ಥನಾ ಮಂದಿರಗಳ ಶಬ್ಧ ಮಾಲಿನ್ಯಕ್ಕೆ ಫುಲ್ ಸ್ಟಾಪ್ ಹಾಕಲು ಹೊಸ ಪ್ಲ್ಯಾನ್; ಕಮಿಟಿ ರಚನೆಗೆ ಮುಂದಾದ KSPCB
ಶೀಘ್ರವೇ ಮಾರ್ಗಸೂಚಿ ಹೊರಡಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಧರಿಸಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಸೆಕ್ರೆಟರಿ ಶ್ರೀನಿವಾಸಲು ನೇತೃತ್ವದಲ್ಲಿ ಕಮಿಟಿ ರಚನೆ ಮಾಡಲಾಗಿದೆ.
ಬೆಂಗಳೂರು: ಪ್ರಾರ್ಥನಾ ಮಂದಿರಗಳ ಶಬ್ಧ ಮಾಲಿನ್ಯಕ್ಕೆ ಶೀಘ್ರವೇ ಫುಲ್ ಸ್ಟಾಪ್ ಹಾಕಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ(KSPCB) ಮುಂದಾಗಿದೆ. ಕೋರ್ಟ್ ಆದೇಶದಂತೆ ಮಾರ್ಗಸೂಚಿ ಹೊರಡಿಸಲು KSPCB ನಿರ್ಧರಿಸಿದೆ. ಮಾರ್ಗಸೂಚಿ ಹೊರಡಿಸುವ ಸಂಬಂಧ ಕಮಿಟಿ ರಚನೆಗೆ ಪ್ಲ್ಯಾನ್ ಮಾಡಿಕೊಂಡಿದೆ. ಕೋರ್ಟ್ ಆದೇಶದ ಬಳಿಕ ಎಚ್ಚೆತ್ತ ಮಾಲಿನ್ಯ ನಿಯಂತ್ರಣ ಮಂಡಳಿ, ನಿಯಮ ಮೀರಿ ಡಿಸೆಬಲ್ ಮೀರಿದ್ರೆ ಏನು ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಚರ್ಚೆ ನಡೆಸುತ್ತಿದೆ. ಶೀಘ್ರವೇ ಮಾರ್ಗಸೂಚಿ ಹೊರಡಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಧರಿಸಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಸೆಕ್ರೆಟರಿ ಶ್ರೀನಿವಾಸಲು ನೇತೃತ್ವದಲ್ಲಿ ಕಮಿಟಿ ರಚನೆ ಮಾಡಲಾಗಿದೆ. ಈಗಾಗಲೇ ಬೆಂಗಳೂರಿನ ಹಲವು ಪ್ರಾರ್ಥನಾ ಮಂದಿರ (ದೇಗುಲ, ಮಸೀದಿ, ಚರ್ಚ್)ಗಳಿಗೆ ಪೊಲೀಸ್ ಇಲಾಖೆ ನೋಟಿಸ್ ನೀಡಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆ ಜಂಟಿಯಾಗಿ ನೋಟಿಸ್ ನೀಡಲಿದ್ದಾರೆ. ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡುವರಿಗೆ ಮೊದಲು ಎಚ್ಚರಿಕೆ ನೀಡಲಾಗುತ್ತೆ. ಬಳಿಕವೂ ನಿಯಮ ಪಾಲಿಸದವರಿಗೆ ನೋಟಿಸ್ ಅಸ್ತ್ರ ಪ್ರಯೋಗಿಸಲಾಗುತ್ತೆ. ಬೆಳಗ್ಗೆ 6ರಿಂದ ರಾತ್ರಿ 10 ಗಂಟೆಯವರೆಗೆ 55 ಡಿಸೆಬಲ್. ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ 45 ಡಿಸೆಬಲ್ ಗೆ ಕೋರ್ಟ್ ಆದೇಶಿಸಿದೆ. ನಿಯಮವನ್ನ ಜಾರಿಗೆ ತರಲು ಸುಧಾರಿತ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.
ಪ್ರಾರ್ಥನಾ ಮಂದಿರಗಳ ಹಂತದಲ್ಲಿ ಸ್ಥಳೀಯ ಕಮಿಟಿ ರಚನೆಗೆ ಸೂಚನೆ ಕಮಿಟಿಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ಸಾರ್ವಜನಿಕರು ಇರುವ ರೀತಿ ರಚಿಸಲು ಪ್ಲ್ಯಾನ್ ನಡೆದಿದೆ. ಚರ್ಚ್, ಮಸೀದಿ, ಮಂದಿರಗಳಿಗೂ ಇದು ಅನ್ವಯವಾಗಲಿದೆ. ನೆರೆ ಮನೆಯರಿಗೆ ಶಬ್ದ ಮಾಲಿನ್ಯವಾಗದಂತೆ ಮೈಕ್ ಬಳಕೆಗೆ ಕ್ರಮ ಕೈಗೊಳ್ಳಲಾಗುತ್ತೆ. ಇನ್ಮುಂದೆ ಪ್ರಾರ್ಥನಾ ಮಂದಿರದವರೇ ಶಬ್ಧ ಮಾಲಿನ್ಯದ ವರದಿ ನೀಡಬೇಕಾಗುವ ಸಾಧ್ಯತೆ ಇದೆ. ಪ್ರಾಥನಾ ಮಂದಿರಗಳಿಗೆ ವಾರಕ್ಕೊಮ್ಮೆ ಮೈಕ್ ಬಳಕೆಯ ಡಿಸೆಬಲ್ ಮಾಪನ ವರದಿ ನೀಡುವಂತೆ ಕೇಳುವ ಸಾಧ್ಯತೆ ಇದೆ. ಕೇವಲ ಪ್ರಾರ್ಥನಾ ಮಂದಿರಗಳು ಮಾತ್ರವಲ್ಲ, ಧಾರ್ಮಿಕ ಕಾರ್ಯಕ್ರಮಗಳ ಮೇಲೂ ಮಾಲಿನ್ಯ ನಿಯಂತ್ರಣ ಮಂಡಳಿ ನಿಗಾ ಇಡಲಿದೆ. ಹೋಟೆಲ್, ಬಾರ್ & ರೆಸ್ಟೊರೆಂಟ್ ನಿಂದ ಶಬ್ಧ ಮಾಲಿನ್ಯ ವಿರುದ್ಧ ಸಾರ್ವಜನಿಕರಿಂದ ಮೌಖಿಕ ದೂರು ಹಿನ್ನೆಲೆ ಮತ್ತಷ್ಟು ಸುಧಾರಿತ ಮಾರ್ಗಸೂಚಿ ಹೊರಡಿಸಲು KPCB ತಯಾರಿ ನಡೆಸಿದೆ.
ಇದನ್ನೂ ಓದಿ: 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ; ಅಕ್ರಮದಲ್ಲಿ ಕಾಂಗ್ರೆಸ್ ಬಿಜೆಪಿ ಭಾಯಿಭಾಯಿ, ರುದ್ರಗೌಡ ಇಂದು ಕೋರ್ಟ್ಗೆ ಹಾಜರು
ಹರಿಹರಕ್ಕೆ ಸಿದ್ದರಾಮಯ್ಯ ಬಂದಾಗ ಕಾರ್ಯಕರ್ತರಿಂದ ಭಾವಿ ಮುಖ್ಯಮಂತ್ರಿಗೆ ಜಯವಾಗಲಿ ಘೋಷಣೆ!
Published On - 8:05 am, Sun, 24 April 22