ಕೆಪಿಎಸ್​​​ಸಿ ನೇಮಕಾತಿ ಅಕ್ರಮ: 2025ರ ಸಿಸಿಬಿ ತನಿಖೆ ವಿಫಲವಾಗಲು ಇದೆ ಬಲವಾದ ಕಾರಣ! ಸಿಐಡಿ ತನಿಖೆಯಲ್ಲಿ ಸ್ಫೋಟಕ ಸತ್ಯ ಬಯಲು

ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಹಗರಣದ ತನಿಖೆ ತೀವ್ರಗೊಂಡಿದೆ. ಮುಖ್ಯ ಆರೋಪಿ ಬಸವರಾಜ್ ಕನ್ನಾಳೆಯ ಮೊಬೈಲ್ ಕರೆಗಳ ದಾಖಲೆಗಳನ್ನು (CDR) ಪರಿಶೀಲಿಸಿದಾಗ, ಶಾಸಕರು, ಸಂಸದರು ಸೇರಿದಂತೆ ಬೃಹತ್ ಪ್ರಭಾವಿ ಜಾಲ ಬೆಳಕಿಗೆ ಬಂದಿದೆ. ಸಿಸಿಬಿ ಹಿಂದಿನ ಪ್ರಕರಣವನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬ ಅನುಮಾನಗಳು ಹುಟ್ಟಿಕೊಂಡಿದ್ದು, ಪ್ರಸ್ತುತ ಸಿಐಡಿ ತನಿಖೆ ಮುಂದುವರಿದಿದೆ.

ಕೆಪಿಎಸ್​​​ಸಿ ನೇಮಕಾತಿ ಅಕ್ರಮ: 2025ರ ಸಿಸಿಬಿ ತನಿಖೆ ವಿಫಲವಾಗಲು ಇದೆ ಬಲವಾದ ಕಾರಣ! ಸಿಐಡಿ ತನಿಖೆಯಲ್ಲಿ ಸ್ಫೋಟಕ ಸತ್ಯ ಬಯಲು
KPSC ಹಗರಣ, ನೇಮಕಾತಿ ಅಕ್ರಮ
Edited By:

Updated on: Sep 03, 2026 | 10:18 AM

ಬೆಂಗಳೂರು, ಸೆ.3: ಕರ್ನಾಟಕ ಲೋಕಸೇವಾ ಆಯೋಗದ (KPSC) ಅಕ್ರಮ ನೇಮಕಾತಿ ಹಗರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಹಳೆಯ ಪ್ರಕರಣವೊಂದರಲ್ಲಿ ಸಿಸಿಬಿ (CCB) ನಡೆದುಕೊಂಡ ರೀತಿಯ ಕುರಿತು ಸಂಶಯಗಳು ವ್ಯಕ್ತವಾಗುತ್ತಿವೆ. ಮತ್ತೊಂದೆಡೆ ಸಿಐಡಿ (CID) ವಶದಲ್ಲಿರುವ ಮುಖ್ಯ ಆರೋಪಿ ಬಸವರಾಜ್ ಕನ್ನಾಳೆಯ ಮೊಬೈಲ್ ಕರೆಗಳ ದಾಖಲೆ (CDR) ಪರಿಶೀಲಿಸಿದ ಅಧಿಕಾರಿಗಳಿಗೆ ಬೃಹತ್ ಪ್ರಭಾವಿ ಜಾಲ ಕಂಡುಬಂದಿದ್ದು, ಆತಂಕ ಮೂಡಿಸಿದೆ.

KPSC ನೇಮಕಾತಿ ಡೀಲಿಂಗ್ ಹಗರಣವನ್ನು ಕಳೆದ ವರ್ಷವೇ ಸಂಪೂರ್ಣವಾಗಿ ಭೇದಿಸುವ ಅವಕಾಶವಿದ್ದರೂ ಸಿಸಿಬಿ ಅದನ್ನು ಸರಿಯಾಗಿ ಮುಂದುವರಿಸಲಿಲ್ಲವೇ ಎಂಬ ಅನುಮಾನಗಳು ಎದ್ದಿವೆ. 2025 ರಲ್ಲಿ ವಿಜಯಪುರ ಮೂಲದ, ಇಂಡಿ ತಾಲೂಕಿನ ಹೆಡ್‌ಮಾಸ್ಟರ್ ಆಗಿದ್ದ ಸಿಕಂದರ್ ಚೌಧರಿ ಎಂಬಾತ KPSC ಪರೀಕ್ಷಾ ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ಡೀಲಿಂಗ್ ನಡೆಸಲು ಗಾಂಧಿನಗರದ ಲಾಡ್ಜ್ ಒಂದಕ್ಕೆ ಆಗಮಿಸಿದ್ದಾಗ ಉಪ್ಪಾರಪೇಟೆ ಪೊಲೀಸರು ದಾಳಿ ನಡೆಸಿ, ಆತನ ಬಳಿಯಿದ್ದ 40 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದರು.

ಈ ಪ್ರಕರಣದಲ್ಲಿ ದಿಲೀಪ್ ಎಂಬ ಪ್ರಮುಖ ಕಿಂಗ್‌ಪಿನ್ ಕೂಡ ಸಿಕ್ಕಿಬಿದ್ದಿದ್ದನು. ನಂತರ ಈ ಪ್ರಕರಣವನ್ನು ಉಪ್ಪಾರಪೇಟೆ ಠಾಣೆಯಿಂದ ಸಿಸಿಬಿಗೆ ವರ್ಗಾಯಿಸಲಾಗಿತ್ತು. ಸಿಸಿಬಿ ಅಂದೇ ಕಿಂಗ್‌ಪಿನ್ ದಿಲೀಪ್‌ನನ್ನು ಕಠಿಣ ತನಿಖೆಗೆ ಒಳಪಡಿಸಿದ್ದರೆ ಹಲವು ಐಪಿಎಸ್ (IPS) ಅಧಿಕಾರಿಗಳು ಹಾಗೂ ಪ್ರಭಾವಿ ರಾಜಕಾರಣಿಗಳ ಹೆಸರುಗಳು ಬಯಲಾಗುತ್ತಿದ್ದವು. ಆದರೆ, ಸಿಸಿಬಿಗೆ ವರ್ಗಾವಣೆಯಾದ ನಂತರ ಈ ಪ್ರಕರಣದ ತನಿಖೆ ಏಕೆ ಹಳ್ಳಹಿಡಿಯಿತು ಎಂಬ ಪ್ರಶ್ನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇನ್ನೊಂದೆಡೆ, ಪ್ರಸ್ತುತ ಪ್ರಕರಣದಲ್ಲಿ ಸಿಐಡಿ ವಶದಲ್ಲಿರುವ ಬಸವರಾಜ್ ಕನ್ನಾಳೆಯ ಫೋನ್ ಮತ್ತು ಸಿಡಿಆರ್ (CDR) ಪರಿಶೀಲಿಸಿದ ಅಧಿಕಾರಿಗಳಿಗೆ ದೆಹಲಿ ಮಟ್ಟದ ಸಂಪರ್ಕ ಜಾಲ ಕಂಡುಬಂದು ತೀವ್ರ ಆಘಾತವಾಗಿದೆ. ಕನ್ನಾಳೆ ಮೊಬೈಲ್‌ನಲ್ಲಿ ಶಾಸಕರು, ಸಂಸದರು ಸೇರಿದಂತೆ 50 ಕ್ಕೂ ಹೆಚ್ಚು ಪ್ರಭಾವಿ ರಾಜಕೀಯ ವ್ಯಕ್ತಿಗಳ ಅಸಲಿ ದೂರವಾಣಿ ಸಂಖ್ಯೆಗಳು ಪತ್ತೆಯಾಗಿವೆ.

ಇದನ್ನೂ ಓದಿ: ಬಿಎಂಟಿಸಿ ಬಸ್ಸುಗಳಲ್ಲಿ ಸ್ಪೇರ್ ಪಾರ್ಟ್ಸ್ ಅಭಾವ: ನಡುರಸ್ತೆಯಲ್ಲೇ ಬಸ್ ಕೆಟ್ಟು ಚಾಲಕರು-ಪ್ರಯಾಣಿಕರ ಪರದಾಟ

ಕನ್ನಾಳೆ ಅಧಿಕಾರಿಗಳ ಮುಂದೆ ಹೇಳಿದ್ದೇನು?

ಪ್ರಭಾವಿಗಳ ಜೊತೆ ಹೇಗೆ ಪರಿಚಯ ಎಂಬ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ಕನ್ನಾಳೆ, “ನಾನೊಬ್ಬ ಬ್ಯುಸಿನೆಸ್‌ಮ್ಯಾನ್ ಮತ್ತು ರಾಜಕಾರಣಿ. ನನಗೆ ಟ್ರಾವೆಲ್ಸ್ ಸೇರಿದಂತೆ ಹಲವು ಉದ್ಯಮಗಳಿವೆ, ಹೀಗಾಗಿ ಪ್ರಮುಖರೆಲ್ಲರೂ ನನಗೆ ಪರಿಚಿತರು” ಎಂದು ಸಮರ್ಥಿಸಿಕೊಂಡಿದ್ದಾನೆ. ಸಿಐಡಿ ಅಧಿಕಾರಿಗಳು ಈ ಪ್ರಭಾವಿ ಸಂಪರ್ಕಗಳನ್ನು ಇಟ್ಟುಕೊಂಡು KPSC ಅಕ್ರಮದಲ್ಲಿ ಯಾರ್ಯಾರ ಪಾತ್ರ ಎಷ್ಟಿದೆ ಎಂಬುದರ ಕುರಿತು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us