AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈದ್ಯರ ಸಮಯಪ್ರಜ್ಞೆಯಿಂದ ಬದುಕುಳಿದ 63 ವರ್ಷದ ಮಹಿಳೆ: ಸತ್ತಿದ್ದಾಳೆಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದ ಕುಟುಂಬದಲ್ಲೀಗ ಸಂತಸ

ಮೃತಪಟ್ಟಿದ್ದಾರೆ ಎಂದು ಭಾವಿಸಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ ಏಕಾಏಕಿ ಏದುಸಿರು ಬಿಟ್ಟ 63 ವರ್ಷದ ಎಂಬ ಮಹಿಳೆಗೆ ವೈದ್ಯರು ತುರ್ತು ಚಿಕಿತ್ಸೆ ನೀಡಿ ಪ್ರಾಣ ರಕ್ಷಿಸಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಆಸ್ಪತ್ರೆಗೆ ರೋಗಿಯನ್ನು ಕರೆತರುವುದು ಕೊಂಚ ತಡವಾಗಿದ್ದರೂ ಅವರ ಪ್ರಾಣಕ್ಕೆ ಅಪಾಯ ಸಾಧ್ಯವಾಗುತ್ತಿತ್ತು. ಆದರೆ ಅವರೀಗ ಹೆಚ್ಚುಕಮ್ಮಿ ಓಡಾಡುವ ಹಂತಕ್ಕೆ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯರ ಸಮಯಪ್ರಜ್ಞೆಯಿಂದ ಬದುಕುಳಿದ 63 ವರ್ಷದ ಮಹಿಳೆ: ಸತ್ತಿದ್ದಾಳೆಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದ ಕುಟುಂಬದಲ್ಲೀಗ ಸಂತಸ
ವೈದ್ಯರ ಸಮಯಪ್ರಜ್ಞೆಯಿಂದ ಬದುಕುಳಿದ 63 ವರ್ಷದ ಮಹಿಳೆImage Credit source: Tv9 Kannada
ಪ್ರಸನ್ನ ಹೆಗಡೆ
|

Updated on: Sep 23, 2026 | 4:04 PM

Share

ಹಾವೇರಿ, ಸೆಪ್ಟೆಂಬರ್​​ 23: ಆಕೆ ಸತ್ತಿದ್ದಾಳೆಂದು ಕುಟುಂಬ ಭಾವಿಸಿತ್ತು. ಅಂತಿಮ ನಮನ ಸಲ್ಲಿಸಲು ಸಂಬಂಧಿಕರೂ ಬಂದಿದ್ದರು. ಆದರೆ ಈ ವೇಳೆ ಮಹಿಳೆ ಏಕಾಏಕಿ ಏದುಸಿರು ಬಿಟ್ಟಿದ್ದಾಳೆ. ಕೂಡಲೇ ಎಚ್ಚೆತ್ತ ಕುಟುಂಬಸ್ಥರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸಕಾಲಕ್ಕೆ ವೈದ್ಯರು ತುರ್ತು ಚಿಕಿತ್ಸೆ ನೀಡಿದ ಪರಿಣಾಮ 63 ವರ್ಷದ ರೇಣುಕಮ್ಮ ಎಂಬಾಕೆ ಸಾವಿನ ಜೊತೆಗಿನ ಹೋರಾಟ ಗೆದ್ದಿದ್ದಾಳೆ. ಸತ್ತೇ ಹೋದಳು ಎಂದು ಭಾವಿಸಿದ್ದಾಕೆ ಬದುಕಿರುವ ಸುದ್ದಿ ಕೇಳಿ ಕುಟುಂಬಸ್ಥರು, ಸಂಬಂಧಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

ರೇಣುಕಮ್ಮ ಜೀವ ಉಳಿಸಿದ ಗೋಲ್ಡನ್​​ ಅವರ್

ಹಾವೇರಿ ಜಿಲ್ಲೆ ಹಿರೇಕೇರೂರು ತಾಲೂಕು ಗೊಡಚಿಕೊಂಡದ ಮಹಿಳೆ ರೇಣುಕಮ್ಮ ಸಂಕೊಳ್ಳಿ ಎಂಬಾಕೆ ಸೋಮವಾರ (ಸೆ.21) ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಬಿಪಿ ಮತ್ತು ಶುಗರ್ ಲೋ ಆಗಿ ಪ್ರಜ್ಞೆ ಕಳೆದುಕೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕುಟುಂಬಸ್ಥರು ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ಆದರೆ ವೈದ್ಯರು ಮಾತ್ರ ಈಕೆ ಬದುಕೋದು ಡೌಟ್​​ ಎಂದಿದ್ದರು. ಇದಾದ ಬಳಿಕ ರೇಣುಕಮ್ಮ ಅವರ ಉಸಿರಾಟವೂ ಕಡಿಮೆಯಾಗುತ್ತ ಬಂದಿತ್ತು. ಹೀಗಾಗಿ ಆಕೆ ಮೃತಪಟ್ಟಿದ್ದಾಳೆ ಎಂದು ಭಾವಿಸಿದ ಕುಟುಂಬಸ್ಥರು ವಿಷಯವನ್ನು ಸಂಬಂಧಿಕರಿಗೆ ತಿಳಿಸಿದ್ದರು. ಅಂತ್ಯ ಸಂಸ್ಕಾರಕ್ಕೂ ಸಿದ್ಧತೆ ನಡೆಸಿದ್ದರು. ಆದರೆ ಈ ನಡುವೆ ರೇಣುಕಮ್ಮ ಏಕಾಏಕಿ ಏದುಸಿರು ಬಿಟ್ಟಿದ್ದಾರೆ. ಇದನ್ನು ಗಮನಿಸಿದ ಕುಟುಂಬಸ್ಥರು ಕೂಡಲೇ ಎಚ್ಚೆತ್ತು ಆಕೆಯನ್ನು ಹಿರೇಕೇರೂರು ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ .

ಇದನ್ನೂ ಓದಿ: ಕಲ್ಲು ಕ್ವಾರಿ ಪರವಾನಗಿ ನಿಯಮ ಉಲ್ಲಂಘನೆ: ಸಚಿವ ರುದ್ರಪ್ಪ ಲಮಾಣಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ 3 ಕೋಟಿ ದಂಡ

ಇನ್ನು ರೇಣುಕಮ್ಮ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿರುವ ವೈದ್ಯರು, ಆಸ್ಪತ್ರೆಗೆ ಕರೆತಂದಿದ್ದ ವೇಳೆ ಅವರ ಪಲ್ಸ್​​ ರೇಟ್​​ ಮತ್ತು ಉಸಿರಾಟ ಬಹಳ ಕಡಿಮೆಯಿತ್ತು. ಕೂಡಲೇ ಅಗತ್ಯ ತುರ್ತು ಚಿಕಿತ್ಸೆ ನೀಡಲಾಗಿದ್ದು, ಅದಕ್ಕೆ ಅವರೂ ಸ್ಪಂದಿಸಿದ್ದಾರೆ. ಬರುವುದು ಕೊಂಚ ತಡವಾಗಿದ್ದರೂ ಅವರ ಪ್ರಾಣಕ್ಕೆ ಅಪಾಯ ಆಗುವ ಸಾಧ್ಯತೆಯಿತ್ತು. ಆದರೆ ಅವರೀಗ ಹೆಚ್ಚುಕಮ್ಮಿ ಓಡಾಡುವ ಹಂತಕ್ಕೆ ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಗೆ ಕರೆತರುವಾಗ ಜೀವವೇ ಇಲ್ಲ ಎಂದು ಭಾವಿಸಿದ್ದ ರೋಗಿಯೀಗ ದೇವರ ದಯೆಯೋ ಎಂಬಂತೆ ಗುಣಮುಖರಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More