AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲ್ಲು ಕ್ವಾರಿ ಪರವಾನಗಿ ನಿಯಮ ಉಲ್ಲಂಘನೆ: ಸಚಿವ ರುದ್ರಪ್ಪ ಲಮಾಣಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ 3 ಕೋಟಿ ದಂಡ

ಕಲ್ಲು ಕ್ವಾರಿ ಪರವಾನಗಿ ನಿಯಮ ಉಲ್ಲಂಘಿಸಿ ಜಾಗ ಒತ್ತುವರಿ ಮಾಡಿ ಕಲ್ಲು ತೆಗೆದು ನಿಯಮ ಉಲ್ಲಂಘನೆ ಆರೋಪದ ಮೇಲೆ ಸಚಿವ ರುದ್ರಪ್ಪ ಲಮಾಣಿ ಸೇರಿದಂತೆ ಹಾವೇರಿ ಜಿಲ್ಲೆಯ 60ಕ್ಕೂ ಹೆಚ್ಚು ಕ್ವಾರಿ ಮಾಲೀಕರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಭಾರಿ ದಂಡ ವಿಧಿಸಿದೆ. ಸಚಿವರಿಗೆ 3 ಕೋಟಿ ರೂಪಾಯಿ ದಂಡ ಹಾಕಲಾಗಿದ್ದು, ಕಂತುಗಳಲ್ಲಿ ಹಣ ಪಾವತಿಗೆ ಇಲಾಖೆ ಸೂಚಿಸಿದೆ.

ಕಲ್ಲು ಕ್ವಾರಿ ಪರವಾನಗಿ ನಿಯಮ ಉಲ್ಲಂಘನೆ: ಸಚಿವ ರುದ್ರಪ್ಪ ಲಮಾಣಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ 3 ಕೋಟಿ ದಂಡ
ಚಿವ ರುದ್ರಪ್ಪ ಲಮಾಣಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ 3 ಕೋಟಿ ದಂಡ Image Credit source: Tv9 Kannada
ಪ್ರಸನ್ನ ಹೆಗಡೆ
|

Updated on:Sep 18, 2026 | 11:45 AM

Share

ಹಾವೇರಿ, ಸೆಪ್ಟೆಂಬರ್​​ 18: ಕಲ್ಲು ಕ್ವಾರಿ ಪರವಾನಗಿ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಸಚಿವ ರುದ್ರಪ್ಪ ಲಮಾಣಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ 3 ಕೋಟಿ ರೂಪಾಯಿ ದಂಡ ವಿಧಿಸಿದೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಹುಣಸಿಕಟ್ಟಿ ಬಳಿಯ ಕ್ವಾರಿ ಮಾಲೀಕರಾದ ರುದ್ರಪ್ಪ ಲಮಾಣಿ ಅವರಿಗೆ 6 ತಿಂಗಳ ಗಡುವು ನೀಡಿ ಇಲಾಖೆಯಿಂದ ನೋಟಿಸ್ ನೀಡಲಾಗಿದ್ದು, 3 ಕಂತುಗಳಲ್ಲಿ ದಂಡ ಪಾವತಿಸುವಂತೆ ಇಲಾಖೆ ತಿಳಿಸಿದೆ.

ಲಮಾಣಿ ಸೇರಿದಂತೆ ಹಾವೇರಿ ಜಿಲ್ಲೆಯ 60ಕ್ಕೂ ಹೆಚ್ಚು ಕಲ್ಲು ಕ್ವಾರಿ ಮಾಲೀಕರಿಗೆ ದಂಡ

ಜಾಗ ಒತ್ತುವರಿ ಮಾಡಿ ಕಲ್ಲು ತೆಗೆದು ನಿಯಮ ಉಲ್ಲಂಘನೆ ಆರೋಪ ಸಂಬಧ ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್‌ಗಳ ಕೇಂದ್ರ (KSRSAC) ಡ್ರೋಣ್ ಮೂಲಕ ಸಮೀಕ್ಷೆ ನಡೆಸಿತ್ತು. ಈ ವೇಳೆ ಪರವಾನಿಗೆ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದ ಹಿನ್ನೆಲೆ ಹಾವೇರಿ ಜಿಲ್ಲೆಯ 60ಕ್ಕೂ ಹೆಚ್ಚು ಕಲ್ಲು ಕ್ವಾರಿ ಮಾಲೀಕರಿಗೆ ದಂಡ ವಿಧಿಸಲಾಗಿದೆ. ಈ ಪೈಕಿ ಸಚಿವ ರುದ್ರಪ್ಪ ಲಮಾಣಿ ಅವರೂ ಸೇರಿದ್ದಾರೆ ಎನ್ನಲಾಗಿದೆ.

LIVE TV

ಇದನ್ನೂ ಓದಿ: ವರಮಹಾಲಕ್ಷ್ಮಿ ಪೂಜೆಗೆ ಹೋಗಿದ್ದಾಗ ಚಿನ್ನ ಕಳವು: ವಿಚಾರಣೆ ನೆಪದಲ್ಲಿ ಮಹಿಳೆಗೆ ಕರೆಂಟ್ ಶಾಕ್ ನೀಡಿದ ಪೊಲೀಸ್ರು

‘ಈ ಬಗ್ಗೆ ಸಿಎಂ ಬಳಿ ಮಾತಾಡಲು ಸಚಿವರಿಗೆ ಧೈರ್ಯ ಇಲ್ಲ’

ಇನ್ನು ಕಲ್ಲು ಕ್ವಾರಿ ಪರವಾನಗಿ ನಿಯಮ ಉಲ್ಲಂಘನೆ ಸಂಬಂಧ ಸಚಿವರಿಗೇ ದಂಡ ವಿಧಿಸಲಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಹಾವೇರಿ ಜಿಲ್ಲಾ ಕ್ರಷರ್​​ ಮತ್ತು ಕ್ವಾರಿ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಬೆಳವಡಿ, ಸಚಿವ ರುದ್ರಪ್ಪ ಲಮಾಣಿಯವರಿಗೆ 3 ಕೋಟಿ ದಂಡ ಬಂದಿದೆ. ಅವರು ಮಂತ್ರಿಯಾಗಿ ಈ ಬಗ್ಗೆ ಸಿಎಂ ಬಳಿ ಮಾತಾಡೋಕೆ ಧೈರ್ಯ ಇಲ್ಲ. ನಾವೆಲ್ಲ ಹೋರಾಟ ಮಾಡಿದರಷ್ಟೇ ಅವರೂ ಬಯಲಿಗೆ ಬರ್ತಾರೆ. ಹೇ ಹೋಗಯ್ಯಾ ದಂಡ ತುಂಬು, ಹೋಗು ನಿನಗೇನು ಕಡಿಮೆ ಆಗಿದೆ ಅಂತಾರೆ. ಇದು ತಪ್ಪು ಎಂದು ಅವರೂ ಒಪ್ಪಿಕೊಂಡಿದ್ದಾರೆ ಎಂದವರು ತಿಳಿಸಿದ್ದಾರೆ.

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:41 am, Fri, 18 September 26

Follow Us
ಗಗ್ಗರ ಮನರಂಜನೆ ವಸ್ತುವಲ್ಲ, ಚಪ್ಪಲಿ ಹಾಕಿ ವೀಕ್ಷಣೆ ಸಲ್ಲ: ಬಿಜೆಪಿ ಕಿಡಿ
ಗಗ್ಗರ ಮನರಂಜನೆ ವಸ್ತುವಲ್ಲ, ಚಪ್ಪಲಿ ಹಾಕಿ ವೀಕ್ಷಣೆ ಸಲ್ಲ: ಬಿಜೆಪಿ ಕಿಡಿ
ಶಿಷ್ಟಾಚಾರ ಉಲ್ಲಂಘನೆ: ಬೀದರ್ ಡಿಹೆಚ್ಒ, ಬಸವಕಲ್ಯಾಣ ಟಿಹೆಚ್ಒ ಅಮಾನತು
ಶಿಷ್ಟಾಚಾರ ಉಲ್ಲಂಘನೆ: ಬೀದರ್ ಡಿಹೆಚ್ಒ, ಬಸವಕಲ್ಯಾಣ ಟಿಹೆಚ್ಒ ಅಮಾನತು
ಹುಲಿ ವೇಷದ ತಾಸೆಯ ಪೆಟ್ಟಿಗೆ ಬಸನಗೌಡ ಪಾಟೀಲ್ ಭರ್ಜರಿ ಸ್ಟೆಪ್ಸ್
ಹುಲಿ ವೇಷದ ತಾಸೆಯ ಪೆಟ್ಟಿಗೆ ಬಸನಗೌಡ ಪಾಟೀಲ್ ಭರ್ಜರಿ ಸ್ಟೆಪ್ಸ್
ಮತ್ತೆ ಶಾಸ್ತ್ರಿ ಕಿರಿಕ್; ಆಸಿಯಾ ತಾಳ್ಮೆ ಕಟ್ಟೆ ಒಡೆದೇಹೋಯ್ತು
ಮತ್ತೆ ಶಾಸ್ತ್ರಿ ಕಿರಿಕ್; ಆಸಿಯಾ ತಾಳ್ಮೆ ಕಟ್ಟೆ ಒಡೆದೇಹೋಯ್ತು
ಕೋಲಾರ ಜಿಲ್ಲಾ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ
ಕೋಲಾರ ಜಿಲ್ಲಾ ಆಸ್ಪತ್ರೆಗೆ ಮಳೆ ನೀರು ನುಗ್ಗಿ ಅವಾಂತರ
ಸಿದ್ದರಾಮಯ್ಯ ವೀಕ್ ಆದ್ರೆ ಕಾಂಗ್ರೆಸ್ ಸಹ ವೀಕ್: ಕೆಎನ್ ರಾಜಣ್ಣ
ಸಿದ್ದರಾಮಯ್ಯ ವೀಕ್ ಆದ್ರೆ ಕಾಂಗ್ರೆಸ್ ಸಹ ವೀಕ್: ಕೆಎನ್ ರಾಜಣ್ಣ
ಕರ್ಕಾಟಕ ರಾಶಿಗೆ ಕುಜ ಗ್ರಹ ಪ್ರವೇಶ ಇಂದು: ದ್ವಾದಶ ರಾಶಿಗಳ ದಿನ ಭವಿಷ್ಯ
ಕರ್ಕಾಟಕ ರಾಶಿಗೆ ಕುಜ ಗ್ರಹ ಪ್ರವೇಶ ಇಂದು: ದ್ವಾದಶ ರಾಶಿಗಳ ದಿನ ಭವಿಷ್ಯ
ಪ್ರಧಾನಿ ಮೋದಿ ಜನ್ಮದಿನಕ್ಕೆ ಸಿಎಂ ಧಾಮಿಯಿಂದ ಯಮುನಾ ಆರತಿ
ಪ್ರಧಾನಿ ಮೋದಿ ಜನ್ಮದಿನಕ್ಕೆ ಸಿಎಂ ಧಾಮಿಯಿಂದ ಯಮುನಾ ಆರತಿ
ಶಿಪ್ರಾ ನದಿ ದಂಡೆಯಲ್ಲಿ ದೀಪಗಳಿಂದಲೇ ಮೂಡಿದ ಪ್ರಧಾನಿ ಮೋದಿಯವರ ಬೃ
ಶಿಪ್ರಾ ನದಿ ದಂಡೆಯಲ್ಲಿ ದೀಪಗಳಿಂದಲೇ ಮೂಡಿದ ಪ್ರಧಾನಿ ಮೋದಿಯವರ ಬೃ
ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಮಾಡಿದ ಪ್ರಲ್ಹಾದ್​​ ಜೋಶಿ
ಪ್ರಧಾನಿ ಮೋದಿ ಹುಟ್ಟುಹಬ್ಬ ಅಂಗವಾಗಿ ರಕ್ತದಾನ ಮಾಡಿದ ಪ್ರಲ್ಹಾದ್​​ ಜೋಶಿ