ಕೆಪಿಟಿಸಿಎಲ್, ಬೆಸ್ಕಾಂ, ಬಿಬಿಎಂಪಿ ಸಾಮೂಹಿಕ ನೆರವಿನಲ್ಲಿ ಕೋವಿಡ್ ಆರೈಕೆ ಕೇಂದ್ರ ಸ್ಥಾಪನೆ
ನಿಮಿಷಕ್ಕೆ 40 ಕೋವಿಡ್ ಬೆಡ್ಗಳಿಗೆ ಆಕ್ಸಿಜನ್ ಸರಬರಾಜು ಮಾಡಲು 330 ಲೀಟರ್ ಸಾಮರ್ಥ್ಯದ PSA ಘಟಕವನ್ನು ಸುಮಾರು 73 ಲಕ್ಷ ರೂಪಾಯಿ ವೆಚ್ಚದಲ್ಲಿ KPTCL ಕೊಡಮಾಡಿದೆ. ಇದರ ಜೊತೆಗೆ ವೈದ್ಯರ ಸೇವೆಯನ್ನೂ ಒದಗಿಸಿದೆ. ‘ಡಾಕ್ಟರ್ಸ್ ಫಾರ್ ಯು’ ಎಂಬ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ವೈದ್ಯ ಸೇವೆಯನ್ನು ನೀಡತೊಡಗಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು (KPTCL) ಕೊರೊನಾ ಸೋಂಕು ಎರಡನೆಯ ಅಲೆ ತೀವ್ರವಾಗಿರುವ ಸಂದರ್ಭದಲ್ಲಿ ಕೆಪಿಟಿಸಿಎಲ್, ಬೆಸ್ಕಾಂ, ಬಿಬಿಎಂಪಿ ಮತ್ತಿತರ ದಾನಿಗಳು ಮುಂದೆ ಬಂದಿದ್ದು, ಕೊರೊನಾ ಸಂಕಷ್ಟ ಕಾಲದಲ್ಲಿ ಬಿಬಿಎಂಪಿ ಕೈಹಿಡಿಯಲು ಮುಂದಾಗಿದೆ. ಈ ಸಂದರ್ಭದಲ್ಲಿ ಆಕ್ಸಿಜನ್ ಪ್ರೆಷರ್ ಸ್ವಿಂಗ್ ಅಬ್ಸಾರ್ಪ್ಷನ್ (PSA) ಘಟಕ ಮತ್ತು 50 ಬೆಡ್ ಸಾಮರ್ಥ್ಯದ ಹೈ ಡಿಪೆನ್ಡ್ಯೆನ್ಸಿ ಯುನಿಟ್ಗಳನ್ನು (HDU) ಸ್ಥಾಪಿಸಿದ್ದು ಇಂದಿನಿಂದ ಕಾರ್ಯಾರಂಭ ಮಾಡಿವೆ.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ, ಸ್ನೇಹಿತರು, ದಾನಿಗಳು ಮತ್ತು ಕೆಪಿಟಿಸಿಎಲ್ನ ಸಾಮಾಜಿಕ ಬದ್ಧತೆ ಯೋಜನೆಯಡಿ ಸಂಪನ್ಮೂಲಗಳನ್ನು ಸಂಗ್ರಹಿಸಿ, ಕೊರೊನಾ ಸೋಂಕಿತರಿಗೆ ನೆರವಾಗಲು ಈ ಘಟಕಗಳನ್ನು ಇಂದಿನಿಂದ ಕಾರ್ಯಾರಂಭಿಸಿವೆ. ಈ ಘಟಕವನ್ನು ಕೊರೊನಾ ತುರ್ತು ಸೇವಾ ಸಂದರ್ಭದಲ್ಲಿ ಕೇಲವ 12 ದಿನಗಳ ಕಾಲಮಿತಿಯಲ್ಲಿ ನಿರ್ಮಾಣ ಮಾಡಲಾಗಿದೆ.
ನಿಮಿಷಕ್ಕೆ 40 ಕೋವಿಡ್ ಬೆಡ್ಗಳಿಗೆ ಆಕ್ಸಿಜನ್ ಸರಬರಾಜು ಮಾಡಲು 330 ಲೀಟರ್ ಸಾಮರ್ಥ್ಯದ PSA ಘಟಕವನ್ನು ಸುಮಾರು 73 ಲಕ್ಷ ರೂಪಾಯಿ ವೆಚ್ಚದಲ್ಲಿ KPTCL ಕೊಡಮಾಡಿದೆ. ಇದರ ಜೊತೆಗೆ ವೈದ್ಯರ ಸೇವೆಯನ್ನೂ ಒದಗಿಸಿದೆ. ‘ಡಾಕ್ಟರ್ಸ್ ಫಾರ್ ಯು’ ಎಂಬ ಸ್ವಯಂ ಸೇವಾ ಸಂಸ್ಥೆ ಸಹಯೋಗದಲ್ಲಿ ವೈದ್ಯ ಸೇವೆಯನ್ನು ನೀಡತೊಡಗಿದೆ. ಇದಲ್ಲದೆ ಔಷದಗಳು, ದಿನನಿತ್ಯ ಬಳಕೆಯ ಸಾಮಾನುಗಳು, ಹೌಸ್ ಕೀಪಿಂಗ್ ನೆರವು ಸಹ ನೀಡತೊಡಗಿದೆ. ಜೊತೆಗೆ ಉತ್ತಮ ಗುಣಮಟ್ಟದ ಆಹಾರವನ್ನೂ ಸೋಂಕಿತರಿಗೆ ನೀಡುತ್ತಿದೆ.
(KPTCL and bescom starts high dependency unit Covid Beds for covid patients along with bbmp)
ಸುಪ್ರೀಂಕೋರ್ಟ್‌ನಿಂದ 1200 ಮೆ. ಟನ್ ಆಕ್ಸಿಜನ್ ಹಂಚಿಕೆ: ಕೋವಿಡ್ ಪರೀಕ್ಷೆ ರಿಸಲ್ಟ್ ತಡವಾದರೆ ಲ್ಯಾಬ್‌ಗಳಿಗೆ ದಂಡ




