ವೈದ್ಯಕೀಯ ಆಮ್ಲಜನಕ ಹೊತ್ತ ಎರಡು ಮತ್ತು ಮೂರನೇ ರೈಲು ಕರ್ನಾಟಕದತ್ತ; ನಾಳೆ ಬೆಂಗಳೂರಿಗೆ
ಕರ್ನಾಟಕದತ್ತ ಆಮ್ಲಜನಕ ಹೊತ್ತು ತರುತ್ತಿರುವ ಈ ಎರಡೂ ರೈಲುಗಳು 6 ಕ್ರೈಯೊಜೆನಿಕ್ ಕಂಟೇನರ್‌ಗಳನ್ನು ಹೊಂದಿದೆ. ಹಾಗೂ ಅವುಗಳಲ್ಲಿ 120 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಇವೆ.
ಬೆಂಗಳೂರು: ವೈದ್ಯಕೀಯ ಆಮ್ಲಜನಕ ಹೊತ್ತ ಎರಡನೇ ರೈಲು ಕರ್ನಾಟಕಕ್ಕೆ ಬರುತ್ತಿದೆ. ಒಡಿಶಾದ ಕಾಳಿಂಗನಗರ್‌ನಿಂದ ಬೆಂಗಳೂರಿನ ಐಸಿಡಿ ವೈಟ್‌ಫೀಲ್ಡ್‌ಗೆ ಬರುತ್ತಿದೆ. ನಾಳೆ (ಮೇ 15) ಬೆಳಗ್ಗೆ 5 ಗಂಟೆ ವೇಳೆಗೆ ರೈಲು ಬೆಂಗಳೂರು ತಲುಪಲಿದೆ. ಒಡಿಶಾದ ಜಾಜಪುರ್ ಜಿಲ್ಲೆಯ ಕಾಳಿಂಗನಗರ್‌ನಿಂದ ರೈಲು ಇಂದು (ಮೇ 14) ರಾತ್ರಿ 3.10ರ ವೇಳೆಗೆ ಹೊರಟಿತ್ತು.
ಈ ರೈಲಿನ ಬಳಿಕ, ಕರ್ನಾಟಕಕ್ಕೆ ಆಕ್ಸಿಜನ್ ಹೊತ್ತ ಮತ್ತೊಂದು ರೈಲು (ಮೂರನೇ ರೈಲು) ನಾಳೆ (ಮೇ 15) ಸಂಜೆ ಆಗಮಿಸಲಿದೆ. ಜಾರ್ಖಂಡ್‌ನ ಟಾಟಾನಗರ್‌ನಿಂದ ಹೊರಟಿರುವ ರೈಲು ಐಸಿಡಿ ವೈಟ್‌ಫೀಲ್ಡ್‌ಗೆ ನಾಳೆ (ಮೇ 15) ಸಂಜೆ 5 ಗಂಟೆಯ ವೇಳಗೆ ತಲುಪಲಿದೆ. ರೈಲು ಟಾಟಾನಗರ್‌ನಿಂದ ಇಂದು (ಮೇ 14) ರಾತ್ರಿ 12.40 ವೇಳೆಗೆ ಹೊರಟಿತ್ತು.
ಕರ್ನಾಟಕದತ್ತ ಆಮ್ಲಜನಕ ಹೊತ್ತು ತರುತ್ತಿರುವ ಈ ಎರಡೂ ರೈಲುಗಳು 6 ಕ್ರೈಯೊಜೆನಿಕ್ ಕಂಟೇನರ್‌ಗಳನ್ನು ಹೊಂದಿದೆ. ಹಾಗೂ ಅವುಗಳಲ್ಲಿ 120 ಟನ್ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಇವೆ. ಈ ಬಗ್ಗೆ ಅಧಿಕೃತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಕರ್ನಾಟಕ ರಾಜ್ಯದಲ್ಲಿ ಆಕ್ಸಿಜನ್ ಅಭಾವ ಹೆಚ್ಚಾಗಿತ್ತು. ಅದನ್ನು ನೀಗಿಸಲು ಅನೇಕ ದೇಶಗಳು ಸಹಾಯಕ್ಕಾಗಿ ಮುಂದೆ ಬಂದಿದ್ದವು. ಸದ್ಯ ಮೇ 11ರಂದು ಮೊದಲ ಬಾರಿಗೆ ರೈಲಿನ ಮೂಲಕ ಆಕ್ಸಿಜನ್ ಬಂದಿತ್ತು. ಜಮ್ಶೆಡ್ಪುರದಿಂದ ಬೆಂಗಳೂರಿಗೆ ಎಕ್ಸ್‌ಪ್ರೆಸ್ ರೈಲಿನಲ್ಲಿ 6 ಆಕ್ಸಿಜನ್ ಕಂಟೇನರ್‌ಗಳು ತಲುಪಿದ್ದವು. ತಲಾ 20 ಟನ್ ಇರುವ ಆಕ್ಸಿಜನ್ ಕಂಟೇನರ್‌ಗಳು ವೈಟ್‌ಫೀಲ್ಡ್‌ನಲ್ಲಿರುವ ಕಾರ್ಪೊರೇಷನ್ ಆಫ್ ಇಂಡಿಯಾ ಡಿಪೋಗೆ ಆಗಮಿಸಿದ್ದವು.
ಜಮ್ಶೆಡ್ಪುರದಿಂದ 10ನೇ ತಾರೀಖಿನ ಮುಂಜಾನೆ 3ಕ್ಕೆ ಹೊರಟಿದ್ದ ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲು 30 ಗಂಟೆಯಲ್ಲಿ ಬೆಂಗಳೂರು ತಲುಪಿತ್ತು. ಐಎಸ್ಒ ಕಂಟೇನರ್ ಮೂಲಕ ಆಕ್ಸಿಜನ್ ಆಗಮಿಸಿದ್ದು ಒಟ್ಟು 17.50 ಸಾವಿರ ಲೀಟರ್ ಆಕ್ಸಿಜನ್ ತರಿಸಿಕೊಳ್ಳಲಾಗಿತ್ತು. ಆಕ್ಸಿಜನ್ ಹೊತ್ತ ರೈಲಿಗೆ ಗ್ರೀನ್ ಕಾರಿಡಾರ್ ವ್ಯವಸ್ಥೆ ಮಾಡಲಾಗಿತ್ತು.
ಇದನ್ನೂ ಓದಿ: ಗಾಳಿಯಲ್ಲಿರುವ ಆಕ್ಸಿಜನ್ ಪಡೆದು ರೋಗಿಗೆ ಸರಬರಾಜು ಮಾಡಬಲ್ಲ ಜನರೇಟರ್ ಸದ್ಯವೇ ಲಭ್ಯವಾಗಲಿದೆ: ಸಚಿವ ಡಾ.ಸುಧಾಕರ್
ಆಸ್ಪತ್ರೆ ಆವರಣದಲ್ಲಿ ಆಕ್ಸಿಜನ್ ಪೆಂಡಾಲ್; ಆಮ್ಲಜನಕ ಕೊರತೆ ನೀಗಿಸಲು ತಮಿಳುನಾಡು ವೈದ್ಯನ ವಿನೂತನ ಕ್ರಮ
Published On - 9:09 pm, Fri, 14 May 21