KSDL ಎಂಡಿ ಸೇರಿ ಇನ್ನು 6 ಜನ ಅವ್ಯವಹಾರ ನಡೆಸಿದ್ದಾರೆ, ಅವರ ವಿರುದ್ಧವೂ ತನಿಖೆಯಾಗಲಿ: KSDL ನೌಕರರ ಸಂಘದ ಅಧ್ಯಕ್ಷ ಶಿವಶಂಕರ್
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ತನಿಖೆಯಿಂದ ಕೆಎಸ್ಡಿಲ್ ಅಕ್ರಮ ಬೆಳಕಿಗೆ ಬಂದಿದೆ. KSDL ಅಧ್ಯಕ್ಷರಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ, ಪುತ್ರನ ಬಗ್ಗೆ ಸಹ ಬೆಳಕಿಗೆ ಬಂದಿದೆ. ಕೆಎಸ್ಡಿಎಲ್ ಭ್ರಷ್ಟಾಚಾರದಲ್ಲಿ ಮತ್ತಷ್ಟು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಕೆಎಸ್ಡಿಎಲ್ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ ಆರೋಪ ಮಾಡಿದ್ದಾರೆ.
ಬೆಂಗಳೂರು: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ (Lokayukta) ತನಿಖೆಯಿಂದ ಕೆಎಸ್ಡಿಲ್ (KSDL) ಅಕ್ರಮ ಬೆಳಕಿಗೆ ಬಂದಿದೆ. KSDL ಅಧ್ಯಕ್ಷರಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ, ಪುತ್ರನ ಬಗ್ಗೆ ಸಹ ಬೆಳಕಿಗೆ ಬಂದಿದೆ. ಕೆಎಸ್ಡಿಎಲ್ ಭ್ರಷ್ಟಾಚಾರದಲ್ಲಿ ಮತ್ತಷ್ಟು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಕೆಎಸ್ಡಿಎಲ್ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ (Shivashankar) ಆರೋಪ ಮಾಡಿದ್ದಾರೆ.
ಕೆಎಸ್ಡಿಎಲ್ ನೌಕರರ ಸಂಘದ ಅಧ್ಯಕ್ಷ ಶಿವಶಂಕರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕೆಎಸ್ಡಿಎಲ್ ಭ್ರಷ್ಟಾಚಾರದಲ್ಲಿ ಕೆಎಸ್ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಮಹೇಶ್, ಉಮಾಶಂಕರ್ ಅಪಾಲಿ, ಪರ್ಚೆಸ್ ನೆಗೋಸಿಯೇನ್ ಕಮಿಟಿ ಅಧ್ಯಕ್ಷ ಹಾಗೂ ಪ್ರಧಾನ ವ್ಯವಸ್ಥಾಪಕ ಕೆಎಸ್ಡಿಎಲ್. ಡಾ. ಚಿದಾನಂದ್, ಆರ್ ಮತ್ತು ಡಿ ವ್ಯವಸ್ಥಾಪಕ ಕೆಎಸ್ಡಿಎಲ್. ನಾಗರಾಜ್, ಕ್ಯೂಸಿಡಿ ವ್ಯವಸ್ಥಾಪಕ, ಕೆಎಸ್ಡಿಎಲ್. ಸುಂದರ್ ಮೂರ್ತಿ, ಡೆಪ್ಯೂಟಿ ಜನರಲ್ ಮ್ಯಾನೇಜರ್, ಮೆಟೀರಿಯಲ್ಸ್ ಹಾಹೂ ಹಣಕಾಸು ವಿಭಾಗದ ವ್ಯವಸ್ಥಾಪಕ,ಕೆಎಸ್ಡಿಎಲ್, ಅವಿನಾಶ್ ಗುಪ್ತಾ, ಪ್ರಧಾನ ವ್ಯವಸ್ಥಾಪಕ, ಹಣಕಾಸು ವಿಭಾಗ, ಕೆಎಸ್ಡಿಎಲ್ ಈ ಆರು ಜನ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಆರು ಜನರ ವಿರುದ್ಧ ಶಿಸ್ತು ಜರುಗಿಸಿದರೆ ಸತ್ಯ ಸಂಗತಿ ಬೆಳಕಿಗೆ ಬರಲಿದೆ. ಕೆಎಸ್ಡಿಎಲ್ ಎಲ್ಲ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಮಾರುಕಟ್ಟೆ ದರವನ್ನು ನೆಗೋಸಿಯೇಷನ್ ಮಾಡಿಬೇಕಾರುವುದು ಆರು ಜನರ ಕರ್ತವ್ಯವಾಗಿದೆ. ಆದರೆ ಈ ಅಧಿಕಾರಿಗಳು ಕರ್ತವ್ಯದಲ್ಲಿ ವಿಫಲರಾಗಿ ಭ್ರಷ್ಟಾಚಾರಕ್ಕೆ ಪ್ರಮುಖಕಾರಣರಾಗಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆಯಾಗಬೇಕೆಂದು ಒತ್ತಾಯ ಮಾಡಿದ್ದು, ಈ ಅಧಿಕಾರಿಗಳನ್ನು ಹೋಣೆಗಾರರನ್ನಾಗಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಕೆಎಸ್ಡಿಎಲ್ ಕರ್ನಾಟಕ ಜನರ ಸ್ವತ್ತು. 107 ವರ್ಷದ ಹಳೆಯ ಸಂಸ್ಥೆಯಾಗಿದ್ದು, ಇಂತಹ ಕಾರ್ಖಾನೆಯಲ್ಲಿ ದೊಡ್ಡ ರೀತಿಯ ಹಗರಣ ನಡೆದಿದೆ. ಹಗರಣದಿಂದ ಸಂಸ್ಥೆ ದಿವಾಳಿಯಾಗಿ 10 ಸಾವಿರ ಕುಟುಂಬಗಳು ಬೀದಿಪಾಲಾಗುತ್ತಿವೆ. 2023-24 ಸಾಲಿನಲ್ಲೇ 15 ಕಚ್ಚಾ ವಸ್ತುಗಳ ಖರೀದಿಯಲ್ಲಿ 139 ಕೋಟಿ ಕಿಕ್ ಬ್ಯಾಕ್ ಹೋಗಿದೆ. ಸೋಪು ತಯಾರಿಕೆಯಲ್ಲಿ ಬೆಲೆಹೆಚ್ಚಳ ಆಗಿ ಗ್ರಾಹಕರಿಗೆ ತೊಂದರೆ ಆಗುತ್ತಿದೆ. ಭ್ರಷ್ಟಾಚಾರದಿಂದ 10 ಸಾವಿರ ಕಾರ್ಮಿಕರಿಗೆ ತೊಂದರೆ ಆಗಿದೆ. ಇದೇ ರೀತಿ ಮುಂದುವರೆದ್ರೆ ಕಾರ್ಖಾನೆ ಮುಚ್ಚಬೇಕಾದ ಪರಿಸ್ಥಿತಿ ಎದುರಾಗುತ್ತೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಅಧಿಕಾರಿಗಳನ್ನ ಅರೆಸ್ಟ್ ಮಾಡಿದರೆ ಸತ್ಯ ಹೊರಗೆ ಬರತ್ತೆ. ಅಧಿಕಾರಿಗಳ ವಿರುದ್ದ ತನಿಖೆಮಾಡುವಂತೆ ಲೋಕಾಯುಕ್ತ, ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಈಗಾಗಲೇ ಲೋಕಾಯುಕ್ತಕ್ಕೆ ಅಧಿಕಾರಿಗಳ ವಿರುದ್ಧ ನೌಕರರ ಸಂಘ ದೂರು ನೀಡಿದೆ ಎಂದರು.
ಮಾಜಿ ಕೆಎಸ್ಡಿಎಲ್ ಅಧ್ಯಕ್ಷ ಬೈರತಿ ಬಸವರಾಜ್ 3.75 ಕೋಟಿ ತಗೊಂಡು ಹೋದರು
ಸಿಎಸ್ಆರ್ ಪಂಡ್ ಯಾವ ರೀತಿ ಉಪಯೋಗ ಆಗತ್ತೆ..? ಮಾಜಿ ಕೆಎಸ್ಡಿಎಲ್ ಅಧ್ಯಕ್ಷ ಬೈರತಿ ಬಸವರಾಜ್ 3.75 ರೂ. ಕೋಟಿ ತಗೊಂಡು ಹೋದರು. ಒಂದು ಸ್ಕೂಲ್ ಕಟ್ಟಿಸಲು ತೆಗೆದುಕೊಂಡು ಹೋದ್ರು, ಅದು ಸರಿಯಾಗಿ ಬಳಕೆ ಆಗಿದ್ಯಾ.? ಈ ಬಗ್ಗೆ ಮಾಹಿತಿಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:55 am, Sat, 4 March 23