ಬಿಎಂಟಿಸಿ ಡಿಪೋಗಳಲ್ಲಿ ಡೀಸೆಲ್​ಗೆ ಹಾಹಾಕಾರ! ಬೆಂಗಳೂರಿನಲ್ಲಿ ಇಂದು ಬಸ್ ಸಂಚಾರ ವ್ಯತ್ಯಯ ಸಾಧ್ಯತೆ

| Updated By: sandhya thejappa

Updated on: Jun 27, 2022 | 9:28 AM

ಡಿಪೋಗಳಲ್ಲಿ ಡೀಸೆಲ್ ಖಾಲಿಯಾಗಿರುವ ಹಿನ್ನೆಲೆ ನಿಗಮ ಚಿಲ್ಲರೆ ವ್ಯಾಪಾರಿಗಳಿಂದ ಡೀಸೆಲ್ ಖರೀದಿಸುತ್ತಿತ್ತು. ಆದರೆ ಮೂರು ದಿನದಿಂದ ಚಿಲ್ಲರೆ ವ್ಯಾಪಾರಿಗಳಿಂದೂ ಸಪ್ಲೈ ಆಗುತ್ತಿಲ್ಲ.

ಬಿಎಂಟಿಸಿ ಡಿಪೋಗಳಲ್ಲಿ ಡೀಸೆಲ್​ಗೆ ಹಾಹಾಕಾರ! ಬೆಂಗಳೂರಿನಲ್ಲಿ ಇಂದು ಬಸ್ ಸಂಚಾರ ವ್ಯತ್ಯಯ ಸಾಧ್ಯತೆ
ಬಿಎಂಟಿಸಿ ಬಸ್​ಗಳು (ಸಾಂದರ್ಭಿಕ ಚಿತ್ರ)
Follow us on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಹುತೇಕ ಜನರು ಓಡಾಡಲು ಬಿಎಂಟಿಸಿ (BMTC) ಬಸ್​ಗಳನ್ನೇ ಅವಲಂಬಿಸಿದ್ದಾರೆ. ವಿದ್ಯಾರ್ಥಿಗಳಿಂದ ಹಿಡಿದು ನೌಕರರ ತನಕ ಬಿಎಂಟಿಸಿ ಬಸ್​ಗಳಲ್ಲಿ ಓಡಾಡುತ್ತಾರೆ. ಆದರೆ ಸದ್ಯ ಬಿಎಂಟಿಸಿ ಡಿಪೋಗಳಲ್ಲಿ ಡೀಸೆಲ್​ಗೆ (Diesel) ಹಾಹಾಕಾರ ಶುರುವಾಗಿದ್ದು, ಇಂದು (ಜೂನ್ 27) ಬಸ್ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಕಳೆದ ಎರಡು ದಿನಗಳಿಂದ ಡಿಪೋ ನಂ 22 ಸೇರಿ ಕೆಲ ಡಿಪೋಗಳಲ್ಲಿ ಡೀಸೆಲ್ ಕೊರತೆ ಎದುರಾಗಿತ್ತು. ಇಂದು ಬಹುತೇಕ ಡಿಪೋಗಳಲ್ಲಿ ಡೀಸೆಲ್ ಖಾಲಿ ಆಗುವ ಸಾಧ್ಯತೆ ಹೆಚ್ಚಿದೆ.

ಡಿಪೋಗಳಲ್ಲಿ ಡೀಸೆಲ್ ಖಾಲಿಯಾಗಿರುವ ಹಿನ್ನೆಲೆ ನಿಗಮ ಚಿಲ್ಲರೆ ವ್ಯಾಪಾರಿಗಳಿಂದ ಡೀಸೆಲ್ ಖರೀದಿಸುತ್ತಿತ್ತು. ಆದರೆ ಮೂರು ದಿನದಿಂದ ಚಿಲ್ಲರೆ ವ್ಯಾಪಾರಿಗಳಿಂದೂ ಸಪ್ಲೈ ಆಗುತ್ತಿಲ್ಲ. ಹೀಗಾಗಿ ಡಿಪೋಗಳಲ್ಲಿ ಭಾರಿ ಡೀಸೆಲ್ ಕೊರತೆ ಉಂಟಾಗಿದ್ದು, ಇಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರಯಾಣಿಕರಿಗೆ ಓಡಾಡಲು ತೊಂದರೆ ಉಂಟಾಗಬಹುದು.

ಇದನ್ನೂ ಓದಿ: ಇಂದಿನಿಂದ ಎಸ್ಎಸ್ಎಲ್​ಸಿ ಪೂರಕ ಪರೀಕ್ಷೆ ಆರಂಭ! ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ

ಇದನ್ನೂ ಓದಿ
Hardik Pandya: ಐರ್ಲೆಂಡ್ ವಿರುದ್ಧ ಕೇವಲ ಒಂದು ವಿಕೆಟ್ ಕಿತ್ತು ಇತಿಹಾಸ ನಿರ್ಮಿಸಿದ ಹಾರ್ದಿಕ್ ಪಾಂಡ್ಯ
ಜುಲೈ 1ರಿಂದ ಕಬ್ಬನ್ ಪಾರ್ಕ್​ನಲ್ಲಿ ಸಾಕುಪ್ರಾಣಿಗಳಿಗೆ ಪ್ರವೇಶ ನಿಷೇಧ ಪ್ರಸ್ತಾವ: ನಾಯಿ ಸಾಕಿದವರಿಂದ ಆಕ್ರೋಶ
Jothe Jotheyali Serial Song: 3 ಕೋಟಿ ಬಾರಿ ವೀಕ್ಷಣೆ ಕಂಡ ‘ಜೊತೆ ಜೊತೆಯಲಿ’ ಧಾರಾವಾಹಿ ಹಾಡು
ಆಕ್ಸಿಡೆಂಟ್ ಎಂದು ಬಿಂಬಿಸಿದ್ದ ಪ್ರಕರಣಕ್ಕೆ ಟ್ವಿಸ್ಟ್; ಮದ್ಯ ಕುಡಿಸಿ ಸ್ನೇಹಿತನನ್ನೇ ಕೊಲೆಗೈದಿದ್ದ ಆರೋಪಿಗಳು ಅರೆಸ್ಟ್!

ಸಗಟು ಖರೀದಿ ದರ ಹೆಚ್ಚಳದಿಂದ ನಿಗಮ ಚಿಲ್ಲರೆ ವ್ಯಾಪಾರದಲ್ಲಿ ತೈಲ ಖರೀದಿ ಮಾಡುತ್ತಿದೆ. ನಿತ್ಯ ಚಿಲ್ಲರೆ ವ್ಯಾಪಾರಿಗಳು ಟ್ಯಾಂಕರ್​ಗಳ ಮೂಲಕ ಬಿಎಂಟಿಸಿ ಡಿಪೋಗಳಿಗೆ ಇಂಧನ ಪೂರೈಕೆ ಮಾಡುತ್ತಿದ್ದರು. ಆದರೆ ಇಂದು ಕಂಪನಿಗಳು ಬಂಕ್​ಗಳಿಗೆ ಇಂಧನ ಪೂರೈಕೆ ಮಾಡಲಿಲ್ಲ. ಡಿಪೋಗಳಲ್ಲಿ ಡಿಸೇಲ್ ಖಾಲಿಯಾಗಿ ಬಿಎಂಟಿಸಿ ಬಸ್​ಗಳು ಖಾಸಗಿ ಬಂಕ್​ಗಳ ಮುಂದೆ ನಿಂತಿವೆ.

ಇಂದು ಡೀಸೆಲ್ ಪೂರೈಕೆ ಆಗದಿದ್ದರೆ ನಾಳೆ ಬಹುತೇಕ ಬಸ್​ಗಳು ರೋಡಿಗೆ ಇಳಿಯುವುದು ಅನುಮಾನ ಇದೆ.

ಇದನ್ನೂ ಓದಿ: ಜುಲೈ 1ರಿಂದ ಕಬ್ಬನ್ ಪಾರ್ಕ್​ನಲ್ಲಿ ಸಾಕುಪ್ರಾಣಿಗಳಿಗೆ ಪ್ರವೇಶ ನಿಷೇಧ ಪ್ರಸ್ತಾವ: ನಾಯಿ ಸಾಕಿದವರಿಂದ ಆಕ್ರೋಶ

Published On - 9:21 am, Mon, 27 June 22