ಹಿಮಾಲಯ ಪರ್ವತಕ್ಕೆ ಹೋಗಿದ್ದ ಬೆಂಗಳೂರು ಮಣಿಪಾಲ್ ಆಸ್ಪತ್ರೆ ವೈದ್ಯ ನಾಪತ್ತೆ! ಪೊಲೀಸರಿಂದ ಹುಡುಕಾಟ

ವೈದ್ಯ ಚಂದ್ರಮೋಹನ್ ಹಿಮಾಲಯ ಪರ್ವತಕ್ಕೆ ಚಾರಣ ಹೋಗಿದ್ದರು. ಜೂನ್ 20ರ ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈವರೆಗೆ ಯಾರ ಸಂಪರ್ಕಕ್ಕೂ ಸಿಗಲಿಲ್ಲ.

ಹಿಮಾಲಯ ಪರ್ವತಕ್ಕೆ ಹೋಗಿದ್ದ ಬೆಂಗಳೂರು ಮಣಿಪಾಲ್ ಆಸ್ಪತ್ರೆ ವೈದ್ಯ ನಾಪತ್ತೆ! ಪೊಲೀಸರಿಂದ ಹುಡುಕಾಟ
ನಾಪತ್ತೆಯಾಗಿರುವ ವೈದ್ಯ ಚಂದ್ರಮೋಹನ್
Follow us
TV9 Web
| Updated By: sandhya thejappa

Updated on:Jun 27, 2022 | 11:20 AM

ಬೆಂಗಳೂರು: ಟ್ರೆಕ್ಕಿಂಗ್ (Trekking) ಹೋಗಿದ್ದ ಮಣಿಪಾಲ್ ಆಸ್ಪತ್ರೆಯ (Manipal Hospital) ವೈದ್ಯ ನಾಪತ್ತೆಯಾಗಿದ್ದು, ವೈದ್ಯನ ಮೊಬೈಲ್ ಸ್ವಿಚ್ ಆಫ್ ಆಗಿದೆ. ವೈದ್ಯ ಚಂದ್ರಮೋಹನ್ ಹಿಮಾಲಯ ಪರ್ವತಕ್ಕೆ ಚಾರಣ ಹೋಗಿದ್ದರು. ಜೂನ್ 20ರ ನಂತರ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈವರೆಗೆ ಯಾರ ಸಂಪರ್ಕಕ್ಕೂ ಸಿಗಲಿಲ್ಲ. ಸದ್ಯ ಈ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹುಡುಕಾಟ ನಡೆಸುತ್ತಿದ್ದಾರೆ. ನಾಪತ್ತೆಯಾಗಿರುವ ಚಂದ್ರಮೋಹನ್ ವಸಂತನಗರದ ನಿವಾಸಿ.

ವೈದ್ಯ ಚಂದ್ರಮೋಹನ್ ಮೇ 3ರಂದು ಬೆಂಗಳೂರಿನಿಂದ ಹೊರಟಿದ್ದರು. ಬೆಂಗಳೂರಿನಿಂದ ಕಠ್ಮಂಡು ಫ್ಲೈಟ್​ನಲ್ಲಿ ತೆರಳಿದ್ದರು. 31 ವರ್ಷದ ಚಂದ್ರಮೋಹನ್​ಗೆ ಇನ್ನೂ ಮದುವೆಯಾಗಿರಲಿಲ್ಲ. ಆಧ್ಯಾತ್ಮಿಕತೆ ಕಡೆ ಅತಿಯಾದ ಒಲವು ಹೊಂದಿದ್ದರು ಎಂದು ತಿಳಿದುಬಂದಿದೆ. ಯಾವುದೇ ಪ್ರವಾಸಿ ಸಲಹೆ ತೆಗೆದುಕೊಳ್ಳದೇ ವೈದ್ಯ ಏಕಾಂಗಿಯಾಗಿ ಚಾರಣ ಹೋಗುವ ಹವ್ಯಾಸ ಹೊಂದಿದ್ದರು.

ಇದನ್ನೂ ಓದಿ: Ashadha Amavasya 2022: ಆಷಾಢ ಅಮಾವಾಸ್ಯೆ ಯಾವಾಗ? ಪೂಜಾ ವಿಧಾನ ಹಾಗೂ ಶುಭ ಮುಹೂರ್ತ

ಇದನ್ನೂ ಓದಿ
Image
ಇಂಡಿಯಲ್ಲಿರುವ ಗುರುದೇವ್ ರಾನಡೆ ಆಶ್ರಮದಲ್ಲಿ ಎರಡು ದಿನ ವಿಶ್ರಾಂತಿ ಪಡೆದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್
Image
Alia Bhatt Pregnant: ಆಲಿಯಾ ಭಟ್​ ಪ್ರೆಗ್ನೆಂಟ್​; ರಣಬೀರ್​ ಕಪೂರ್​ ಜತೆ ಮದುವೆ ಆಗಿ ಎರಡೂವರೆ ತಿಂಗಳಲ್ಲಿ ಗುಡ್​ ನ್ಯೂಸ್​
Image
Ashadha Amavasya 2022: ಆಷಾಢ ಅಮಾವಾಸ್ಯೆ ಯಾವಾಗ? ಪೂಜಾ ವಿಧಾನ ಹಾಗೂ ಶುಭ ಮುಹೂರ್ತ
Image
IKEA Nagasandra Store:  9 ಫುಟ್​ಬಾಲ್​ ಸ್ಟೇಡಿಯಂನಷ್ಟು ದೊಡ್ಡ IKEA ಸ್ಟೋರ್ ನಾಗಸಂದ್ರದಲ್ಲಿ ಆರಂಭ; 2ರಿಂದ 3 ಗಂಟೆ ಕಾಯೋದು ತಪ್ಪಿಲ್ಲ!

ನೇಪಾಳದ ಮೂಲಕ ಹಿಮಾಲಯ ಹತ್ತಲು ಹೋಗಿದ್ದ ವೈದ್ಯ, ಆಗಾಗ ಚಾರಣ ಹೋಗಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದರಂತೆ. ಶಿವನ ಪರಮ ಭಕ್ತನಾಗಿದ್ದು, ಸಾಧು ಸಂತರ ಜೊತೆ ಹೋಗಿ ಕಾಲ ಕಳೆಯುತ್ತಿದ್ದರಂತೆ. ಕೊವಿಡ್ ಸಮಯದಲ್ಲೂ ಒಂದು ತಿಂಗಳು ಮನೆ ತ್ಯಜಿಸಿದ್ದರಂತೆ. ಆ ಸಮಯದಲ್ಲೂ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದ್ದು, ಈ ಬಾರಿಯೂ ಅದೇ ರೀತಿ ಆಗಿರಬಹುದು ಎನ್ನುವ ಅನುಮಾನ ಇದೆ.

ಹೊಸ ಹೊಸ ಸ್ಥಳಗಳನ್ನು ಅನ್ವೇಷಿಸಲು ಚಂದ್ರಮೋಹನ್ ಒಂಟಿಯಾಗಿ ಹೋಗುತ್ತಿದ್ದರಂತೆ. ಸದ್ಯ ಮಗನನ್ನ ಹುಡುಕಿಕೊಂಡು ಪೋಷಕರು ನೇಪಾಳಕ್ಕೆ ಹೋಗಿದ್ದಾರೆ. ನೇಪಾಳ ಪೊಲೀಸರ ಸಹಾಯದಿಂದ ಪೋಷಕರು ಹುಡುಕುತ್ತಿದ್ದಾರೆ. ಹೈಗ್ರೌಂಡ್ ಪೊಲೀಸರು ಕೂಡಾ ಪೋಷಕರ ಸಂಪರ್ಕದಲ್ಲಿದ್ದಾರೆ.

ಇದನ್ನೂ ಓದಿ: Alia Bhatt Pregnant: ಆಲಿಯಾ ಭಟ್​ ಪ್ರೆಗ್ನೆಂಟ್​; ರಣಬೀರ್​ ಕಪೂರ್​ ಜತೆ ಮದುವೆ ಆಗಿ ಎರಡೂವರೆ ತಿಂಗಳಲ್ಲಿ ಗುಡ್​ ನ್ಯೂಸ್​

Published On - 11:09 am, Mon, 27 June 22

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು