ಗೃಹ ಲಕ್ಷ್ಮೀರಿಗೆ ಗುಡ್​ನ್ಯೂಸ್: 15 ದಿನದೊಳಗೆ ಮನೆ ಯಜಮಾನಿ ಖಾತೆಗೆ ಹಣ

ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಿದ ಮೇಲೆ ಮಹಿಳೆಯರಿಗೆ ಉಪಯೋಗವಾಗಿತ್ತಿದೆ. ಆಗಸ್ಟ್ 1.8 ಕೋಟಿ‌ ಜನ ಮಹಿಳೆಯರು, ಸೆಪ್ಟೆಂಬರ್ ತಿಂಗಳಲ್ಲಿ 1.14 ರಷ್ಟು ಜನ ರಿಜಿಸ್ಟರ್ ಮಾಡಿಕೊಂಡಿದ್ದರೆ, ಅಕ್ಟೋಬರ್ ತಿಂಗಳಲ್ಲಿ 1.16 ರಷ್ಟು ಮಹಿಳೆಯರಿಗೆ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಇನ್ನು ತಾಂತ್ರಿಕ ಸಮಸ್ಯೆಯಿಂದಾಗಿ ಮಹಿಳೆಯರ ಖಾತೆಗೆ ಹಣ ಹೋಗಿಲ್ಲ, ಇದರ ಜೊತೆಗೆ ಆಧಾರ್ ಲಿಂಕ್ ಆಗದಿರುವುದಕ್ಕೆ ಸಮಸ್ಯೆ ಆಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದರು.

ಗೃಹ ಲಕ್ಷ್ಮೀರಿಗೆ ಗುಡ್​ನ್ಯೂಸ್: 15 ದಿನದೊಳಗೆ ಮನೆ ಯಜಮಾನಿ ಖಾತೆಗೆ ಹಣ
ಲಕ್ಷ್ಮೀ ಹೆಬ್ಬಾಳ್ಕರ್​
Follow us
Poornima Agali Nagaraj
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 08, 2023 | 2:56 PM

ಬೆಂಗಳೂರು, ನ.08: ಕಾಂಗ್ರೆಸ್​ ಸರ್ಕಾರದ 5 ಗ್ಯಾರಂಟಿಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಈಗಾಗಲೇ ಜಾರಿಯಾಗಿದ್ದು, ಹಲವಾರು ಮಹಿಳೆಯರ ಖಾತೆಗೆ ಜಮಾ ಆದರೆ, ಇನ್ನೂ ಕೆಲವರ ಅಕೌಂಟ್​ಗೆ ಹೋಗಿಲ್ಲ. ಈ ಹಿನ್ನಲೆ ರಾಜ್ಯಾದ್ಯಂತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar), ಇಂದು(ನ.08) ಮಲ್ಲೇಶ್ವರಂನ ಬೆಂಗಳೂರು ಒನ್ ಕೇಂದ್ರಕ್ಕೆ ಭೇಟಿ ನೀಡಿ ಗೃಹಲಕ್ಷ್ಮೀ ‌ಯೋಜನೆಗೆ ನೋಂದಣಿ ಬಗ್ಗೆ ಪರಿಶೀಲನೆ ನಡೆಸಿದರು. ಹೌದು, ಪ್ರತಿ ಜಿಲ್ಲೆಯಿಂದಲೂ ಈ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಈ ಹಿನ್ನಲೆ ರಾಜ್ಯದ ಎಲ್ಲಾ ಜಿಲ್ಲೆಗಳ ಸಿಡಿಪಿಒ(CDPO) ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲೇ 14 ಸಾವಿರ ‘ಗೃಹಲಕ್ಷ್ಮೀ’ ಅರ್ಜಿ ಬಾಕಿ

ಇನ್ನು ಇದೆ ವೇಳೆ ಮಾತನಾಡಿದ ಅವರು ‘ಕಲಬುರಗಿ ಜಿಲ್ಲೆಯಲ್ಲೇ 14 ಸಾವಿರ ‘ಗೃಹಲಕ್ಷ್ಮೀ’ ಅರ್ಜಿ ಬಾಕಿ ಇರುವುದು ತಿಳಿದುಬಂದಿದೆ. ಕೂಡಲೇ ಕಲಬುರಗಿ ಸಿಡಿಪಿಒಗೆ ತರಾಟೆ ತೆಗೆದುಕೊಂಡ  ಸಚಿವೆ ‘ಆದಷ್ಟು ಬೇಗ ಅರ್ಜಿಯನ್ನು ವಿಲೇವಾರಿ ‌ಮಾಡಲು ಏನು ಸಮಸ್ಯೆ?, ಏಕೆ ಇಷ್ಟು ಅರ್ಜಿ ಬಾಕಿ ಇದೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ವಾರದೊಳಗೆ ಅರ್ಜಿ ವಿಲೇವಾರಿ ಮಾಡುವುದಾಗಿ CDPO ಮಾಹಿತಿ ನೀಡಿದ್ದಾರೆ. ಇನ್ನು ಸಭೆಯಲ್ಲಿ ಮಕ್ಕಳ ಅಭಿವೃದ್ಧಿ ಇಲಾಖೆಯ ಆಯುಕ್ತೆ ಅರ್ಚನ ಹಾಗೂ ಬೆಂಗಳೂರು ಒನ್ ನಿರ್ದೇಶಕ ದಿಲೀಶ್ ಶಶಿ ಭಾಗಿಯಾಗಿದ್ದಾರೆ. ಜೊತೆಗೆ ಒಂದೊಂದು ಜಿಲ್ಲೆಯ ಮಾಹಿತಿಯನ್ನು ಪಡೆಯುತ್ತಿದ್ದಾರೆ.

ಇದನ್ನೂ ಓದಿ:ಗೃಹಲಕ್ಷ್ಮೀ ಹಣ ಜಮೆಯಾಗಿಲ್ಲವಾ? ಎಲ್ಲಾ ಗೊಂದಲಕ್ಕೆ ತೆರೆ ಎಳೆದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

15 ದಿನದೊಳಗೆ ಎಲ್ಲರ ಬ್ಯಾಂಕ್​​ ಖಾತೆಗೆ ಗೃಹಲಕ್ಷ್ಮೀ ಹಣ ಬರಲಿದೆ

ಗೃಹಲಕ್ಷ್ಮಿ ಯೋಜನೆಯನ್ನು ಜಾರಿ ಮಾಡಿದ ಮೇಲೆ ಮಹಿಳೆಯರಿಗೆ ಉಪಯೋಗವಾಗಿತ್ತಿದೆ. ಆಗಸ್ಟ್ 1.8 ಕೋಟಿ‌ ಜನ ಮಹಿಳೆಯರು, ಸೆಪ್ಟೆಂಬರ್ ತಿಂಗಳಲ್ಲಿ 1.14 ರಷ್ಟು ಜನ ರಿಜಿಸ್ಟರ್ ಮಾಡಿಕೊಂಡಿದ್ದರೆ, ಅಕ್ಟೋಬರ್ ತಿಂಗಳಲ್ಲಿ 1.16 ರಷ್ಟು ಮಹಿಳೆಯರಿಗೆ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಇನ್ನು ತಾಂತ್ರಿಕ ಸಮಸ್ಯೆಯಿಂದಾಗಿ ಮಹಿಳೆಯರ ಖಾತೆಗೆ ಹಣ ಹೋಗಿಲ್ಲ, ಇದರ ಜೊತೆಗೆ ಆಧಾರ್ ಲಿಂಕ್ ಆಗದಿರುವುದಕ್ಕೆ ಸಮಸ್ಯೆ ಆಗುತ್ತಿದೆ. ಹೀಗಾಗಿ ಇಂದು ತಾಂತ್ರಿಕ ಸಮಸ್ಯೆಗಳ ಕುರಿತು ಮಾಹಿತಿ ಪಡೆದಿದ್ದೇನೆ. ಇನ್ನು 15 ದಿನದೊಳಗೆ ಎಲ್ಲರ ಬ್ಯಾಂಕ್​​ ಖಾತೆಗೆ ಗೃಹಲಕ್ಷ್ಮೀ ಹಣ ಹೋಗಲಿದೆ ಎಂದರು.

ಮೂರು ತಿಂಗಳ ಹಣ ಬಂದಿಲ್ಲ ಅಂದ್ರೆ ಒಟ್ಟಿಗೆ ಆರು ಸಾವಿರ ಸಿಗಲಿದೆ

ಇದೇ ವೇಳೆ 5 ಲಕ್ಷ ಫಲಾನುಭವಿಗಳಿಗೆ ಗೃಹ ಲಕ್ಷ್ಮೀ ಹಣ ಹೋಗಿಲ್ಲ ಎಂದ ಲಕ್ಷ್ಮೀ ಹೆಬ್ಬಾಳ್ಕರ್​ ‘ ಸೆಪ್ಟೆಂಬರ್ ತಿಂಗಳಿನಲ್ಲಿ 2,288 ಕೋಟಿ ರೂಪಾಯಿ, ಅಕ್ಟೋಬರ್ ತಿಂಗಳಿನಲ್ಲಿ 2,400 ಕೋಟಿ ಹಣ ಬಿಡುಗಡೆಯಾಗಿದೆ. ಆದ್ರೆ, 12 ಲಕ್ಷ ಜನರಿಗೆ ದುಡ್ಡು ಹೋಗಿಲ್ಲ, ಬ್ಯಾಂಕ್ ಖಾತೆಯಲ್ಲೇ ಇದೆ. ದೀಪಾವಳಿಗೆ ಎಲ್ಲರ ಖಾತೆಗೂ ಹಣ ಹೋಗಬೇಕೆಂದು ಸಿಎಂ ಹೇಳಿದ್ದಾರೆ. 15 ದಿನದೊಳಗೆ ಎಲ್ಲರ ಖಾತೆಗೆ ಹಣ ಬರಲಿದೆ. 3 ತಿಂಗಳ ಹಣ ಬಂದಿಲ್ಲ ಅಂದರೆ, ಒಟ್ಟಿಗೆ 6 ಸಾವಿರ ರೂಪಾಯಿ ಸಿಗುತ್ತೆ ಎಂದು ಬೆಂಗಳೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೇಳಿದರು. ಇದರ ಜೊತೆಗೆ ‘1902’ ಹೆಲ್ಪ್ ಲೈನ್ ನಂಬರ್​ ಇದ್ದು, ಇದಕ್ಕೆ ಕೆರೆಮಾಡಿ ಮಹಿಳೆಯರು ಮಾಹಿತಿಯನ್ನ ಪಡೆದುಕೊಳ್ಳಬಹುದು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:48 pm, Wed, 8 November 23