ನಮ್ಮ ಕಾನೂನು ಡ್ರಗ್ಸ್ ಹಾವಳಿಯನ್ನು ತಡೆಯುವಷ್ಟು ಶಕ್ತವಾಗಿಲ್ಲ: ಹ್ಯಾರಿಸ್

  • Publish Date - 2:34 pm, Thu, 3 September 20
ನಮ್ಮ ಕಾನೂನು ಡ್ರಗ್ಸ್ ಹಾವಳಿಯನ್ನು ತಡೆಯುವಷ್ಟು ಶಕ್ತವಾಗಿಲ್ಲ: ಹ್ಯಾರಿಸ್
ಕಾಂಗ್ರೆಸ್​ ಶಾಸಕ ಎನ್​.ಎ ಹ್ಯಾರಿಸ್

ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ವ್ಯಾಪಕವಾಗಿ ಹಬ್ಬಿದಂತಿರುವ ಡ್ರಗ್ಸ್ ಹಾವಳಿಯ ಬಗ್ಗೆ ರಾಜಕೀಯ ನಾಯಕರು ಪ್ರತಿಕ್ರಿಯಿಸಲಾರಂಭಿಸಿದ್ದಾರೆ. ವಿರೋಧ ಪಕ್ಷದವರು ಸರಕಾರದ ವೈಫಲ್ಯವೆಂದು ವ್ಯಾಖ್ಯಾನಿಸಿದರೆ, ಆಡಳಿತ ನಡೆಸುತ್ತಿರುವವರು ಪ್ರತಿಪಕ್ಷದ ನಾಯಕರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಇಂದು ಬೆಂಗಳೂರಿನಲ್ಲಿ ಈ ಬಗ್ಗೆ ಮಾತಾಡಿದ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್, ಡ್ರಗ್ಸ್ ದಂಧೆಯನ್ನು ಬೇರಿನಿಂದ ಕಿತ್ತುಹಾಕುವ ಬಲಾಢ್ಯತೆ ನಮ್ಮ ಕಾನೂನಿಗಿಲ್ಲ ಎಂದು ಹೇಳಿದರು.

‘‘ನಿರ್ದೇಶಕ ಇಂದ್ರಜಿತ್ ಲಂಕೇಶ್‌ಗೆ ನಮ್ಮ ಬೆಂಬಲವಿದೆ, ಅವರು ನೀಡಿರುವ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಸಮಗ್ರವಾಗಿ ತನಿಖೆ ನಡೆಸಲಿ, ಬಿಸಿಯಾರುವವರೆಗೆ ತನಿಖೆ ನಡೆಸಿ ನಂತರ ಸಮ್ಮನಾದರೆ ಅದರಿಂದ ಏನೇನೂ ಪ್ರಯೋಜನವಿಲ್ಲ,’’ ಎಂದು ಹ್ಯಾರಿಸ್ ಹೇಳಿದರು.

ಡ್ರಗ್ಸ್ ದಂಧೆ ಕಡಿವಾಣಕ್ಕೆ ಪ್ರಬಲವಾದ ಕಾನೂನು ಬೇಕು ಆಗ ಮಾತ್ರ ಡ್ರಗ್ಸ್ ಮಾಫಿಯಾ ಹಾವಳಿ ತಡೆಯಬಹುದು ಇಲ್ಲದಿದ್ದರೆ ಪೊಲೀಸರು ಶ್ರಮವಹಿಸಿ ನಡೆಸುವ ತನಿಖೆ ವ್ಯರ್ಥವಾಗುತ್ತದೆ ಎಂದು ಹ್ಯಾರಿಸ್ ಹೇಳಿದರು.

Click on your DTH Provider to Add TV9 Kannada