ಇನ್ನೂ ನಾಲ್ಕು ಮೊಟ್ಟೆ ಹೊಡೀರಿ, ಜನರನ್ನು ನೆಮ್ಮದಿಯಾಗಿ ಬದುಕಲು ಬಿಡಿ: ಡಿ.ಕೆ.ಶಿವಕುಮಾರ್
ನೀವು ತೋರಿಸಿಕೊಟ್ಟಂತೆ ನಮ್ಮವರು ಮಾಡಿದ್ರೆ ಹೇಗಿರುತ್ತೆ? ನಮ್ಮ ನಾಯಕರಿಗೆ ಮೊಟ್ಟೆ ಎಸೆದ ಜಾಗದಲ್ಲೇ ಧಿಕ್ಕಾರ ಕೂಗ್ತೇವೆ ಎಂದು ಹೇಳಿದರು.
ಬೆಂಗಳೂರು: ಯಾರೋ ಮೊಟ್ಟೆ (eggs) ಹೊಡೆದ ಧಿಕ್ಕಾರ ಹಾಕಿದ ಅನ್ನೋದು ಮುಖ್ಯ ಅಲ್ಲ. ನಾಡಿನ ಜನತೆಗೆ ನಾವು ಏನು ಕೊಟ್ವಿ ಅನ್ನೋದು ಮುಖ್ಯ. ಸಿದ್ದರಾಮಯ್ಯ ವಿಪಕ್ಷದ ನಾಯಕರು, ಹಳ್ಳಿಗಳಿಗೆ ಹೋಗಿ ಸಮಸ್ಯೆ ಆಲಿಸೋದು ಅವರ ಕೆಲಸ. ಅದನ್ನು ಮಾಡಬೇಡಿ ಅಂತ ಮೊಟ್ಟೆ ಹೊಡಿದ್ರೆ ಹೇಗೆ ಎಂದು ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು. ಮೊಟ್ಟೆಯಲ್ಲಿ ಹೊಡೆದ್ರಿ ಅಂತ ನಮಗೆ ಬೇಜಾರಿಲ್ಲ. ಇನ್ನೂ ನಾಲ್ಕು ಮೊಟ್ಟೆ ಹೊಡೀರಿ. ಮೊದಲು ಜನರನ್ನು ನೆಮ್ಮದಿಯಾಗಿ ಬದುಕಲು ಬಿಡಿ. ಕೊಡಗು ಜಿಲ್ಲೆಯಲ್ಲಿ ಮಳೆ, ಪ್ರವಾಹದಿಂದ ಸಮಸ್ಯೆ ಆಗಿದೆ. ಅದನ್ನು ವೀಕ್ಷಿಸಲು ಸಿದ್ದರಾಮಯ್ಯ ಕೊಡಗಿಗೆ ಹೋಗಿದ್ದಾರೆ. ಕೊರೊನಾದಿಂದ ಜನ ಸಂಕಷ್ಟದಲ್ಲಿದ್ದಾರೆ. ಇಂತಹ ಘಟನೆಗಳಿಂದ ಕೊಡಗು ಪ್ರವಾಸೋದ್ಯಮಕ್ಕೆ ತೊಂದರೆಯಾಗಿದೆ. ಶಿವಮೊಗ್ಗ ಬಳಿಕ ಈಗ ಕೊಡಗಿನಲ್ಲೂ ಪ್ರವಾಸೋದ್ಯಮಕ್ಕೆ ಧಕ್ಕೆಯಾಗಿದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದರು.
ಇದನ್ನೂ ಓದಿ: Pramod Muthalik: ಸಿದ್ದರಾಮಯ್ಯ ಮಾಂಸ ಸೇವನೆ ಚರ್ಚೆಯ ವಿಷಯವೇ ಅಲ್ಲ; ಪ್ರಮೋದ್ ಮುತಾಲಿಕ್
ನೀವು ಮಾಡಿದಂತೆ ನಮ್ಮವರು ಮಾಡಿದ್ರೆ ಹೇಗಿರುತ್ತೆ?
ನಮಗೆ ಎಸ್ಪಿ ಮುಖ್ಯ ಅಲ್ಲ, ಎಸ್ಪಿ ಸುಮ್ಮನೇ ನೆಪಕ್ಕಷ್ಟೇ. ರಾಜ್ಯ ಸರ್ಕಾರ ನಾಯಕರಿಗೆ ರಕ್ಷಣೆ ಕೊಡೋದು ಮುಖ್ಯ. ನಿಮ್ಮ ಗುಪ್ತಚರ ಇಲಾಖೆ ಏನಾಗಿತ್ತು. ಎಲ್ಲ ಕಡೆ ನಿಮ್ಮ ಮಂತ್ರಿಗಳು ಕಾರ್ಯಕ್ರಮಕ್ಕೆ ಹೊರಟಿದ್ದೀರ. ನೀವು ತೋರಿಸಿಕೊಟ್ಟಂತೆ ನಮ್ಮವರು ಮಾಡಿದ್ರೆ ಹೇಗಿರುತ್ತೆ? ನಮ್ಮ ನಾಯಕರಿಗೆ ಮೊಟ್ಟೆ ಎಸೆದ ಜಾಗದಲ್ಲೇ ಧಿಕ್ಕಾರ ಕೂಗ್ತೇವೆ ಎಂದು ಹೇಳಿದರು.
ಈ ವಿಚಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಉತ್ತರಿಸಬೇಕು
ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ ಅಂಟಿಸಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಈ ವಿಚಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಉತ್ತರಿಸಬೇಕು. ರಾಜ್ಯದಲ್ಲಿ ಶಾಂತಿ ಕಾಪಾಡುವುದು ಸಿಎಂ ಬೊಮ್ಮಾಯಿ ಕೆಲಸ. ನಮಗೆ ಪ್ರಚೋದನಕಾರಿ ಹೇಳಿಕೆ ನೀಡಲು ಇಷ್ಟ ಇಲ್ಲ. ಮಹಾತ್ಮ ಗಾಂಧಿ ನಮಗೆ ಶಾಂತಿಯ ಬಗ್ಗೆ ಹೇಳಿಕೊಟ್ಟಿದ್ದಾರೆ. ಮಾಜಿ ಪ್ರಧಾನಿ ನೆಹರು ಫೋಟೋವನ್ನೇ ಇವರು ಬಿಟ್ಟಿದ್ದಾರೆ. ಮುಂದೆ ಬಿಜೆಪಿಯವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.
ಇಂದು ಭಾರತ್ ಜೋಡೋ ಯಾತ್ರೆ ಬಗ್ಗೆ ರಾಹುಲ್ ಗಾಂಧಿ ಚರ್ಚೆ
ಇನ್ನೂ ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡಿದ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇಂದು ಎಐಸಿಸಿಯಿಂದ ರಾಹುಲ್ ಗಾಂಧಿಯವರು ಭಾರತ್ ಜೋಡೋ ವಿಚಾರವಾಗಿ ಚರ್ಚೆ ಆಗುತ್ತಿದೆ. ಹರಿಪ್ರಸಾದ್ ಮುಖಂಡತ್ವದಲ್ಲಿ ಈ ಕಾರ್ಯಕ್ರಮ ನಡೆಸಲಾಗ್ತಿದೆ. ಪ್ರತಿ ದಿನ ಎಷ್ಟು ಕಿಮೀ ನಡೆಯಬೇಕು ಅಂತ ಚರ್ಚೆ ಮಾಡಲಾಗ್ತಿದೆ. ಸೆ7 ನೇ ತಾರೀಕು ರಾಜೀವ್ ಗಾಂಧಿಯವರ ಸಮಾಧಿಗೆ ನಮಿಸಿ ನಂತರ ಕನ್ಯಾ ಕುಮಾರಿಯಿಂದ ಪಾದಯಾತ್ರೆ ಮಾಡಲಾಗ್ತಿದೆ. ನಮ್ಮ ರಾಜ್ಯದಲ್ಲಿ 511 ಕಿಮೀ ನಡಿಗೆ ಆಗಲಿದೆ. ಕೆಲವು ಕಡೆ ಫಾರೆಸ್ಟ್ ಇದೆ ಹೀಗಾಗಿ ಪೊಲೀಸರೊಂದಿಗೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುತ್ತದೆ.
21 ದಿನ ನಮ್ಮ ರಾಜ್ಯದಲ್ಲಿ ಪಾದಯಾತ್ರೆ ಇರಲಿದೆ. ನಾವು ಪೂರ್ಣ ಯೋಜನೆ ಬಗ್ಗೆ ತಿಳಿಸುತ್ತೇನೆ. ಚಿತ್ರದುರ್ಗ, ತುಮಕೂರು, ಮೈಸೂರು, ಮಂಡ್ಯ ನಾನು ಖುದ್ದಾಗಿ ಹೋಗಿದ್ದೇನೆ. ಸಮಯವನ್ನು ದೆಹಲಿಯವರು ತೀರ್ಮಾನ ಮಾಡ್ತಾರೆ. ಈ ದೇಶದಲ್ಲಿ ಶಾಂತಿ ಸೌಹಾರ್ದತೆ ಆಗಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಗುತ್ತಿದೆ. ಈ ದೇಶ ಯಾವ ರೀತಿ ಮುಂದೆ ತೆಗದುಕೊಂಡು ಹೋಗಬೇಕು ಎಂಬುದು ಇದರ ಉದ್ದೇಶ. ಜನರ ಪ್ರೋತ್ಸಾಹ ಚೆನ್ನಾಗಿದೆ. ಪೊಲಿಟಿಕಲ್ ಅಫೈರ್ ಮೀಟಿಂಗ್ ಕರೆಯಲಾಗುತ್ತದೆ. ಆಗ ಎಲ್ಲಾ ವಿಚಾರ ಚರ್ಚೆ ಮಾಡಿ ಅಂತಿಮ ಯೋಜನೆ ರೂಪಿಸುತ್ತೇವೆ ಎಂದು
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:42 pm, Mon, 22 August 22