ಮದ್ಯಪ್ರಿಯರಿಗೆ ಗುಡ್​ನ್ಯೂಸ್ ; ಮದ್ಯ ಮಾರಾಟ ನಿಷೇಧ ಅವಧಿ ಇಳಿಕೆ!

| Updated By: ರಮೇಶ್ ಬಿ. ಜವಳಗೇರಾ

Updated on: Feb 14, 2024 | 3:04 PM

ಕರ್ನಾಟಕ ವಿಧಾನ ಪರಿಷತ್‌ನ ಶಿಕ್ಷಕರ ಕ್ಷೇತ್ರದ ಉಪಚುನಾವಣೆ (MLC Election Ny Election) ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಅಂದರೆ 48 ಗಂಟೆ ಬೆಂಗಳೂರಿನಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಿದ್ದ ಆದೇಶವನ್ನು ಸರ್ಕಾರ ಹಿಂಪಡೆದುಕೊಂಡಿದೆ. ಕೋರ್ಟ್​ ಸೂಚನೆ ಮೇರೆಗೆ 48 ಗಂಟೆ ಬದಲಿಗೆ ಮತದಾನ ದಿನಕ್ಕೆ ಸೀಮಿತವಾಗಿ ಕೇವಲ 18 ಗಂಟೆಗಳಿಗೆ ಇಳಿಸಿದೆ.

ಮದ್ಯಪ್ರಿಯರಿಗೆ ಗುಡ್​ನ್ಯೂಸ್ ; ಮದ್ಯ ಮಾರಾಟ ನಿಷೇಧ ಅವಧಿ ಇಳಿಕೆ!
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ
Follow us on

:ಬೆಂಗಳೂರು, (ಫೆಬ್ರವರಿ 14): ವಿಧಾನ ಪರಿಷತ್‌ನ ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು (ಫೆಬ್ರವರಿ 14) ಸಂಜೆ 6 ಗಂಟೆಯಿಂದ ಬೆಂಗಳೂರಿನಲ್ಲಿ ಮದ್ಯ ಮಾರಾಟ ನಿಷೇಧ ಆದೇಶವನ್ನು ಹಿಂಪಡೆಯಲಾಗಿದ್ದು, ಇಂದಿನಿಂದ 48 ಗಂಟೆ ಬದಲಾಗಿ 18 ಗಂಟೆ ಮಾತ್ರ ಅಂದರೆ ಮತದಾನ ನಡೆಯುವ ದಿನ ಫೆಬ್ರವರಿ 16ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಮಾತ್ರ ಮದ್ಯ ಮಾರಾಟ ನಿರ್ಬಂಧಿಸಿ ಹೊಸ ಆದೇಶ ಹೊರಡಿಸಲಾಗಿದೆ.

ಫೆಬ್ರವರಿ 16ರಂದು ನಡೆಯಲಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ (Excise department) ಫೆಬ್ರವರಿ 14ರ ಸಂಜೆ ಆರು ಗಂಟೆಯಿಂದಲೇ ಮದ್ಯ ಮಾರಾಟವನ್ನು ನಿಷೇಧಿಸಿತ್ತು. ಫೆಬ್ರವರಿ 14ರಿಂದ ಫೆಬ್ರವರಿ 16ರಂದು ಚುನಾವಣೆ ಮುಗಿಯುವ ವರೆಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಆದೇಶದಲ್ಲಿ ಸೂಚಿಸಿತ್ತು. ಈ ನಡುವೆ ಕೆಲವು ರೆಸ್ಟೋರೆಂಟ್‌ ಮಾಲೀಕರು (Restuarant Owners) ಇದು ಕಾನೂನುಬಾಹಿರ ನಿಯಮ ಎಂದು ಹೈಕೋರ್ಟ್​ ಮೆಟ್ಟಿಲೇರಿದ್ದರು.

. ಇದು ವಿದ್ಯಾವಂತರ ಚುನಾವಣೆಯಾಗಿದೆ.ಹಾಗೇ ಕೆಲವೇ ಸಾವಿರ ಮತದಾರರು ಇದ್ದಾರೆ. ಹೀಗಾಗಿ ಮದ್ಯ ಮಾರಾಟ ಮಾಡಿದರೆ ಏನು ತೊಂದರೆಯಾಗುವುದಿಲ್ಲ. ಎರಡು ದಿನ ನಿಷೇಧಿಸಿದರೆ ಭಾರೀ ನಷ್ಟ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಆದೇಶವನ್ನು ಮಾರ್ಪಾಡು ಮಾಡಲು ಸೂಚಿಸುವಂತೆ ಹೈಕೋರ್ಟ್​ಗೆ ಮನವಿ ಮಾಡಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ 48 ಗಂಟೆ ಅಂದರೆ ಫೆ. 14ರ ಸಂಜೆ ಬದಲಾಗಿ ಮತದಾನ ದಿನ ಅಂದರೆ ಫೆ.16ರಂದು ಮತದಾನದ ದಿನ ಮತ್ತು ಎಣಿಕೆ‌‌ ದಿನದಂದು ಮಾತ್ರ ಮದ್ಯ ಮಾರಾಟ ನಿರ್ಬಂಧ ವಿಧಿಸಿದರೆ ಸಾಕು ಎಂದು ಹೈಕೋರ್ಟ್‌ ಸೂಚಿಸಿದೆ.

ಮತದಾನ ನಡೆಯುವ ಫೆ.16ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಮದ್ಯ ಮಾರಾಟ‌ ನಿರ್ಬಂಧ ಮಾಡಬಹುದು. ಮತ ಎಣಿಕೆ ನಡೆಯುವ ಫೆ. 20ರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿರ್ಬಂಧ ವಿಧಿಸಬಹುದು ಎಂದು ನ್ಯಾ. ಎಸ್.ಆರ್. ಕೃಷ್ಣ ಕುಮಾರ್ ರಿದ್ದ ಹೈಕೋರ್ಟ್ ಪೀಠ ಮಧ್ಯಂತರ ಆದೇಶ ನೀಡಿದೆ. ಕೋರ್ಟ್​ ಆದೇಶ ಬೆನ್ನಲ್ಲೇ ಸರ್ಕಾರ ತನ್ನ ಆದೇಶವನ್ನು ಮಾರ್ಪಾಡು ಮಾಡಿದ್ದು, 18 ಗಂಟೆ ಅಂದರೆ ಮತದಾನ ದಿನ (ಫೆ.16) ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಮದ್ಯ ಮಾರಾಟವನ್ನ ನಿಷೇಧಿಸಿ ಹೊಸ ಆದೇಶವನ್ನು ಹೊರಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:16 pm, Wed, 7 February 24