ಬೆಂಗಳೂರಿನ ದೊಡ್ಡಗುಂಟಾದಲ್ಲಿ ದಸರಾ ಮಹೋತ್ಸವ; ಮದ್ಯ ಮಾರಾಟ ಬಂದ್, ನಿಷೇಧಾಜ್ಷೆ ಜಾರಿ
ಬೆಂಗಳೂರಿನ ಪುಲಕೇಶಿನಗರ ವ್ಯಾಪ್ತಿಯ ದೊಡ್ಡಗುಂಟಾದಲ್ಲಿ ದಸರಾ ಹಬ್ಬ ಆಚರಣೆಯನ್ನು ಅದ್ದೂರಿಯಾಗಿ ಕಳೆದ ರಾತ್ರಿ ನಡೆಸಲಾಗಿದೆ. ಇಂದು ದಿನ ಪೂರ್ತಿ ಉತ್ಸವ ಹಾಗು ಇತರ ಪೂಜಾ ಕಾರ್ಯಗಳು ಇರಲಿವೆ. ಜೊತೆಗೆ ಸಾಮೂಹಿಕ ವಿವಾಹವನ್ನು ಸಹ ಕಾನ್ಸ್ ಟೌನ್ ನಲ್ಲಿ ನಡೆಸಲಾಗುತ್ತದೆ. ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಪೊಲೀಸ್ ಆಯುಕ್ತ ದಯಾನಂದ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು, ನ.05: ಬೆಂಗಳೂರಿನ ದೊಡ್ಡಗುಂಟಾದಲ್ಲಿ ದಸರಾ (Dasara) ಮಹೋತ್ಸವ ಹಿನ್ನೆಲೆ ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಪೊಲೀಸ್ ಆಯುಕ್ತ ದಯಾನಂದ (Police Commissioner B Dayanand) ಆದೇಶ ಹೊರಡಿಸಿದ್ದಾರೆ. ಇಂದು (ನ.05) ಸಂಜೆ 6 ಗಂಟೆಯವರೆಗೆ 144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ಹಾಗೂ ಪುಲಿಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಇಲ್ಲಿ ನಡೆಯುವ ದಸರಾ ಹಬ್ಬದ ಪಲ್ಲಕ್ಕಿ ಉತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ. ಅಲ್ಲದೆ ಕೆಲ ಕಿಡಿಗೇಡಿಗಳು ಮದ್ಯ ಸೇವಿಸಿ ಕಿರಿಕ್ ಮಾಡಬಹುದು ಎಂಬ ಹಿನ್ನೆಲೆ 144 ಸೆಕ್ಷನ್ ಜಾರಿ ಮಾಡಲಾಗಿದೆ. ಇಲ್ಲಿ ಮುಸ್ಲಿಂ ಸಂಖ್ಯೆ ಹೆಚ್ಚಿರುವ ಕಡೆಗಳಲ್ಲಿ ಕೋಮು ಗಲಭೆ ಉಂಟಾಗಬಹುದು ಎಂದು ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆಯು ನಿಷೇಧಾಜ್ಷೆ ಜಾರಿಗೊಳಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. ಶನಿವಾರ ಬೆಳಗ್ಗೆ 6 ಗಂಟೆಯಿಂದ ಭಾನುವಾರ ಸಂಜೆ 5 ಗಂಟೆಯವರೆಗೆ 144 ಸೆಕ್ಷನ್ ಜಾರಿಯಲ್ಲಿ ಇರಲಿದೆ. ದಸರಾ ಪಲ್ಲಕ್ಕಿ ಉತ್ಸವ ಪೂರ್ಣಗೊಳ್ಳುವವರೆಗೂ ಪುಲಿಕೇಶಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧ, ಅನ್ಯ ಕೋಮಿನ ಜನರು ಗುಂಪು ಗೂಡುವುದನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: ದಸರಾ ಕಲಾವಿದರ ಚೆಕ್ ಬೌನ್ಸ್: ಕಾಂಗ್ರೆಸ್ಗೆ ಇನ್ನೂ ಬುದ್ಧಿ ಬಂದಿಲ್ಲ ಎಂದ ಬಿಜೆಪಿ
ಬೆಂಗಳೂರಿನ ಪುಲಕೇಶಿನಗರ ವ್ಯಾಪ್ತಿಯ ದೊಡ್ಡಗುಂಟಾದಲ್ಲಿ ದಸರಾ ಹಬ್ಬ ಆಚರಣೆಯನ್ನು ಅದ್ದೂರಿಯಾಗಿ ಕಳೆದ ರಾತ್ರಿ ನಡೆಸಲಾಗಿದೆ. ಕಳೆದ ಅರವತ್ತು ವರ್ಷಗಳಿಂದ ಪುಲಕೇಶಿನಗರದ ಕಾಕ್ಸ್ ಟೌನ್ ನಲ್ಲಿ ದಸರ ನಡೆಸಲಾಗುತ್ತದೆ. ಮೈಸೂರು ದಸರಾ ನಡೆದ ಒಂದು ವಾರಕ್ಕೆ ಇಲ್ಲಿ ದಸರಾ ಹಬ್ಬ ನಡೆಯುತ್ತೆ. ಮೆರವಣಿಗೆಯಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ತೇರುಗಳು ಇಲ್ಲಿ ಸಾಗುತ್ತವೆ. ಏರಿಯಾದಲ್ಲಿ ಕಳೆದ ರಾತ್ರಿ ಹಬ್ಬ ಜೋರಾಗಿತ್ತು. ತೇರುಗಳನ್ನು ಸಿಂಗಾರ ಮಾಡಿ ಮೆರೆವಣಿಗೆ ಮಾಡಲಾಗಿದೆ. ಸೇರಿದ್ದ ಜನರು ಡೋಲು ಮತ್ತು ಬ್ಯಾಂಡ್ ಸೆಟ್ ಗೆ ಭರ್ಜರಿ ಸ್ಟೆಪ್ ಹಾಕ್ತಿದ್ರು. ಇನ್ನು ಇಂದು ದಿನ ಪೂರ್ತಿ ಉತ್ಸವ ಹಾಗು ಇತರ ಪೂಜಾ ಕಾರ್ಯಗಳು ಇರಲಿವೆ. ಜೊತೆಗೆ ಸಾಮೂಹಿಕ ವಿವಾಹವನ್ನು ಸಹ ಕಾನ್ಸ್ ಟೌನ್ ನಲ್ಲಿ ನಡೆಸಲಾಗುತ್ತದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ