AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: 1 ವಾರದಲ್ಲಿ 24 ವರ್ಷದ ಹಿಂದಿನ ಹಳೆ ಪ್ರಕರಣ ಸೇರಿದಂತೆ 20 ಕೇಸ್​ಗಳು ಪತ್ತೆ

ಪೊಲೀಸರು ಒಟ್ಟು 20 ಹಳೆಯ ಪ್ರಕರಣಗಳನ್ನ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ. ಪತ್ತೆ ಹಚ್ಚಿದ ಪ್ರಕರಣಗಳ ಮೇಲೂ ಪೊಲೀಸ್ ಕಮಿಷನರ್ ಬಿ ದಯಾನಂದ್ ಕಣ್ಣಿಟ್ಟಿದ್ದಾರೆ. ಇಷ್ಟು ದಿನ ಯಾಕೆ ಬಂಧನ ಮಾಡಿಲ್ಲ ಎಂಬುದರ ಬಗ್ಗೆ ಪೂರ್ವಾಪರ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರು: 1 ವಾರದಲ್ಲಿ 24 ವರ್ಷದ ಹಿಂದಿನ ಹಳೆ ಪ್ರಕರಣ ಸೇರಿದಂತೆ 20 ಕೇಸ್​ಗಳು ಪತ್ತೆ
ಬೆಂಗಳೂರು ನಗರ ಪೊಲೀಸ್​ ಕಮೀಷನರ್​
Jagadish PB
| Updated By: ವಿವೇಕ ಬಿರಾದಾರ|

Updated on: Nov 05, 2023 | 8:23 AM

Share

ಬೆಂಗಳೂರು ನ.05: ಬೆಂಗಳೂರು ನಗರ ಪೊಲೀಸ್ (Bengaluru City Police) ಆಯುಕ್ತ ಬಿ.ದಯಾನಂದ್ (B Dayananda)​ ಖಡಕ್​ ಸೂಚನೆ ಬೆನ್ನೆಲ್ಲೆ ಎಚ್ಚೆತ್ತ ನಗರ ಪೊಲೀಸರು ಪತ್ತೆ ಆಗದೆ ಮೂಲೆಯಲ್ಲಿ ದೂಳು ಹಿಡಿದಿದ್ದ ಪ್ರಕರಣಗಳನ್ನು ರಿ ಓಪನ್​ ಮಾಡಲಾಗಿದೆ. ವರ್ಷಾನುಗಟ್ಟಲೇ ಪತ್ತೆಯಾಗದ ಹಳೆಯ ಪ್ರಕರಣಗಳು ಒಂದೇ ವಾರದಲ್ಲಿ 20 ಪತ್ತೆಯಾಗಿವೆ. ಈ ಎಲ್ಲ ಪ್ರಕರಣಗಳನ್ನು ಪತ್ತೆ ಹಚ್ಚಿ, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. 15, 20, 24 ವರ್ಷದ ಹಳೇ ಪ್ರಕರಣಗಳನ್ನು ಕೂಡ ರಿ ಓಪನ್​ ಮಾಡಲಾಗಿದೆ.

ಈ ವಾರದಲ್ಲಿ ಪತ್ತೆಯಾದ ಹಳೇ ಪ್ರಕರಣಗಳು ಹೀಗಿವೆ

ಕೇಸ್ ನಂ1: 2015ರಲ್ಲಿನ ಅತ್ಯಾಚಾರ ಪ್ರಕರಣದ ಆರೋಪಿ ಜಿಬ್ರಾನ್ ಪಾಷ್​​ನನ್ನು ಸುದ್ದುಗುಂಟೆಪಾಳ್ಯ ಠಾಣೆ ಪೊಲೀಸರು 9 ವರ್ಷಗಳ ಬಳಿಕ ಬಂಧಿಸಿದ್ದಾರೆ.

ಕೇಸ್ ನಂ 2: 2014ರಲ್ಲಿನ ಪೋಕ್ಸೋ ಪ್ರಕರಣದ ಎ2 ಜಯಲಕ್ಷಿ ಎಂಬಾಕೆಯನ್ನು ಒಂಬತ್ತು ವರ್ಷಗಳ ಬಳಿಕ ಸದ್ದುಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಕೇಸ್​ ನಂ 3: 2018ರ ಆರ್​ಟಿ ನಗರದ ವಂಚನೆ ಪ್ರಕರಣದ ಪ್ರಮುಖ ಆರೋಪಿ ಜಾವೀದ್​ನನ್ನು ಆರ್ ಟಿ ನಗರ ಠಾಣೆ ಪೊಲೀಸರು ಐದು ವರ್ಷಗಳ ಬಳಿಕ ಬಂಧಿಸಿದ್ದಾರೆ.

ಕೇಸ್ ನಂ 4: ತಿಲಕ್ ನಗರದ ಮನೆಗಳ್ಳತನದ ಆರೋಪಿ ಜಬಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಕಳೆದ 24 ವರ್ಷಗಳಿಂದ ತಲೆ ಮರೆಸಿಕೊಂಡಿದ್ದನು.

ಕೇಸ್ ನಂ 5: 2018 ರಿಂದ ತಲೆಮರೆಸಿಕೊಂಡಿದ್ದ ಸೈಯದ್ ಮಜಾಫಿರ್ ಅಹಮದ್​​ನನ್ನು ಆಡುಗೋಡಿ ಪೊಲೀಸ್ ಠಾಣೆ ಪೊಲೀಸರು ಐದು ವರ್ಷಗಳಿಂದ ಬಳಿಕ ಬಂಧಿಸಿದ್ದಾರೆ.

ಕೇಸ್ ನಂ 6: ಭಾರತಿ ನಗರದ ಕುಟುಂಬ ಕಲಹ ಪ್ರಕರಣದ ಆರೋಪಿ ಅಶೋಕ್ 2005 ರಿಂದಲೂ ತಲೆಮರೆಸಿಕೊಂಡಿದ್ದು, ಇದೀಗ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಮೈಸೂರು: ನಿವೃತ್ತ ಪೊಲೀಸ್ ಅಧಿಕಾರಿ ಮನೆ ಬಾಡಿಗೆ ಪಡೆದು ವೇಶ್ಯಾವಾಟಿಕೆ ದಂಧೆ

ಕೇಸ್ ನಂ 7: ರಾಮ ಮೂರ್ತಿನಗರದ ಹಲ್ಲೆ ಪ್ರಕರಣದ ಆರೋಪಿ ಮುನಿಯಪ್ಪ 2012 ರಿಂದ ತಲೆಮರೆಸಿಕೊಂಡಿದ್ದು ಇದೀಗ ಪೊಲೀಸರು ಬಂಧಿಸಿದ್ದಾರೆ.

ಕೇಸ್ ನಂ 8: ಹೆಣ್ಣೂರಿನ ಡಕಾಯಿತಿ ಪ್ರಕರಣದ ಆರೋಪಿ ಫಜಿವುಲ್ಲಾ ಎಂಬ ಆರೋಪಿಯನ್ನು ಪೊಲೀಸರು ಬಂಧಸಿದ್ದಾರೆ. ಸುಮಾರು ಏಳು ವರ್ಷಗಳಿಂದ ನಾಪತ್ತೆಯಾಗಿದ್ದನು.

ಕೇಸ್ ನಂ 9: ರಾಜಗೋಪಾಲ ನಗರ ಕೊಲೆ ಬೆದರಿಕೆ ಪ್ರಕರಣದ ಆರೋಪಿ ಕುಮಾರ್​ನನ್ನು ಪೊಲೀಸರು ಬಂಧಿಸಿದ್ದಾರೆ. 2007 ರಿಂದಲೂ ಆರೋಪಿ ತಲೆಮರೆಸಿಕೊಂಡಿದ್ದನು.

ಕೇಸ್ ನಂ 10: 2010 ರಿಂದ ತಲೆಮರೆಸಿಕೊಂಡಿದ್ದ ಮನೆಗಳ್ಳತನ ಪ್ರಕರಣದ ಆರೋಪಿ ಜಾನ್​ನನ್ನು ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಹೀಗೆ ಒಟ್ಟು 20 ಹಳೆಯ ಪ್ರಕರಣಗಳನ್ನ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ. ಪತ್ತೆ ಹಚ್ಚಿದ ಪ್ರಕರಣಗಳ ಮೇಲೂ ಪೊಲೀಸ್ ಕಮಿಷನರ್ ಬಿ ದಯಾನಂದ್ ಕಣ್ಣಿಟ್ಟಿದ್ದಾರೆ. ಇಷ್ಟು ದಿನ ಯಾಕೆ ಬಂಧನ ಮಾಡಿಲ್ಲ ಎಂಬುದರ ಬಗ್ಗೆ ಪೂರ್ವಾಪರ ಪರಿಶೀಲನೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ